ಬೆಂಗಳೂರು: (ಡಿ.11) ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಬೆಂಬಲ ಬೆಲೆ ಯೋಜನೆಯಡಿ 9.97 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಸ್ಥಾಪಿಸಾಲು ಅನುಮೊದನೆ ದೊರತ್ತಿದೆ. ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ತೊಗರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಈ ತಿರ್ಮಾನ ದೊಡ್ಡ ನಿರಾಳತೆ ನೀಡಿದೆ.
ರಾಜ್ಯದ ರೈತರ ಹಿತಕ್ಕಾಗಿ ನನ್ನ ವಿಶೇಷ ಮನವಿಯ ಮೇರೆಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿದ್ದು, ನನಗೆ ಸಂತಸ ತಂದಿದೆ. ಶೀಘ್ರದಲ್ಲಿ NAFED ಮತ್ತು NCCF ಮೂಲಕ MSP ದರದಲ್ಲಿ ತೊಗರಿ ಖರೀದಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಪ್ರಲ್ಹಾದ ಜೋಶಿ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಡಿಸೆಂಬರ್ 4ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದು ತೊಗರಿ ಬೆಲೆ ಕುಸಿತ ಹಾಗೂ ರೈತರ ನಷ್ಟ ಕುರಿತು ತುರ್ತು MSP ಖರೀದಿ ಅಗತ್ಯ ಎಂಬ ವಿಚಾರಗಳನ್ನು ಗಮನಕ್ಕೆ ತಂದಿದ್ದು, ಈ ಮನವಿಗೆ ಉತ್ತರವಾಗಿ ಕೇಂದ್ರ ಕೃಷಿ ಸಚಿವರು ಕೇವಲ 5-6 ದಿನಗಳಲ್ಲೇ ಅನುಮೋದನೆ ನೀಡಿದರು. ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9,67,000 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದಿದ್ದು ಸಾಮಾಜಿಕಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ತೀರ್ಮಾನವು ರಾಜ್ಯದ ರೈತರಿಗೆ ಮಹತ್ತರ ಆರ್ಥಿಕ ಬಲ ನೀಡಲಿದೆ. ಹವಾಮಾನ ವ್ಯತ್ಯಾಸ, ಮಾರುಕಟ್ಟೆ ಕುಸಿತ ಮತ್ತು ಸಾಲದ ಒತ್ತಡ ಎದುರಿಸುತ್ತಿದ್ದ ಈ ಸಮಯದಲ್ಲಿ ರೈತರಿಗೆ ಕೇಂದ್ರದ ಈ ನಿರ್ಧಾರ ಆರ್ಥಿಕವಾಗಿ ಮಹತ್ತರ ಸಹಾಯಕವಾಗಿದೆ ಎಂದು ರಾಜ್ಯದ ರೈತರು ಸಂತಸವನ್ನು ವ್ಯಕ್ತಪಡಿಸಿದ್ದರೆ.


