ರಾಯಲ್ ಫೋರ್ಟ್ ಹೋಟೆಲ್ ನಲ್ಲಿ  ಸುವರ್ಣ ವಸ್ತ್ರ ಆಭರಣ ಪ್ರದರ್ಶನ ಮತ್ತು ಮಾರಾಟ 

Ravi Talawar
ರಾಯಲ್ ಫೋರ್ಟ್ ಹೋಟೆಲ್ ನಲ್ಲಿ  ಸುವರ್ಣ ವಸ್ತ್ರ ಆಭರಣ ಪ್ರದರ್ಶನ ಮತ್ತು ಮಾರಾಟ 
WhatsApp Group Join Now
Telegram Group Join Now
ಬಳ್ಳಾರಿ. ಸೆ. 26:  ಸುವರ್ಣ ವಸ್ತ್ರ ಆಭರಣಗಳ ಪ್ರದರ್ಶನದಲ್ಲಿ ಹಲವಾರು ಬಗೆಯ ವಿವಿಧ ರೀತಿಯ ಚಿನ್ನ ಬೆಳ್ಳಿ ಮತ್ತು ಮಹಿಳೆಯರಿಗೆ ಅತ್ಯಾಕರ್ಷಕವಾದ ಆಭರಣಗಳು ಈ ಪ್ರದೇಶದಲ್ಲಿ ಸಂಗ್ರಹವಿದ್ದು ನಗರದ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಈ ಪ್ರದರ್ಶನಕ್ಕೆ ಭೇಟಿಕೊಟ್ಟು ತಮಗಿಷ್ಟವಾದ ಆಭರಣಗಳನ್ನು ಖರೀದಿಸಿ
ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
 ಅವರು ಇಂದು ನಗರದ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸುವರ್ಣ ವಸ್ತ್ರ ಆಭರಣಗಳ ಕಂಪನಿ ವತಿಯಿಂದ ವಿವಿಧ ಮಾದರಿಯ ವಸ್ತ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿದರು.
 ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ಸುಖತೋಷ್ ಮಾತನಾಡಿ , ಈ ಪ್ರದರ್ಶನದಲ್ಲಿ ಚಿನ್ನ ಬೆಳ್ಳಿ ವಜ್ರ ಮುತ್ತು ಸೇರಿದಂತೆ ವಿವಿಧ ರೀತಿಯ ಹಲವು ಮಾದರಿಯ ಚಿನ್ನಾಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ನಗರದ ಜನತೆ ಅದರಲ್ಲೂ ವಿಶೇಷವಾಗಿ ದಸರಾ ಹಬ್ಬ ವಿಜಯದಶಮಿ ನಿಮಿತ್ತ ಈ ಚಿನ್ನ ಆಭರಣಗಳ ಪ್ರದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ನಗರದ ನಾಗರಿಕರಲ್ಲಿ ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಅಖಿಲ್ ಜಯರಾಮ್ ಸಂಜೀವ್ ಶ್ರೀದೇವಿ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article