ಬೆಂಗಳೂರು/ಹೈದರಾಬಾದ್: ದೇಶದಲ್ಲಿ ಚಿನ್ನದ ದರ ಇಂದು ಮತ್ತೆ ಕೊಂಚ ಏರಿಕೆ ಕಂಡಿದ್ದು, ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ.
ಸೋಮವಾರ 10 ಗ್ರಾಂ ಚಿನ್ನಕ್ಕೆ 89,080 ರೂ ಇದ್ದ ದರ, ಮಂಗಳವಾರ 150 ರೂ ಹೆಚ್ಚಳ ಕಾಣುವ ಮೂಲಕ 89,230 ರೂಗೆ ಏರಿಕೆ ಕಂಡಿದೆ. ಇನ್ನು ಸೋಮವಾರ ಕೆಜಿ ಬೆಳ್ಳಿಗೆ 99,148 ರೂ ಇದ್ದದ್ದು, ಇಂದು 310 ರೂ ಇಳಿಕೆಯೊಂದಿಗೆ 98,838 ರೂ ಗೆ ಕುಸಿತ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ: 99.9 ಪ್ಯೂರಿಟಿಯ 10 ಗ್ರಾಂ ಬಂಗಾರದ ಬೆಲೆ 89233 ರೂ .ದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಒಂದು ಕೇಜಿ ಬೆಳ್ಳಿಗೆ ಇಂದು 97065 ರೂ. ದರವಿದೆ.
ಹೈದರಾಬಾದ್ನಲ್ಲಿ ಫೆ. 25ರಂದು ಚಿನ್ನದ ದರ: 10 ಗ್ರಾಂ ಚಿನ್ನದ ದರ 89,230 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 98.838 ರೂ ಇದೆ.
ಗಮನಿಸಿ: ಇಲ್ಲಿ ಉಲ್ಲೇಖ ಮಾಡಿರುವ ದರಗಳು ಬೆಳಗ್ಗೆ ಮಾರುಕಟ್ಟೆ ಆರಂಭದ ಬೆಲೆಗಳು ಆಗಿದ್ದು, ಇದು ನಂತರದ ಬೆಳವಣಿಗೆಯಲ್ಲಿ ಬದಲಾಗುವ ಸಾಧ್ಯತೆಗಳಿರುತ್ತವೆ ಎಂಬುದು ಗಮನದಲ್ಲಿರಲಿ.
ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಸೋಮವಾರ ಒಂದು ಔನ್ಸ್ ಚಿನ್ನದ ದರ 2,941 ಡಾಲರ್ ಇದ್ದು, ಮಂಗಳವಾರ ಇದರ ದರದಲ್ಲಿ 2 ಡಾಲರ್ ಕುಸಿತದಿಂದ 2,939 ಡಾಲರ್ ದಾಖಲಾಗಿದೆ. ಬೆಳ್ಳಿ ದರ 32.42 ಡಾಲರ್ ದಾಖಲಾಗಿದೆ.
ಷೇರು ಮಾರುಕಟ್ಟೆ: ದೇಶಿ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಸ್ಥಿರವಾಗಿ ಆರಂಭಗೊಂಡಿವೆ. ಮಾರುಕಟ್ಟೆಯಲ್ಲಿ ದುರ್ಬಲ ಸಂಕೇತಗಳ ನಡುವೆ ಹೂಡಿಕೆದಾರರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಏರಿಳಿತ ಕಂಡು ಬಂದಿದೆ. ಐಟಿ ಮತ್ತು ಮೆಟಲ್ ವಲಯದ ಷೇರುಗಳ ಖರೀದಿಯು ಸೂಚ್ಯಂಕಗಳ ಮೇಲೆ ಒತ್ತಡ ಹೆಚ್ಚಿಸಿದೆ