ವಿದ್ಯಾರ್ಥಿಗಳು ಕ್ಯಾಲ್ಕುಲೇಟರ್ಗೆ ಅವಲಂಬಿತರಾಗಬಾರದು – ಭಾಸ್ವರ್ ರಾಯ್
ಹೊಸಪೇಟೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾನ್ಯ ಗಣಿತ ಲೆಕ್ಕಾಚಾರಗಳಿಗೂ ಕ್ಯಾಲ್ಕುಲೇಟರ್ ಹಾಗೂ ಕಂಪ್ಯೂಟರ್ ಅನ್ನು ಅವಲಂಬಿತರಾಗುತ್ತಾರೆ ಇದರಿಂದ ಅವರಿಗೆ ವಿಶ್ಲೇಷಾತ್ಮಕ ಜ್ಞಾನವು ಕುಂಠಿತವಾಗುತ್ತದೆ ಎಂದು ಭಾಸ್ವರ್ ರಾಯ್ ಅಭಿಪ್ರಾಯ ಪಟ್ಟರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ‘ಸಿಂಚನ -2025’ರ ಅಂಗವಾಗಿ ದಿನಾಂಕ 17/5/2025 ಶನಿವಾರದಂದು ಸಂಜೆ 6 ಗಂಟೆಗೆ ಮುಖ್ಯ ಅತಿಥಿಯಾಗಿ ಹೊಸಪೇಟ್ ಸ್ಟ್ರೀಲ್ಸ್ನ ಹಿರಿಯ ಉಪಾಧ್ಯಕ್ಷರಾದ ಶ್ರೀ ಭಾಸ್ವರ್ ರಾಯ್ ಅವರು ಮಾತನಾಡಿದರು.
ಮುಂದುವರೆದು ಈಗಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಆನ್ರಾಯಿಡ್ ಮೊಬೈಲ್ ಹಾಗೂ ಲ್ಯಾಪ್ಟಾಪ್ ಇಲ್ಲದೇ ವ್ಯಾಸಂಗ ಮಾಡಲು ಬರುವುದಿಲ್ಲ, ವಿದ್ಯಾರ್ಥಿಗಳು ಅವುಗಳಲ್ಲಿ ವಿಶೇಷವಾಗಿ ಅವಲಂಬಿತರಾಗದೇ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಇಂದಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಐಟಿ ಇಂಜಿನಿಯರ್ಗಳಿಗೆ ಹೆಚ್ಚಿನ ವಿಶ್ಲೇಷಾತ್ಮಕ ಜ್ಞಾನ ಹಾಗೂ ಕೋರ್ ಇಂಜಿನಿಯರ್ಗಳಿಗೆ ವಿಜ್ಞಾನದ ಮೂಲಭೂತಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ವಿಜಯನಗರ ಜಿಲ್ಲೆಯ ಸುತ್ತಲೂ ಸ್ಟ್ರೀಲ್ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಗಳಲ್ಲಿ ಕೋರ್ ಇಂಜಿನಿಯರ್ಗಳಿಗೆ ಬೇಡಿಕೆ ಇದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಡ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕರಿಬಸವರಾಜ್ ಬಾದಾಮಿ ಮಾತನಾಡಿ ನಮ್ಮ ಕಾಲೇಜು ಕಳೆದ 27 ವರ್ಷಗಳಿಂದ ಅತ್ಯುತ್ತಮ ಇಂಜಿನಿಯರ್ಗಳನ್ನು ಕೊಡುಗೆಯಾಗಿ ನೀಡಿದೆ, ಕಾಲೇಜಿನಲ್ಲಿನ ಲ್ಯಾಬ್ಗಳನ್ನು ನವೀಕರಿಸಲಾಗಿದೆ, ಕ್ರೀಡೆಗೆ ಪೂರಕವಾಗುವ 20 ಲಕ್ಷ ಮೊತ್ತದ ಮಲ್ಟಿಜಿಮ್ ಅನ್ನು ಸ್ಥಾಪಿಸಲಾಗಿದೆ, ನ್ಯಾಕ್ ಬಿ+ ಪಡೆದ ನಂತರವೂ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗಿದೆ. ಎನ್ ಬಿ ಎ ಮಾನ್ಯತೆ ಪಡೆಯಲು ತಯಾರಿ ನಡೆಸಲಾಗುತ್ತಿದೆ ಹೀಗೇ ಪಿಡಿಐಟಿ ಕಾಲೇಜು ಅತ್ಯಂತ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದು ತಿಳಿಸಿದರು.
ಬಲ್ಡೊಟಾ ಗ್ರೂಪ್ನ ಉಪಾಧ್ಯಕ್ಷರಾದ ಶ್ರೀ ಹೆಚ್ ಕೆ ರಮೇಶ್ ಈ ಸಮಾರಂಭದಲ್ಲಿ ಆರು ವಿಭಾಗದ ಪ್ರತಿಭಾವಂತ ಟಾಪರ್ಸ್ಗಳಾದ, ಮ್ಯೆಕಾನಿಕಲ್ ವಿಭಾಗದ ಕು.ಸಮೀರ್ ಭಾಷಾ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಕು.ಸ್ವಾತಿ ಗೋಪಾಲ್, ಗಣಕಯಂತ್ರ ವಿಭಾಗದ ಕು.ಅರ್ಚನಾ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕು.ಅಂಕಿತಾ ಜೆ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕು.ಸಿಫಾ ಅಂಜುಮ್, ಹಾಗೂ ಎಂ.ಬಿ.ಎ. ವಿಭಾಗದ ಕು. ಕವಿತಾ ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಲಾಯಿತು.
ವೀ.ವಿ. ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯರಾದ ದರೂರ್ ಶಾಂತನಗೌಡ ಮಾತನಾಡಿ ಪಿಡಿಐಟಿ ಕಾಲೇಜು ಶಿಕ್ಷಣಿಕವಾಗಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಪ್ರಭಾವಿಯಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಸ್ತುತಗೊಳಿಸಿದರು.
ವೀ.ವಿ. ಸಂಘದ ವತಿಯಿಂದ ಎಲ್ಲಾ ವಿಭಾಗದ ಅತ್ಯಂತ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ಮೊತ್ತದ ನಗದು ಬಹುಮಾನವನ್ನು ಹಾಗೂ ಇತರ ದತ್ತಿ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಕಾಲೇಜಿನ ಇಬ್ಬರು ಉಪನ್ಯಾಸಕರಾದ ಡಾ.ಪ್ರಕಾಶ್ ಎಸ್, ಹಾಗೂ ಡಾ.ಪಾರ್ವತಿ ಕಡ್ಲಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ವೀ.ವಿ. ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಎಂ.ಶರಣ ಬಸವನಗೌಡ ಹಾಗೂ ಮೆಟ್ರಿ ಮಲ್ಲಿಕಾರ್ಜುನ, ಸಿ ಎನ್ ಮೋಹನ್ ರೆಡ್ಡಿ, ದರೂರ್ ಶಾಂತನಗೌಡ, ವೀ ವೀ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಾಮನ ಗೌಡ ಮುಂತಾದ ಅಜೀವ ಸದಸ್ಯರುಗಳು, ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಐ ಎನ್ ಸಂಗನಬಸಪ್ಪ, ಶ್ರೀ ಬಿ ಚಂದ್ರಮೌಳಿ, ಹಾಗೂ, ಪ್ರಾಂಶುಪಾಲರಾದ ಡಾ.ರೋಹಿತ್ ಯು.ಎಂ., ಉಪಪ್ರಾಂಶುಪಾಲರಾದ ಡಾ.ಪಾರ್ವತಿ ಕಡ್ಲಿ ಹಾಗೂ ’ಸಿಂಚನ 2025’ ಕಾರ್ಯಕ್ರಮದ ಸಂಯೋಜಕರಾದ ಡಾ.ವಸಂತಮ್ಮ ಹೆಚ್ ಮುಂತಾದ ಗಣ್ಯರು ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕು. ಪ್ರಸನ್ನ ಲಕ್ಷ್ಮಿ ಪ್ರಾರ್ಥಿಸಿದರು, ಡಾ.ವಸಂತಮ್ಮ ಹೆಚ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಡೀನ್ ಆದ ಡಾ. ಮಂಜುಳಾ ಎಸ್ ಡಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಮಂಜುನಾಥ್ ಕೆ ಎಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿದರು. ಡಾ.ಪಾರ್ವತಿ ಕಡ್ಲಿ ವಂದಿಸಿದರು. ಪ್ರೊ.ವೀಣಾ ಹಾಗೂ ಪ್ರೊ.ಉಷಾ ಗುಜ್ಜಲ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,
ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.