ಬಳ್ಳಾರಿ 03.ನಗರದ ಗಾಂಧಿನಗರದಲ್ಲಿರುವ ಎಂ.ಬಿ.ಎಸ್.ಎಲ್. ಹೈ ಸ್ಕೂಲ್ ನಲ್ಲಿ, ಡಿಸೆಂಬರ್ 6 ಮತ್ತು 7, 2025ರಂದು ನಡೆಯಲಿರುವ ಇಂಟರ್ನ್ಯಾಷನಲ್ ಗ್ಲೋಬಲ್ ಯೋಗಾ ಸಮಿಟ್ (GYS) ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನೆರವೇರಿತು.
ಈ ಸಭೆಯ ಮುಖ್ಯ ಅತಿಥಿಗಳಾಗಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಶ್ರೀಮತಿ ವೆಂಕಟಲಕ್ಷ್ಮಿ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಎಸ್.ಎಸ್. ಹಿರೇಮಠ ವಸ್ತ್ರದ , ಮತ್ತು ತಾಲೂಕು ಅಧ್ಯಕ್ಷರಾದ ಚಿದಂಬರ್ ರಾವ್ ಉಪಸ್ಥಿತರಿದ್ದರು.
ಬಳ್ಳಾರಿ ಚೀಫ್ ಕೋಆರ್ಡಿನೇಟರ್ ರಾಘವೇಂದ್ರ, ಹಾಗೂ ಅಧ್ಯಕ್ಷರಾದ ರಮೇಶ್ ಸರ್ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದರು.
ಶಾಲೆಯ ಮುಖ್ಯಗುರುಗಳು ಶ್ರೀನಿವಾಸಲು ಹಾಗೂ ಅನೇಕ ಉಪಾಧ್ಯಕ್ಷರು, ಬಳ್ಳಾರಿ ತಾಲೂಕು ಕೋಆರ್ಡಿನೇಟರ್‌ಗಳು, ಮತ್ತು ಗಂಗಾವತಿ, ಸೊಂಡೂರು, ಸಿರುಗುಪ್ಪ, ಕಂಪ್ಲಿ ಸೇರಿದಂತೆ ವಿವಿಧ ಸ್ಥಳಗಳ ಯೋಗ ತಂಡಗಳು ಭಾಗವಹಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.
ಎಲ್ಲಾ ಯೋಗ ಸಾಧಕರು ಮತ್ತು ಸಾಧಕಿಯರು ಉತ್ಸಾಹಭರಿತವಾಗಿ ಪಾಲ್ಗೊಂಡು ಈ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಿದರು.


