“ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ” -ಪ್ರೊ ನೀಲಕಂಠ ಭೂಮಣ್ಣವರ

Ravi Talawar
“ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ” -ಪ್ರೊ ನೀಲಕಂಠ ಭೂಮಣ್ಣವರ
WhatsApp Group Join Now
Telegram Group Join Now
ಪಾಶ್ಚಾಪೂರ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ,ಹುಕ್ಕೇರಿ ವಲಯ ಹಾಗೂ ಮಹಿಳಾ ಒಕ್ಕೂಟ ಪಾಚ್ಚಾಪುರ ಇವರ ಸಹಯೋಗದಲ್ಲಿ ಬಸವೇಶ್ವರ ದೇವಾಲಯದ ಅವರಣದಲ್ಲಿ “ಮಾದಕ ವಸ್ತುಗಳ ವಿರೋಧಿ ದಿನಾಚರಣೆ”ಯನ್ನು ಆಚರಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಯಮಕನಮರಡಿ ಪಿ.ಎಸ್.ಐ.ಆರ್‌.ಎಂ ಪಾಟೀಲ್ ಸಾಹೇಬರು ಮಕ್ಕಳನ್ನು ದುರಾಬ್ಯಾಸಗಳಿಂದ ದೂರ ಇಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಕನ್ನಡ ಆಧ್ಯಾಪಕರಾದ ಪ್ರೊ. ನೀಲಕಂಠ ಭೂಮಣ್ಣವರ ಅವರು ಮಾತನಾಡಿ “ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಮಾದಕ ವಸ್ತುವಿನ ವ್ಯಸನಗಳಿಂದ ದೂರವಿಡಬಹುದು “ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಹುಕ್ಕೇರಿ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಕಾಂತ್ ನಾಯ್ಕ್, ಪಾಚ್ಚಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಬ್ದುಲ್ ಗಣಿ ದರ್ಗಾ, ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀ ದುಂಡಗಿ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ  ಶ್ರೀಮತಿ ಮಾನಿಷಾ ಸಿಂಧೆ,  ಪಾಷಾಪುರ ಕಾರ್ಯಕ್ರಮ ಅಧಿಕಾರಿ  ಚಂದ್ರಕಾಂತ ಹಲಸಿಗಿ, ಗಂಗಾ ಅಂಬಿಗೇರ್ ,ಪತ್ರಕರ್ತರಾದ ನಿಲೇಶ್ ಜಗಜಂಪಿ ರಮೇಶ್ ಬಾಗೇವಾಡಿ ,ಅಂಕಲಿಗಿಯ ಪಿ.ಎಸ್.ಐ ಜಾದವ್ ಮಹಿಳಾ ಸ್ವಸಾಯ ಸಂಘದ ಸರ್ವ ಸದಸ್ಯರು ಮೇಲ್ವಿಚಾರಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article