ಮಕ್ಕಳ ಕೈಯಲ್ಲಿ  ಮೊಬೈಲ್ ಬದಲು ಸಂಗೀತ ಪರಿಕರ ನೀಡಿ: ಗಂದಿಗವಾಡದ ಮೃತ್ಯುಂಜಯ ಶ್ರೀ

Ravi Talawar
ಮಕ್ಕಳ ಕೈಯಲ್ಲಿ  ಮೊಬೈಲ್ ಬದಲು ಸಂಗೀತ ಪರಿಕರ ನೀಡಿ: ಗಂದಿಗವಾಡದ ಮೃತ್ಯುಂಜಯ ಶ್ರೀ
WhatsApp Group Join Now
Telegram Group Join Now

ಹಸಿರು ಕ್ರಾಂತಿ: ಎಂ. ಕೆ. ಹುಬ್ಬಳ್ಳಿ: ಮಕ್ಕಳ ಕೈಯಲ್ಲಿ  ಮೊಬೈಲ್ ನೀಡುವ ಬದಲು ತಬಲಾ, ಹರಾಮೋನಿಯಂ, ತಾಳ  ವಾದ್ಯಕೊಡಿ ಅವರ ಬದುಕಿನ ತಾಳ ಸರಿಯಾಗಿ ಸಾಗುವುದರೊಂದಿಗೆ ಅವರ ಬಾಳು ಬೆಳಗುವುದು ಎಂದು ಗಂದಿಗವಾಡ ರಾಜಗುರು ಸಂಸ್ಥಾನ ಹಿರೇಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಹೇಳಿದರು.

ಇವರು ಪಟ್ಟಣದ ಬೈಲಹೊಂಗಲ ರಸ್ತೆಗೆ ಹೊಂದಿಕೊಂಡಿರುವ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಗಾನಯೋಗಿ ಪಂಡಿತ ದಿ. ದುಂಡಯ್ಯ ಪ. ಹಿರೇಮಠ ಅವರ ಜನ್ಮ ಶತಮಾನೋತ್ಸವ ಹಾಗೂ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ  ಆಶೀರ್ವಾವಚನ ನೀಡಿದರು,ಜಗತ್ತಿನ ಅಭಿವೃದ್ಧಿ ಮನುಷ್ಯನ ಬೆಳವಣಿಗೆಗೆ ಮಾರಕ ಮೊಬೈಲ್ ಆಗುತ್ತಿದೆ ಅದಕ್ಕಾಗಿ ಅವಶ್ಯಕತೆಗೆ ಅನುಗುಣವಾಗಿ ಅಷ್ಟೇ ಬಳಕೆ ಮಾಡಿ, ಮಕ್ಕಳು  ಮೊಬೈಲ್ ನಿಂದ  ದೂರವಿರಲು ಒಂದಲ್ಲಾ ಒಂದು ಕಲಾ ವಿದ್ಯೆ ಕಲಿಯಲು ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ. ಸಸ್ಯ ಸಹ ಸಂಗೀತ ನೀವು ಮಾತನಾಡುವ ಮಾತು ಆಲಿಸುತ್ತವೆ. ಆ ಸಸ್ಯದಿಂದ ಬಂದ ಫಲ ಯಾರು ಸೇವನೆ ಮಾಡುತ್ತಾರೆ ಆ ಪರಿಣಾಮ ಅವರ ಮೇಲೆ ಬಿರುತ್ತವೆ. ಜಮೀನಿನಲ್ಲಿ ಕೆಲಸ ಮಾಡುವಾಗ ಒಳ್ಳೆಯ ಮನಸ್ಸು,ಆಲೋಚನೆ ಇಟ್ಟುಕೊಂಡು ಕೆಲಸ ಮಾಡಿದರೆ ಆ ಜಮೀನಿನಲ್ಲಿ ಉತ್ತಮ ಫಲವು ಬರುವುದು ಅದನ್ನು ಸೇವನೆ ಮಾಡಿದ ವ್ಯಕ್ತಿ ಸಂತ, ಅನುಭಾವಿ, ಜ್ಞಾನಿಯಾಗ ಬಹುದು ಅದಕ್ಕಾಗಿ  ಜಮೀನುಗಳಲ್ಲಿ ಕೆಲಸ ಮಾಡುವಾಗ ಉತ್ತಮ ವಿಚಾರಗಳನ್ನು ಮಾಡುತ್ತ ಕಾರ್ಯ ನಿರ್ವಹಿಸುಬೇಕು.

ಪಾಶ್ಚಿಮಾತ್ಯ ದೇಶಗಳಲ್ಲಿ  ಸಂಗೀತ (ಸೌಂಡ್ ಥೇರಾಪಿ) ಮೂಲಕ ಒಂದೊಂದು ರೋಗಕ್ಕೆ ಒಂದೊಂದು ಸಂಗೀತ ಕೇಳಿಸುವ ಮೂಲಕ ರೋಗ ಗುಣ ಪಡಿಸುವ ವಿಧಾನ ಕಂಡುಕೊಂಡಿದ್ದಾರೆ. ಅದಕ್ಕೆ ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಜೀವನ ಇರುವ ವರೆಗೆ ಕಲಿಕೆ ಮುಗುಯುವುದಿಲ್ಲ. ಯಾರಲ್ಲಿ ಪ್ರಾಮಾಣಿಕ ಗುಣವಿರುವುದೋ ಅವರನ್ನು ಸಮಾಜ ಗುರುತಿಸುತ್ತದೆ ಹಾಗೂ ಅಂತವರು ಉತ್ತಮ ಸಾಧನೆ ಮಾಡುತ್ತಾರೆ ಎಂದರು.

ನಿವೃತ್ತ ಶಿಕ್ಷಕ ಶಿವಬಸಯ್ಯ ಗಂಗಾಧರಮಠ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಹಾಗೂ ಗಾನಯೋಗಿ ಡಿ. ಪಿ. ಹಿರೇಮಠ ಭಾವ ಚಿತ್ರಕ್ಕೆ ಪುಷ್ಪಗೈಯುವ ಮೂಲಕ ಕಾರ್ಯಕ್ರಮ ಉದ್ಘಾಟಸಿ  ಮಾತನಾಡಿ  ಭೂಮಿ ಋಣದಿಂದ ನಾವು ಯಾವಾಗ ಮುಕ್ತಾರಾಗುತ್ತೇವೆಯೋ ಗೊತ್ತಿಲ್ಲ ಅದಕ್ಕಾಗಿ ಜೀವನ ಪೂರ್ಣ ಎಷ್ಟೇ ಕಷ್ಟ ಬಂದರು ಅದನ್ನು ಸಂತೋಷವಾಗಿ ಸ್ವೀಕರಿಸಿ,  ದುಶ್ಚಟಗಳ ದಾಸರಾಗದೆ ಹಿಂತಃ ಕಲೆಯ ದಾಸರಾಗಿ ನಿಮ್ಮ ಅಮೂಲ್ಯ ಜೀವನ ಪಾವನಗೋಳಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಪಟ್ಟಣದ ಗಂಗಾಂಭಿಕಾ ಟ್ರಸ್ಟ್ ಕಮೀಟಿ ಅಧ್ಯಕ್ಷ ಜಿ. ಸಿ. ಕೋಟಗಿ ಮಾತನಾಡಿ ಎಲ್ಲರಲ್ಲೂ ಎಲ್ಲಾ ಕಲೆ ಇರುತ್ತದೆ, ಯಾವ ಕಲೆಯ ಮೇಲೆ ನಾವು ಹಿಡಿತ ಸಾಧನೆ ಮಾಡಿ, ಸತತ ಪ್ರಯತ್ನ ಮಾಡುತ್ತೇವೆ ಆವಾಗ ನಾವು ಸಾಧಕರಾಗಿ  ಚರಿತ್ರೆ ಪುಟದಲ್ಲಿ ಇತಿಹಾಸವಾಗಿ  ಉಳಿಯಲು ಸಾಧ್ಯ ಎಂದರು. ಬೆಳಗಾವಿ ಆರ್. ಎನ್. ಎಸ್  ಪಾಲಿಟೆಕ್ಣಿಕ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶಶಿಧರಯ್ಯ ಹಿರೇಮಠ ಹಾಗೂ ಅಳ್ನಾವರ ಎಸ್. ಡಿ. ದೇಗಾವಿಮಠ ಅವರು ಡಿ. ಪಿ. ಹಿರೇಮಠ ಅವರ ಜೀವನದ ಕೆಲ ಪುಟಗಳನ್ನು ಬಿಚ್ಚಿಟರು.

ದಂತ ವೈದ್ಯ ಜಗದೀಶ ಹಾರುಗೋಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಗೀತ ಕಲೆಯಿಂದ ಮಾನಸಿಕ ರೋಗ ನಿವರಾಣೆ ಮಾಡಬಹುದು. ಶಿಕ್ಷಕರರಿಗೆ ಮುಖ್ಯವಾಗಿ ಇರಬೇಕಾದ ಗುಣ ಪ್ರೀತಿ ಈ ಪ್ರೀತಿಯಿಂದಲೇ ಡಿ. ಪಿ. ಹಿರೇಮಠ ಗುರುಗಳು ಮಕ್ಕಳಿಗೆ ಅಕ್ಷರ ಹಾಗೂ ಸಂಗೀತ ಜ್ಞಾನ ನೀಡುವ ಮೂಲಕ ಉನ್ನತ ಹುದ್ದೆ ಹಾಗೂ ಸಂಗೀತ ದಿಗ್ಗಜರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  ಆ ಶಿಷ್ಯರೆಲ್ಲರೂ  ಸೇರಿ ಹಿರೇಮಠ ಗುರುಗಳ ಜನ್ಮ ಶತಮಾನೋತ್ಸವ ಆಚರಣೆ ಮಾಡುತ್ತಿದ್ದಾರೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಗುರುಗಳಿಗೆ ಏನುಬೇಕು  ಎಂದು ಬನ್ನಿಸಿದರು.

ಹೈದರಾಬಾದ್ ಶಹನಾಯಿ ವಾದಕ ರುದ್ರೇಶ ಭಜಂತ್ರಿ, ಧಾರವಾಡ ಆಕಾಶವಾಣಿ ತಬಲಾ ವಾದಕ ಪಂ. ಶಾಂತಲಿಂಗ ದೇಸಾಯಿ, ಹಿಂದೂಸ್ಥಾನಿ ಗಾಯಕಿ ಐಶ್ವರ್ಯ ದೇಸಾಯಿ, ಹಾರ್ಮೋನಿಯಂ ವಾದಕ ವಿನೋದ ಪಾಟೀಲ, ಎಂ. ಕೆ. ಹುಬ್ಬಳ್ಳಿ ಜೀ ಕನ್ನಡ ಸರಿಗಮಪದ ಸುಜಾತಾ ಸಣ್ಣಕ್ಕಿ, ಅಳ್ನಾವರ ಶಾಂಭಾವಿ ಮತ್ತು ಪ್ರಣವ ದೇಗಾವಿಮಠ ಮತ್ತು ಸ್ವರಾಲಯ ಸಂಗೀತ ಪಾಠ ಶಾಲೆಯ ಮಕ್ಕಳ ಸಂಗೀತ ಕಾರ್ಯಕ್ರಮ ನೋಡುಗರನ್ನು ಮಂತ್ರ ಮುಗ್ದರನಾಗಿಸಿತು.

ಈ ವೇಳೆ  ಮಲ್ಲಯ್ಯ ಹಿರೇಮಠ, ಮಂಜುನಾಥ ಭಜಂತ್ರಿ, ಸುರೇಶ ನಾಡಗೌಡ್ರ, ಮಡಿವಾಳಪ್ಪ ದಡ್ಡಿ, ರಾಜು ಗಾಣಗೇರ, ಶಶಿಧರ ನಾಡಗೌಡ್ರ, ನಾಗರಾಜ ಜ್ಯೋತಿ, ಬಸವರಾಜ ಬೆಂಡಿಗೇರಿ, ಮಹಾಂತೇಶ ಹಿರೇಮಠ, ಬಾಳಯ್ಯ ಹೊಸಮಠ ಸೇರಿದಂತೆ ಅನೇಕರು ಇದ್ದರು.

ಧಾರವಾಡದ ಶ್ರೀಧರ ಅವರಿಂದ ಮಂಗಲ ವಾದ್ಯ ಶಹನಾಯಿ ಕಾರ್ಯಕ್ರಮ ಮೊಳಗಿತ್ತು ಇವರಿಗೆ ತಬಲಾಸಾಥ ಬದ್ರಿಶ ಕುಲಕರ್ಣಿ ನೀಡಿದರು. ಶಾಂಭಾವಿ ಹಾಗೂ ಪ್ರಣವ ಇವರಿಂದ ಪ್ರಾರ್ಥನೆ ನೆರವೇರಿತು. ಸ್ವಾಗತ ಸಿದ್ದಯ್ಯ ಹಿರೇಮಠ, ಷಣ್ಮುಖ ಗಣಾಚಾರಿ ಪ್ರಸ್ತಾವಿಕವಾಗಿ ಮಾತನಾಡಿದರು ಬದ್ರಿಶ್ ಕುಲಕರ್ಣಿ ಅವರು ಗುರು ಪರಂಪರೆ ಪರಿಚಯ ಮಾಡಿದರು,  ಅನಂದ ಶಿರಕೋಳ ವಂದಿಸಿದರು.

WhatsApp Group Join Now
Telegram Group Join Now
Share This Article