ರೈತ, ಒಕ್ಕಲಿಗರಿಗೆ  ಹೆಣ್ಣು ಕೊಡಿ: ಕಾಡಸಿದ್ದೇಶ್ವರ ಶ್ರೀಗಳು 

Ravi Talawar
ರೈತ, ಒಕ್ಕಲಿಗರಿಗೆ  ಹೆಣ್ಣು ಕೊಡಿ: ಕಾಡಸಿದ್ದೇಶ್ವರ ಶ್ರೀಗಳು 
WhatsApp Group Join Now
Telegram Group Join Now
ಬೈಲಹೊಂಗಲ: ರೈತ ಒಕ್ಕಲಿಗತನ ಮಾಡದೆ ಹೊದರೆ ಯಾವ ಪ್ರಯೋಗಾಲಯದಲ್ಲಿಯು ತಿನ್ನುವ ಅನ್ನ ತಯಾರಿಸಲಿಕ್ಕೆ ಆಗದು ಅಂತಹ ಅನ್ನ ನೀಡೊ ರೈತನಿಗೆ ಹೆಣ್ಣು ಕೊಡಿ, ಹೆಂಡತಿಯನ್ನ ಕಣ್ಣಿನಂತೆ ಜ್ವಾಕಿಮಾಡುವರು ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
   ಸಮೀಪದ ಮರಕುಂಬಿ ಗ್ರಾಮದಲ್ಲಿ ಕೆಎಲ್ಈ ಸಂಸ್ಥೆಯ ಕೆವಿಕೆ ಮತ್ತಿಕೊಪ್ಪ, ಸಿದ್ದಸಿರಿ ಸಾವಯವ ಕೃಷಿಕರ ಸಂಘ ಬೆಳಗಾವಿ, ಚೌಡೇಶ್ವರಿ ಬಸಪ್ಪನವರ ಆತ್ಮಾ ಸಂಘ ಮರಕುಂಬಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಒಣ ಬೆಸಾಯದಲ್ಲಿ ಸಾವಯವ ಕೃಷಿ, ರೈತರ ನಡೆ ಸಾವಯವ ಕೃಷಿ ಕಡೆ ವಿಚಾರ ಸಂಕಿರ್ಣದಲ್ಲಿ ಮಾತನಾಡಿ, ಮನೆಗೆ ಬಂದವರಿಗೆ ಪ ಅನ್ನ ನೀರು ಕೊಟ್ಟು ಕಳಿಸುವ ಶ್ರೀಮಂತಿಕೆ ಜಗತ್ತಿನಲ್ಲಿ ರೈತರಿಗೆ ಮಾತ್ರ ಇದೆ. ಅವರು ಮಾಡುವ ಕೃಷಿ ಕಾಯಕ ಶ್ರೇಷ್ಠ ಕಾಯಕವಾಗಿದ್ದು ಅದಕ್ಕೆ ಎಲ್ಲ ವಿದ್ಯೆಗಿಂತ ಮೇಟಿ ವಿದ್ಯೆಯೆ ಶ್ರೇಷ್ಠ ವಿದ್ಯೆ ಎಂದಿರುವದು.
ನಮ್ಮ ಉತ್ತಮ ಆರೋಗ್ಯಕ್ಕಾಗಿ ಜಲ ನೆಲ ಮತ್ತು ಗಾಳಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಮಣ್ಣಿನಲ್ಲಿ ರಸಾಯನಿಕ‌ ಎಂಬ ವಿಷ ಬೆರಿಸಿ ಅದರ ಪಾವಿತ್ರತೆ ಮತ್ತು ಫಲವತ್ತತೆ ಸಂಪೂರ್ಣ ಹಾಳಾಗುತ್ತಿದೆ. ನೀವು ಸತ್ತರೆ ಮಣ್ಣಿನಲ್ಲಿ ಮಣ್ಣಾಗುವಿರಿ, ಮಣ್ಣೆ ಸತ್ತರೆ ಮುಂದಿನ ಭವಿಷ್ಯವೇನು ಎಂದು ರೈತರನ್ನು ಪ್ರಶ್ನಿಸಿದರು.
ಮಣ್ಣಿನ ಫಲವತ್ತೆಗಾಗಿ ರಸಾಯನಿ ಬಿಟ್ಟು ಸಾವಯುವ ಪದ್ಧತಿ ಬಳಸಿ, ಮಣ್ಣಿಗೆ ಜೀವಾಮೃತ, ಗೋಕೃಪಾಮೃತ, ಘಣಜೀವಾಮೃತ, ಎರೆಹುಳ, ಹಸಿರೆಲೆ ಗೊಬ್ಬರ ಬಳಸಿ. ಕೇವಲ ಹಣ ಗಳಿಸಲು ಹೊರಟರೆ ಮುಂದಿನ ಹತ್ತು ವರ್ಷದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗುತ್ತಾದೆ, ಗಳಿಸಿದ ಸಂಪತ್ತು ಆರೋಗ್ಯಕ್ಕಾಗಿ ಖರ್ಚುಮಾಡಬೇಕಾದಿತು ಎಂದು ಎಚ್ಚರಿಸಿದರು
 ಅದಕ್ಕೆ ಮೊದಲೆ ಎಚ್ಚೆತ್ತು ಸಾವಯವ ಪದಾರ್ಥಗಳ ಬಳಕೆಯಿಂದ ನೀವು ಉತ್ತಮ ಆರೋಗ್ಯವಂತರಾಗಿ ಹಾಗೂ ಕಣ್ಣಿಗೆ ಕಾಣದ ಜೀವಿಗಳು ಬದಕುತ್ತವೆ. ರೈತರಿಗೆ ಕೃಷಿ ಭೂಮಿಯೆ ಪ್ರಯೋಗ ಶಾಲೆ ಇದ್ದಂತೆ. ಅಲ್ಲಿ ರೈತರ ಜ್ಞಾನ ವಿಜ್ಞಾನಿಗಳ ತಂತ್ರಜ್ಞಾನ ಹೊಂದಿದಾಗ ಕೃಷಿಯಲ್ಲಿ ಹೊಸ ಹೊಸ ಅವಿಷ್ಕಾರವಾಗಲಿವೆ.
ಕಸದಿಂದ ರಸ ತಗೆಯುವ ವಿದ್ಯೆ ಪ್ರತಿಯೊಬ್ಬ ರೈತರಿಗೆ ಗೊತ್ತಾಗಬೇಕು. ಒಣ ಬೆಸಾಯ ಭೂಮಿಯಲ್ಲಿ ಮಿಶ್ರ ಬೆಸಾಯ ಅಳವಡಿಸಿಕೊಂಡು ಸಾವಯವ ಕೃಷಿಯಲ್ಲಿ ಹೆಚ್ಚಿನ‌ ಇಳುವರಿ ಪಡೆಯಬದು. ಇದರಿಂದ ಸ್ವಚ್ಚ ನೀರು ಉತ್ತಮ ಆಮ್ಲಜನಕ‌ ದೊರೆಯುತ್ತದೆ. ವಾತವರಣ ಶುದ್ದಿಯಾದರೆ ಮಾನವನ ಜೀವನ ಹಸನಾಗಲಿದೆ ಎಂದರು.
  ಕೆಎಲ್ಈ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ, ಸಾವಯವ ಕೃಷಿಯ ಉತ್ತೆಜನೆಗಾಗಿ ಕನ್ನೆರಿ ಮಠ ಮುಡಿಪಾಗಿದ್ದು ಕೃಷಿಯಲ್ಲಿ ಹೊಸ ಹಿಸ  ಸಂಶೋಧನೆ ಮಾಡುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ, ಕೆಎಲ್ಈ ನಿರ್ದೇಶಕ ಡಾ.ವಿ.ಆಯ್.ಪಾಟೀಲ‌ ಮಾತನಾಡಿ, ಇರುವದೊಂದೆ ಜೀವನ, ಇರುವ ವರೆಗೆ ಉತ್ತಮ ಆರೋಗ್ಯಕ್ಕಾಗಿ ಸಾವಯವ ವಸ್ತುಗಳನ್ನು ಬಳಸಿ, ಮುಂದಿನ ಪಿಳೆಗೆಗೆ ನಾವು ಎನನ್ನು ಗಳಸಿಕೊಡದೆ ಇದ್ದ ಭೂಮಿ, ಗಾಳಿ ನೀರನ್ನು ಮಾಲಿನ್ಯಗೊಳಿಸದೆ ಇದ್ದಹಾಗೆ ಬಿಟ್ಟುಹೊಗೊಣ ಎಂದರು.
ನ್ಯಾಯವಾದಿ ಎಮ್.ಬಿ.ಝೀರಲಿ‌  ಮಾತನಾಡಿದರು. 40ವರ್ಷಗಳ ಕಾಲ ಕೆಎಲ್ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳಿಸಿದ bಕೆಎಲ್ಈ ಕಾರ್ಯಾಧ್ಯಕ್ಷ ಪ್ರಭಾಕರ ಕೊರೆ ಅವರನ್ನು ರೈತರ ಪರವಾಗಿ ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಕೆಎಲ್ಈ ನಿರ್ದೇಶಕ ಬಿ.ಅರ್ ಪಾಟೀಲ, ಕಾರ್ತಿಕ ಪಾಟೀಲ, ನಾಗರಾಜ ದೇಸಾಯಿ, ಶ್ರೀದೇವಿ ಅಂಗಡಿ, ಜಯರಾಜ ಮೆಟಗುಡ್ ಇದ್ದರು ಕಾರ್ಯಕ್ರಮದಲ್ಲಿ  ಜಿಲ್ಲೆಯ ಸಾವಯವ ಕೃಷಿಕರಾದ ಶಿವಾನಂದ ಶಿದ್ನಾಳ, ಎಫ್.ಎಸ್.ಸಿದ್ದನಗೌಡರ, ಭೀಮಸೇನ ಜೀರಲಿ, ಸುಧಾಕರ ಸುತಾರ, ಚಂದನ ಸೈಬನ್ನವರ, ಜಿ.ಜಿ.ಕಟಾಪುರಿಮಠ, ಮಹಾಂತೇಶ ಅಡಿಬಟ್ಟಿ, ಮಲ್ಲಪ್ಪ ದೇಸಾಯಿ, ಅಡಿವೆಪ್ಪ ಮೇಟಿ, ಅಕ್ಷಯ ಪಾಟೀಲ, ನಾಗರಾಜ ತಲ್ಲೂರ, ಜಗದೀಶ್ ಕುರಬಗಟ್ಟಿಮಠ, ರವಿ ಕುರಬೆಟ್ಟ ಅವರನ್ನು ಪೂಜ್ಯರು ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಸತ್ಕರಿಸಿದರು.
 ಕೆವಿಕೆ ಅಧ್ಯಕ್ಷ ಕೆಎಲ್ಈ ನಿರ್ದೇಶಕ ಬಿ.ಆರ್.ಪಾಟೀಲ‌ ಸ್ವಾಗತಿಸಿದರು.  ಎಫ್.ಎಸ್.ಸಿದ್ದನಗೌಡರ ನಿರುಪಿಸಿದರು. ಎಸ್.ಎಮ್.ವಾರದ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಸವರಾಜ ಮಹಾಂತಶೆಟ್ಟಿ, ವಿಜಯ ಮೆಟಗುಡ್,  ಮಹಾಂತೇಶ ಹಿರೆಮಠ, ವಿಶ್ವಾನಥ  ಜಿ.ಬಿ,
ಕೃಷಿ ಅಧಿಕಾರಿ ಮಹಾಂತೇಶ ವಿರಕ್ತಮಠ, ಮದೂಸುಧನ ಅಮ್ಟೆ, ವಿ.ಎ.ಹೊಸೂರ, ಅನಂದ ವಾಲಿ, ಮಹಾಂತೇಶ ಕೌಜಲಗಿ, ವೀರಣ್ಣ ವೀರಶೆಟ್ಟಿ, ಈಶ್ವರ ಭಾಗೋಜಿ, ಸೋಮು ವಿವೇಕಿ, ಸೊಮಲಿಂಗಪ್ಪ‌ ಇಂಗಳಗಿ, ಸಂಗಪ್ಪ ಮುರಗೋಡ, ಬಾಬುರಾವ ಪಾಟೀಲ, ಪ್ರವೀಣ ಸಣಗೌಡರ, ಬಸವರಾಜ ರೆವಣ್ಣವರ, ಪ್ರದೀಪ‌ ಮುರಕಿಭಾವಿ, ನೀರಗುಂಡ ರೆವಣ್ಣವರ, ಮಂಜುನಾಥ ಮುರಕಿಭಾಂವಿ, ಶಿವಾನಂದ‌ ಗುರಕನವರ, ಬಸಪ್ಪ ಕೊಲಕಾರ, ಮಡಿವಾಳ ಕೊಲಕಾರ, ಮಡಿವಾಳ ಅಕ್ಕಿಸಾಗರ, ಮಹಾಂತೇಶ ತೋಟಗಿ, ವಿಜಯ ಪತ್ತಾರ, ಈರಣ್ಣ ಜವಳಿ, ಮಲ್ಲಪ್ಪ‌ ದೇಸಾಯಿ, ಚಂದನ ಕೌಜಲಗಿ, ಮಲ್ಲನಗೌಡ ಪಾಟೀಲ ಬಿಸಿಆಯ್ ತಂಡ ಸೇರಿದಂತೆ ಗೊಕಾಕ, ಬೆಳಗಾವಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ ಹಾಗೂ ಬೆಳಗಾವಿ ತಾಲೂಕಿನ ಅನೇಕ ಗ್ರಾಮಗಳ  ನೂರಾರೂ ರೈತ ಮಹಿಳೆಯರು ಹಾಗೂ ಕೃಷಿಕರು ಇದ್ದರು.
WhatsApp Group Join Now
Telegram Group Join Now
Share This Article