ಗದಗ: ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನಿಡುವ ಪ್ರವೃತ್ತಿ ಬೆಳೆಯುತ್ತಲೇ ಬಂದಿದ್ದು, ಅದಾಗ್ಯೂ ಬೆಂಗಳೂರು ಮತ್ತು ಗದಗದ ಸಂಶೋಧಕರು ಇತ್ತೀಚೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಸರ್ವಾಡ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನೆಫಿಲಾ ಜಾತಿಯ ದೈತ್ಯ ಜೇಡಕ್ಕೆ ಹನುಮಂತನ ಹೆಸರಿಡುವಂತೆ ಸೂಚಿಸಿದ್ದಾರೆ.
ಇಂತಹ ವರ್ಣರಂಜಿತ ಜೀವಿಯನ್ನು ಸೃಷ್ಟಿಸಿದ್ದಕ್ಕಾಗಿ ದೇವರ ಹೆಸರನ್ನು ಇಡುವುದು ಇದರ ಉದ್ದೇಶ ಎಂದು ಸಂಶೋಧಕರು ಹೇಳಿದ್ದಾರೆ.
ಕೀಟಗಳಿಗೆ ಹೆಸರಿಡುವುದು ಕೀಟಗಳ ಅಧ್ಯಯನವನ್ನು ಗುರುತಿಸಲು ಸುಲಭಗೊಳಿಸುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್ಕಾರ್ನಾಟಸ್ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು. ಅದೇ ರೀತಿ, ‘ಮಿಸ್ಟರ್ ಇಂಡಿಯಾ’ ಸಿನಿಮಾದಲ್ಲಿ ಅಮರೀಶ್ ಪುರಿ ಅವರ ಪಾತ್ರವನ್ನು ಹೋಲುವ ಕಾರಣಕ್ಕೆ ಕೀಟಕ್ಕೆ ಮೊಗಾಂಬೊ ಎಂದು ಹೆಸರಿಡಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.


