ಘಟಪ್ರಭಾ. ಜಿಲ್ಲಾ ಪಂಚಾಯತ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ /ಕ್ಷೇತ್ರ ಸಮನ್ವಯಧಿಕಾರಿಗಳು ಮೂಡಲಗಿ, ಸಮೂಹ ಸಂಪನ್ಮೂಲ ಕೇಂದ್ರ ಘಟಪ್ರಭಾ ಮತ್ತು ಘಟಪ್ರಭಾದ ಜೋಸೆಫ್ ಎಜುಕೇಶನ್ ಸೊಸೈಟಿಯ ಕ್ರೈಸ್ಟ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 21-08-2024 ಮತ್ತು 22-08-2024 ರಂದು ಘಟಪ್ರಭಾ ವಲಯ ಮಟ್ಟದ ಕ್ರೀಡಾಕೂಟವು ಘಟಪ್ರಭಾದ ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನೆರವೇರಲಿದ್ದು ಕಾರ್ಯಕ್ರಮದಲ್ಲಿ ಕ್ರೈಸ್ಟ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಆರ್ ಡಬ್ಲ್ಯೂ ಜೆ ಬೆಂಗಳೂರು, ಕ್ಷೇತ್ರ ಶಿಕ್ಷಣ ಅಧಿಕಾರಿ ಎ ಸಿ. ಮಣ್ಣಿಕೇರಿ, ಸಮೂಹ ಸಂಪನ್ಮೂಲ ಅಧಿಕಾರಿ ಆರ್ ಸಿ. ಗೋಡೇರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಲಾದ ಎ ಎ. ಜುನೆದ ಪಟೇಲಿ ಆಗಮಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.