ಘಟಪ್ರಭಾ:ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಇಂದು ಕರ್ನಾಟಕ ಬಂದಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಬಂದಗೆ ಬೆಂಬಲಿಸಿ ಇಂದು ಘಟಪ್ರಭಾ ನಗರದಲ್ಲಿ ಗೋಕಾಕ ತಾಲೂಕಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಘಟಪ್ರಭಾದ ಮೃತ್ಯುಂಜಯ ವೃತ್ತದಲ್ಲಿ ಬೃಹತ್ ಪ್ರತಿಭಟಿಸಿ ನಂತರ ಸಂಕೇಶ್ವರ – ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಎಂ,ಇ,ಎಸ್ ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೋಗಿ ಆಕೋಶ ವ್ಯಕ್ತ ಪಡಿಸಲಾಯಿತು ಹಾಗೂ ವಿವಿಧ 20 ಬೇಡಿಕೆಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬೇಗನೆ ಈಡೇರಿಸಬೇಕೆಂದು ಘಟಪ್ರಭಾ ಪೋಲಿಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ,ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಜಿಲ್ಲಾಧ್ಯಕ್ಷರು ರೆಹಮಾನ್ ಮೊಕಾಶಿ,ಕನ್ನಡ ಸೇನೆ ತಾಲ್ಲೂಕು ಅದ್ಯಕ್ಷ ಅಪ್ಪಾಸಾಬ ಮುಲ್ಲಾ,ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಶಿ,ಕನ್ನಡ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಬೇಡರಟ್ಟಿ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ದೊಡಮನಿ ಕರವೇ ತಾಲ್ಲೂಕು ಅದ್ಯಕ್ಷ ರವಿ ನಾವಿ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ್, ಕರವೇ ಚಿಕ್ಕೋಡಿ ತಾಲೂಕ ಅಧ್ಯಕ್ಷ ಸದಾಶಿವ ಸಂಪಗಾರ,ಮಂಜುನಾಥ ಸಂಪಗಾರ್ ,ಮೂಡಲಗಿ ತಾಲೂಕ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಅರಭಾವಿ, ಮೂಡಲಗಿ ಉಸ್ತುವಾರಿ ಅಧ್ಯಕ್ಷ ರಾಘು ಕುಡ್ಡೆಮ್ಮೆ, ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷ ಶಿವರಾಜ್ ಚಿಗದ್ದೊಳ್ಳಿ, ಎಂ.ಆಯ್.ಕೊತ್ವಾಲ್,ಸಿದ್ದಪ್ಪ ತಳಿಗೇರಿ,ಕೃಷ್ಣಾ ಗಂಡವ್ವಗೋಳ,ಕಲ್ಲೊಳ್ಳೆಪ್ಪಾ ಗಾಡಿವಡ್ಡರ,ಶಂಕರ ಕಮತೆ, ಕರವೇ ಗೋಕಾಕ್ ತಾಲೂಕ ಉಪಾಧ್ಯಕ್ಷ ಬಸವರಾಜ ಹುಬ್ಬಳ್ಳಿ, ಕರವೇ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಶಿ ಚೌಕಶಿ,ಯಲ್ಲಪ್ಪ ಅಟ್ಟಿಮಿಟ್ಟಿ,ವಿವೇಕಾನಂದ ಕತ್ತಿ,ವಿಠ್ಠಲ ಬೆಳಗಲಿ,ಕಾಶಪ್ಪ ನಿಂಗನ್ನವರ,ಸೋಮನಾಥ ಬಂಬಲಾಡಿ,ಮುತ್ತೆಪ್ಪ ಗದಾಡಿ,ಮಲ್ಲಪ್ಪ ಅಟ್ಟಿಮಿಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು