ಯರಗಟ್ಟಿ : ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ, ಗುರುಗಳಿಗೆ ವಿಧೇಯರಾಗಿ, ಅಂದಂದಿನ ಪಾಠ ಪ್ರವಚನವನ್ನು ಅಂದೇ ಅಭ್ಯಸಿಸಿದರೆ ಪರೀಕ್ಷೆ ಭಯ ಇರುವುದಿಲ್ಲ. ಹಿರಿಯ ಸಾಧಕ ವಿದ್ಯಾರ್ಥಿಗಳ ಒಡನಾಟದಿಂದಲೂ ಅಭ್ಯಾಸದ ಕ್ರಮಗಳನ್ನು ಅರಿತುಕೊಂಡು ಯಶಸ್ಸಿನ ಗುರಿ ಮುಟ್ಟಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಎಂ. ಬಿ. ಹೊಸಳ್ಳಿ ಹೇಳಿದರು. ಅವರು ಸಮೀಪದ ಮುನವಳ್ಳಿ ಪಟ್ಟಣದ ಜೆ. ಎಸ್. ಪಿ. ಸಂಘದ ಎಸ್. ಪಿ. ಜೆ. ಜಿ. ಸಂಯುಕ್ತ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಆರ್.ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರವೀಂದ್ರ ಯಲಿಗಾರ, ವಿ.ಎಸ್.ಯಕ್ಕುಂಡಿ, ಸುಧಾಕರ ರೇಣಕೆ, ಅಮಿತ ಕರೀಕಟ್ಟಿ. ಪ್ರಾ.ಎಸ್.ಆರ್.ವನಹಳ್ಳಿ, ಅರ್.ಎಚ್.ಪಾಟೀಲ, ಎಂ.ಪಿ.ಕಾಮಣ್ಣವರ, ಎಂ.ಎಫ್.ಮಕರವಳ್ಳಿ, ಎಸ್.ಎಸ್.ಎಂಟೆತ್ತನವರ, ಜ್ಯೋತಿ ಗಣಾಚಾರಿ, ಮೊಃಹನ ಕಾಮಣ್ಣವರ, ಎಂ.ಎ.ಕಮತಗಿ, ಎಂ.ಎಸ್.ಕಲಾದಗಿ, ಅಣ್ಣಪ್ಪಗೌಡ ಶಾನಭೋಗ, ಎಸ್.ಎನ್.ಸುಗತೆ, ರಾಕೇಶ ಕಾಮಣ್ಣವರ, ಉದಯ ಕಂಕಣವಾಡಿ, ಉಮೇಶ ಚುಳಕಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಂ.ಸೂರ್ಯವಂಶಿ, ಎಸ್.ಎಂ.ನಡುವಿನಮನಿ ಅವರಿಗೆ ಗೌರವ ಸನ್ಮಾನ ಜರುಗಿತು. ರುಕಮ್ಮ ತಳವಾರ, ಹಸೀನಾ ಮಣ್ಣೂರ, ಮಲ್ಲಿಕಾರ್ಜುನ ಮಣಿಕಟ್ಟಿ, ಸಹನಾ ಕಂಕಣವಾಡಿ, ಮೇಘಾ ಕಿತ್ತಳಿ, ಲಕ್ಷ್ಮೀ ಚಿಕಾಕಿ ಅವರಿಗೆ ಪ್ರತಿಭಾ ಪುರಸ್ಕಾರ ಜರುಗಿತು.
ಪಿ.ಎಫ್.ಪಟ್ಟಣಶೆಟ್ಟಿ ಸ್ವಾಗತಿಸಿದರು, ಸುಶೀಲಾ ಯಲಿಗಾರ, ಲಕ್ಷ್ಮೀ ಹಾಡಕಾರ ನಿರೂಪಿಸಿದರು. ಸಮೃದ್ಧಿ ಪಟ್ಟಣಶೆಟ್ಟಿ ವಂದಿಸಿದರು.