ಭತ್ರಿಯಲ್ಲಿ ಗಂಗೆ ಪೂಜೆ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಪಂಚಾಮೃತ ಅಭಿಷೇಕ, ಮಡಿ ತೇರು ಕಾರ್ಯಕ್ರಮ 

Ravi Talawar
ಭತ್ರಿಯಲ್ಲಿ ಗಂಗೆ ಪೂಜೆ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಪಂಚಾಮೃತ ಅಭಿಷೇಕ, ಮಡಿ ತೇರು ಕಾರ್ಯಕ್ರಮ 
WhatsApp Group Join Now
Telegram Group Join Now
ಬಳ್ಳಾರಿ ಆ 25. ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1946 ನೇ ಶ್ರೀ ಕ್ರೋಧಿನಾಮ ಸಂವತ್ಸರ ಶ್ರಾವಣಮಾಸ ಬಹುಳ ಸಪ್ತಮಿ ದಿನಾಂಕ : 26-08-2024 ನೇ 4ನೇ ಸೋಮವಾರ ಬೆಳಿಗ್ಗೆ : 06.00 ಗಂಟೆಯಿಂದ 10.30 ನಿಮಿಷದವರೆಗೆ ಭತ್ರಿಯಲ್ಲಿ ಗಂಗೆ ಪೂಜೆ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಪಂಚಾಮೃತ ಅಭಿಷೇಕ ಮತ್ತು ಮಡಿ ತೇರು ಕಾರ್ಯಕ್ರಮ ಜರುಗುವುದು.
ಶ್ರಾವಣಮಾಸ 4ನೇ ಸೋಮವಾರ ಸಂಜೆ: 04.30 ರಿಂದ 05.30 ನಿ। ದವರೆಗೆ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ. ಆದಕಾರಣ ಸಮಸ್ತ ಶ್ರೀ ಭತ್ರಿ ಈರಣ್ಣ ತಾತ ಹಾಗೂ ಲಕ್ಷ್ಮಿನರಸಿಂಹ ಸ್ವಾಮಿಯ ಭಕ್ತಾದಿಗಳು ಈ ಜಾತ್ರಾ ಮಹೋತ್ಸವಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದುಕೊಂಡು ಪ್ರಸಾದ ಮತ್ತು ನೈವೇದ್ಯ ಕಾರ್ಯಕ್ರಮದಲ್ಲಿ  ಭಾಗವಹಿಸಿ, ಭಕ್ತಾದಿಗಳೆಲ್ಲರು ಸಕುಟುಂಬ ಸಪರಿವಾರ ಸಮೇತರಾಗಿ ಆಗಮಿಸಿ ಭತ್ರಿ ಗ್ರಾಮದ ಶ್ರೀ ಭತ್ರಿ ಈರಣ್ಣ ಸ್ವಾಮಿಯ ಆಶೀರ್ವಾದ ಪಡೆದು ತಮ್ಮ ತನು-ಮನ, ಧನದಿಂದ ಸಹಕರಿಸಿ ತಾತನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ  ನಾರಾ ಭರತ್ ರೆಡ್ಡಿ ಶಾಸಕರು, ಬಳ್ಳಾರಿ ನಗರ ಹಾಗೂ  ಎಂ. ರಾಜೇಶ್ವರಿ ಸುಬ್ಬರಾಯುಡು ಮಹಾನಗರ ಪಾಲಿಕೆ ಮಾಜಿ ಮಹಾಪೌರರು,34ನೇ ವಾರ್ಡಿನ ಸದಸ್ಯರು ಬಳ್ಳಾರಿ ನಗರ ಭಾಗವಹಿಸಲಿದ್ದಾರೆ.
WhatsApp Group Join Now
Telegram Group Join Now
Share This Article