ಸೌಹಾರ್ದತೆಯ ಪ್ರತಿಕವೇ ಗಣೇಶ ಹಬ್ಬ: ಶಿವರಂಜನ ಬೋಳನ್ನವರ

Ravi Talawar
ಸೌಹಾರ್ದತೆಯ ಪ್ರತಿಕವೇ ಗಣೇಶ ಹಬ್ಬ: ಶಿವರಂಜನ ಬೋಳನ್ನವರ
WhatsApp Group Join Now
Telegram Group Join Now
ಬೈಲಹೊಂಗಲ- ದೇಶದ ಐಕ್ಯತೆ ಹಾಗೂ ಸೌಹಾರ್ದತೆಗೆ ಗಣೇಶ ಹಬ್ಬ ಪ್ರತೀಕವಾಗಿದೆ ಎಂದು ಚಿತ್ರ ನಟ ಶಿವರಂಜನಗೂಳ್ಳನವರು ಹೇಳಿದರು.  ನಗರದ ಕುಲಕರ್ಣಿ ಗಲ್ಲಿಯಲ್ಲಿ ವರಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಮಹಾಪೂಜೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಭಾರತ ದೇಶವು ಭಾವೈಕ್ಯತೆಯ ನಾಡು, ವಿಭಿನ್ನ ಬಗೆಯ ಆಚಾರ ವಿಚಾರಗಳ ಬೀಡು, ವಿವಿಧತೆಯಲ್ಲಿ ಏಕತೆಯನ್ನು ಸಾರುವಲ್ಲಿ ಗಣೇಶ ಹಬ್ಬವು ಒಂದಾಗಿದೆ.
           ಕಳೆದ 5 ವರ್ಷಗಳಿಂದ ವರಸಿದ್ಧಿ ವಿನಾಯಕ ಗೆಳೆಯರ ಬಳಗದವರು ಲೋಕ ಕಲ್ಯಾಣಾರ್ಥವಾಗಿ ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡುವುದರ 4ನೇ ದಿನದಂದು ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ಬನ್ನಿಸಿದರು.
          ಸಾನಿಧ್ಯ ವಹಿಸಿದ್ದ ವೇ.ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ ಕಳೆದ 5 ವರ್ಷಗಳಿಂದ ಈ ಭಾಗದ ಎಲ್ಲ ವರ್ಗದ ಜನರನ್ನೊಳಗೊಂಡು ಸೌಹಾರ್ದತೆ ಯನ್ನು ಸಾರುವ ನಿಟ್ಟಿನಲ್ಲಿ ವರಸಿದ್ಧಿ ವಿನಾಯಕ ಗೆಳೆಯರ ಬಳಗವು ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಶ್ಲಾಘನೀಯ ಎಂದರು.
 ವೇ.ಮೂ. ವೇ.ಮೂ. ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಗಳು ಪೂಜಾ ಕೈoಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ವೇ. ಮೂ.ಮೃತ್ಯುಂಜಯ ಯರಗುದ್ದಿಮಠ, ಮುಖಂಡರಾದ ಪಾಂಡಪ್ಪ ಇಂಚಲ, ಸೋಮಪ್ಪ ವಾಲಿ,ಶಿವಪ್ಪ ಲಿಂಬೆನ್ನವರ, ಬಸಪ್ಪ ಹುಲ್ಲಪ್ಪನವರ,ಸೋಮನಾಥ ಸೊಪ್ಪಿಮಠ,ವಿಠ್ಠಲ ಹಂಪಹೊಳಿ,ಪತ್ರಕರ್ತ ಈಶ್ವರ ಶಿಲ್ಲೇದಾರ, ಕುತುಬು ರುದ್ರಾಪುರ,ಮಹಾಂತೇಶ ಪಾಟೀಲ,ಈರಯ್ಯ ತೆಗ್ಗಿನಮಠ ಶ್ರೀಕಾರ ತೆಗ್ಗಿನಮಠ,ವಿಶ್ವನಾಥ ಹೊಸಮಠ,ಬಸವರಾಜ ಗೀರನವರ,ಆನಂದ ಲಿಂಬೆನ್ನವರ,ಶಂಕರ ಪಿರಗೋಜಿ,ವಿನೋದ ಗಿರೆನ್ನವರ,ಬಸವರಾಜ ಬೇವಿನಕೊಪ್ಪ,ಸಚಿನ ಬೆಳಗಾವಿ,ಶ್ರೀಶೈಲ ಹುಬ್ಬಳ್ಳಿ ವರಸಿದ್ಧಿ ವಿನಾಯಕ ಗೆಳೆಯರ ಬಳಗ ಸೇರಿದಂತೆ ಹಳೇಊರು ಭಾಗದ ಅಪಾರ ಜನತೆ ವರಸಿದ್ಧಿ ವಿನಾಯಕನ ದರುಶನ ಪಡೆದು ಪ್ರಸಾದ ಸವಿದು ಧನ್ಯತಾ ಭಾವ ಹೊಂದಿದರು.
WhatsApp Group Join Now
Telegram Group Join Now
Share This Article