ಗಂಗಾವತಿ : ವಿದ್ಯಾನಗರ ಶಾರದಾ ವಿದ್ಯಾ ಸಂಸ್ಥೆಯ ವಸತಿ ನಿಲಯದಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಣ್ಣಿನ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿ 9 ದಿನ ಪ್ರತಿಷ್ಠಾಪಿಸಿ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು, ಗುರುವಾರ ವಿಸರ್ಜನ ವೇಳೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಗಣೇಶನ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷಪಟ್ಟರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಸಂಕ್ರಾಂತಿ ಪ್ರಸಾದ್ ಮಾತನಾಡಿ ಗಣೇಶನ ಮೂರ್ತಿ ಚಿಕ್ಕದಾದರು ಪರವಾಗಿಲ್ಲ ಹಿಂದೂ ಸಾಂಪ್ರದಾಯಿಕ ಪ್ರಕಾರ ಪ್ರತಿಯೊಬ್ಬರು ಪರಿಸರ ಸ್ನೇಹ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಬೇಕು, ಪಿಒಪಿ ಗಣಪತಿಗಳನ್ನು ಪ್ರತಿಷ್ಠಾಪಿಸುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಬಗ್ಗೆ ಕಾಳಜಿವಹಿಸಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸಬೇಕೆಂದರು. ಕಾರ್ಯದರ್ಶಿಗಳಾದ ರಾವಿ ರಾಜಶೇಖರ್ ಮಾತನಾಡಿ ಯಾವುದೇ ಜಾತಿಭೇದ ಧರ್ಮವಿಲ್ಲದೇ ಸಂತೋಷದಿಂದ ಎಲ್ಲರೂ ಕೂಡಿ ಆಚರಿಸುವ ಹಬ್ಬವೇ ಗಣೇಶ ಚತುರ್ಥಿ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್ ಪ್ರಸಾದ, ಕಾರ್ಯದರ್ಶಿಗಳಾದ ರವಿ ರಾಜಶೇಖರ್ , ಕೋಟೇಶ್ವರ ರಾವ್ ಸಹಕಾರ್ಯದರ್ಶಿ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಟಿ.ವಿ.ಸತ್ಯನಾರಾಯಣ, ಕಲ್ಯಾಣಂ ಜಾನಕಿ ರಾಮ್, ಎಸ್ ವೆಂಕಟೇಶ್ವರ ರಾವ್ ,ಟಿ.ವಿ. ಸುಬ್ಬರಾವ್, ರಾಯುಡು, ಕೆ.ಬಿ.ಗೋಪಾಲಕೃಷ್ಣರೆಡ್ಡಿ ಸಂಸ್ಥೆಯ ಆಡಳಿತ ಅಧಿಕಾರಿಗಳು ಶಾರದಾ ವಿದ್ಯಾ ಸಂಸ್ಥೆಯ ಉಪನ್ಯಾಸಕ ವೃಂದ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.