ಬೆಟಗೇರಿ,24: ನಗರದ ಬಳ್ಳಾರಿ ಅಂಡರ್ ಬ್ರಿಡ್ಜದಲ್ಲಿ ಹಲವಾರು ವರ್ಷಗಳಿಂದ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೀವ್ರವಾದ ತೊಂದರೆಯನ್ನು ಅನುಭವಿಸುತ್ತಿರುವ ಪ್ರಸಂಗ ಗಮನಿಸಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ೯-೯-೨೦೧೪ ರಂದು ನಗರದ ಕೋರ್ಟ ಕಡೆಗೆ ಇರುವ ಅಂಡರ ಬ್ರಿಡ್ಜದಲ್ಲಿ ರಸ್ತಾರೋಖೋ ಕಾರ್ಯಕ್ರಮ ಹಮ್ಮಿಕೊಂಡು ಹೋರಾಟ ಪ್ರಾರಂಭಿಸಿದಾಗ ೨೦ ದಿನಗಳಲ್ಲಿ ಕ್ರಮ ಕೈಕೊಳ್ಳುವದಾಗಿ ಜಿಲ್ಲಾಧಿಕಾರಿಗಳು ಹಾಗೂ
ನಗರಸಭಾ ಆಯುಕ್ತರು ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಗಿತ್ತೆಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಜ್ಞಾಪಿಸಿದ್ದಾರೆ.
ಅದರ ಪ್ರತಿಫಲವಾಗಿ ಸಮಿತಿ ವಿನಂತಿ ಮೇರೆಗೆ ಗದಗ ಬೆಟಗೇರಿ ನಗರಸಭೆ ಇಂಜನಿಯರುಗಳು ಹಾಗೂ ನಗರದ ಅನುಭವಿಕ ಇಂಜನೀಯರುಗಳ ಸಂಯುಕ್ತ ಸಭೆಯು ನಗರದ ಮಾಡಳ್ಳಿ ಇಂಜನೀಯರ ಅವರ ಮನೆಯಲ್ಲಿ ದಿ. ೨೪-೯-೨೦೧೪ ರಂದು ಸಭೆ ಸೇರಿ ಬಳ್ಳಾರಿ ಅಂಡರ್ ಬ್ರಿಡ್ಜದಿಂದ ಪಟಗಟ್ಟಿ ತೋಟದ ಸಮೀಪ ಇರುವ ನಾಲಕ್ಕೆ ಸುಮಾರು ೪೭೨ ಮೀ. ಉದ್ದ ನಾಲ್ಕು ಪೂಟ್ ಸುತ್ತಳತೆಯ ಪೈಪು ಅಳವಡಿಸಿ ಅದರ ಮೂಲಕ ಬ್ರಿಡ್ಜದಲ್ಲಿ ಬರುವ ನೀರು ನಾಲಾಕ್ಕೆ ಹರಿದು ಹೋಗುವಂತೆ ಕ್ರಮ ಕೈಕೊಳ್ಳಲು ನಿರ್ಧರಿಸಲಾಗಿತ್ತು ಅಂದಿನ ಸಭೆಯಲ್ಲಿ ನಗರಸಭೆ ಇಂಜನೀಯರುಗಳಾದ ಪತ್ತಾರ, ಶಿವರಾಂ ಹಾಗೂ ಖಾಸಗಿ ಅನುಭವಿಕ ಇಂಜನೀಯರುಗಳಾದ ಮಾಡಳ್ಳಿ, ವಿ.ಎಲ್. ಪಾಟೀಲ, ಬಿ.ಎ. ಬ್ಯಾಳಿ, ಮಲ್ಲಿಕಾರ್ಜುನ ಐಲಿ, ಈಶ್ವರ ಸಮಗಂಡಿ, ವಿ.ಎಚ್. ಡಂಬಳ, ಎ.ಪಿ.ಕೋಟಿಗೌಡ್ರ, ಬಿ.ಜೆ. ಬಾಕಳೆ, ಆರ್.ಎನ್. ತುಕ್ಕಾ, ಎಸ್.ಎಂ. ಅಂಗಡಿ,ಹಾಗೂ ಎಚ್.ಎಸ್. ಬಸವಣ್ಣವರ ಉಪಸ್ಥಿತರಿದ್ದು ನೀಡಿದ ಸಲಹೆಗೆ ಒಪ್ಪಿ
ನಗರಸಭೆ ಅದರಂತೆ ಕ್ರಮ ಕೈಕೊಂಡಾಗ ಅಲ್ಲಿಂದ ೧೯-೦೪-೨೦೨೪ ರ ವರೆಗೆ ಸಮಸ್ಯ ಬಗೆ ಹರಿದು ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಿತ್ತೆಂದು ಗಣೇಶಸಿಂಗ್ ಬ್ಯಾಳಿ ನೆನಪಿಸಿದ್ದಾರೆ. ಆದರೆ ಗದಗ-ಬೆಟಗೇರಿ ನಗರಸಭೆಯಿಂದ ಆ ಭಾಗದಲ್ಲಿ ಅಳವಡಿಸಿದ್ದ ನಾಲ್ಕು ಪೂಟ್ ಸುತ್ತಳತೆಯ ಪೈಪುಗಳಲ್ಲಿ ಕಸ ಕಡ್ಡಿ