ಬಳ್ಳಾರಿ30./ : ತಾಲ್ಲೂಕಿನ ಸಂಜೀವರಾಯನಕೋಟೆ ಗ್ರಾಮದ ಮೀಂಚೇರಿ ಕುರುಬರ ಓಣಿಯಲ್ಲಿ ಸಮೃದ್ಧಿಯ ಸಂಕೇತವಾಗಿ ಸ್ವರ್ಣ ಗೌರಿ ಮತ್ತು ವಿಘ್ನ ನಿವಾರಕ ಗಣಪತಿಯನ್ನು ಪ್ರತಿಷ್ಟಾಪಿಸಿ ತಳಿರು ತೋರಣಗಳಿಂದ ಅಲಂಕೃತ ಮಂಟಪಗಳಲ್ಲಿ ಅಲಂಕರಿಸಿ ಪೂಜಿಸಲಾಯಿತು.
ಪೆಂಡಾಲ್ ಆವರಣದ ಶಾಶ್ವತ ಮಂಟಪವನ್ನು ಕೊಂಡಪ್ಪನವರ ವಿಜಯನವರ ಕುಟುಂಬದವರು ನಿರ್ಮಿಸಿದ್ದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಯಿತು.
ಸರ್ವರಿಗೂ ಪ್ರಸಾದ ಮಾಡಿಸಿ ಬಡಿಸುವ ಕಾರ್ಯ ವನ್ನು ಗ್ರಾಮದ ಮೇಘರಾಜ್ ರವರ ಪತ್ನಿ ಅನಂತಮ್ಮ ಎಂಬುವರು ನೇರವೇರಿಸಿದರು. ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ಕೆ ಅಗಮಿಸಿದ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯರ್ಶಿ ಆರ್ . ಸೋಮಶೇಖರ ಗೌಡ ಮಾತನಾಡುತ್ತ ಗ್ರಾಮದ ಮೀಂಚೇರಿ ಕುರುಬರ ಓಣಿಯ ಯುವಕರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಳೆದ 5 ವರ್ಷಗಳಿಂದ ವಿಶೇಷವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಸೌರ್ಹಾದಯುತವಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಮೋಕಾ ಮತ್ತ ರೂಪನಗುಡಿ ಬ್ಲಾಕ್ ಅಧ್ಯಕ್ಷ ಉಮೇಶ್ ಗೌಡ ಮಾತನಾಡಿ, ಮಿಂಚೇರಿ ಕುರುಬರ ಓಣಿ ಯುವಕರು ಸಮಿತಿಯು 5 ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು. ವಿಶೇಷವಾಗಿ ಮಹೋತ್ಸವಕ್ಕೆ ಎಲ್ಲಾ ವರ್ಗದ ಭಕ್ತರು ಕೈ ಜೋಡಿಸುವುದು ಹೆಗ್ಗಳಿಕೆಯಾಗಿದೆ, ಈ ಮೂಲಕ ಶಾಂತಿ ಸೌರ್ಹಾದತೆಗೆ ಹೆಸರಾಗಿರುವ ಈ ಗಣಪತಿಯಿಂದಾಗಿ ಗ್ರಾಮದ ಕೀರ್ತಿ ಹೆಚ್ಚಿದೆ ಎಂದರು.
ಗ್ರಾಮದ ಯುವ ಮುಖಂಡ ಹಾಗೂ ಜಿಲ್ಲಾ ವರದಿಗಾರ ಹೊನ್ನುರಸ್ವಾಮಿ ಕೆ ಟಿ ಮಾತನಾಡಿ ಮೀಂಚೇರಿ ಕುರುಬರ ಓಣಿ ನಾಗಪ್ಪ ಕಟ್ಟೆ ಬಳಿ ಗ್ರಾಮದ ಹಿರಿಯ ಮುಖಂಡರಾದ ಸೋಮನಗೌಡ, ಉಮೇಶ್ ಗೌಡ, ಹಾಗೂ ಗ್ರಾಮಕ್ಕೆ ನೆರಳಂತಿರುವ ಅಲ್ಲಂ ಪ್ರಶಾಂತ್ ಮೈನಿಂಗ್ ಮಾಲಿಕ ಮಾಜಿ ಸಚಿವರಾದ ಅಲ್ಲಂ ವಿರಭದ್ರಪ್ಪನವರ ಪುತ್ರ ಅಲ್ಲಂ ಪ್ರಶಾಂತ್ , ಗ್ರಾಮ ಪಂಚಾಯತಿ ಸದಸ್ಯರುಗಳಾದ ತಳ್ಳೆಪ್ಪ ಹೊನ್ನುರಪ್ಪ, ಯುವ ಪ್ರೀಯ ತಿಮ್ಮಿ ತಿಮ್ಮಪ್ಪ ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಸುಮಲತ ಮತ್ತು ಅಟೋ ಹೊನ್ನುರಪ್ಪ ಇವರುಗಳ ಸಹಕಾರದಿಂದ ಇಲ್ಲಿಗೆ 5 ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದೆವೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಸಂಭ್ರಮದಿಂದ ಹಬ್ಬ ಆಚರಿಸಿ ಗ್ರಾಮದ ಜನತೆಯ ಮೆಚ್ಚುಗೆ ಪಡೆದಿದ್ದೆವೆ ಎಂದರು.
ನಂತರ ವಿಘ್ನ ನಿವಾರಕನನ್ನು ಅದ್ಧೂರಿ ಮೆರವಣಿಗೆಯಲ್ಲಿ ಕೊಂಡೊಯ್ದು ನಿಮಜ್ಜನ ಮಾಡಲಾಯಿತು ಗ್ರಾಮದ ಜನರೆಲ್ಲಾ ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆ ಜೈಕಾರ ಹಾಕಿದರು.
ಮೆರವಣಿಗೆಯುದ್ದಕ್ಕೂ ಎಲ್ಲೆಡೆ ಭಗವಾದ್ವಜಗಳು ರಾರಾಜಿಸಿದವು. ಡಿಜೆ ವಾದ್ಯಗಳಿಗೆ ಯುವರು ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.ಗಣೇಶನ ಮೆರವಣಿಗೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಾಗಪ್ಪ ಕಟ್ಟೆಯಿಂದ ಆರಂಭವಾದ ಗಣೇಶ ನಿಮಜ್ಜನ ಮೆರವಣಿಗೆ ನಂದವರಪ್ಪ ದೇವಸ್ಥಾನ ದಿಂದ ಕಲ್ಲಪನವರ ಅಂಗಡಿ ಸರ್ಕಲ್ ಮಾರ್ಗವಾಗಿ ಪಾಂಡುರಂಗ ದೇವಸ್ಥಾನ, ಊರ ಮುಂದಿನ ಬಸವಣ್ಣನ ದೇವಸ್ಥಾನ ದಿಂದ ಹೆಚ್ ಎಲ್ ಸಿ ಕಾಲುವೆಗೆ ತೆರಳಿತು. ಅದ್ಧೂರಿಯಾಗಿ ನಡೆದ ಮೀಂಚೇರಿ ಕುರುಬರ ಓಣಿ ಬಾಯ್ಸ್ ನ ಗಣೇಶೋತ್ಸವ ಶಾಂತ ರೀತಿಯಲ್ಲಿ ಮುಕ್ತಾಯವಾಯಿತು.
ಈ ಕಾರ್ಯದಲ್ಲಿ ಯುವಕರುಗಳಾದ ವಿಠಲ, ರಘ, ಡಿಶ್ ಸುದಿಪ್, ಮನೋಜ್, ವಂಶಿ, ನಿಲಮ್ಮನವರ ಸುದಿಪ್, ಪಂಪಾಪತಿಯವರ ಸುದಿಪ್, ಮಾರಿ ಶಂಕರ್ , ಶಿವಶಂಕರ್, ಕಿರಣ, ಸಂದಿಪ್ , ಕಾರ್ತಿಕ್, ನಂದಿಶ್, ತರುಣ್ ಕುಮಾರ್ ಕೆ.ಹೆಚ್, ಪ್ರಜವಲ್, ಗಾದಿಲಿಂಗ, ಶಂಕರ್, ಶಶಿ, ಸೇಖರಿ, ಅಟೋ ಪೊಂಡು ನಾಗ, ನಾಗದೇವ, ವರುಣ್ , ಪಿಟರಿ ಪಾಂಡು, ವಂಶಿ ಇನ್ನಿತರ ಯುವಕರು ಭಾಗಿಯಾಗಿದ್ದರು.