ಮೂಡಲಗಿ : ೨೦೨೩-೨೪ ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. ಡಿಸೆಂಬರ್ ೦೧ ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ ಹಾಲನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಸಮ್ಮುಖದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಶಿವಾಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಲ್ ಬಬಲಿ ಹಾಗೂ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ,ಸ್ಮರಣಿಕೆ ಹಾಗೂ ೫ ಲಕ್ಷ ರೂ. ಪ್ರೋತ್ಸಾಹ ದನವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿಗಳು ಹಸಿರುಕ್ರಾಂತಿ ಪತ್ರಿಕೆ ಜೊತೆ ಮಾತನಾಡಿ, ಗಾಂಧಿ ಗ್ರಾಮ ಪ್ರಶಸ್ತಿ ಸಿಗಲು ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಶಿವಾಪೂರ ಪಂಚಾಯಿತಿಗೆ ವಿಶೇ? ಒತ್ತು ಕೊಟ್ಟು ಮೂಲಭೂತ ಸೌಕರ್ಯ ಗಳನ್ನು ಒದಗಿಸಿ ಕೊಟ್ಟಿದ್ದಾರೆ. ಗ್ರಾಮದ ಮುಖಂಡರಾದ ದಿ.ಶಿವನಗೌಡ ಶಂಕರಗೌಡ ಪಾಟೀಲ, ಎಸ್.ವಾಯ ಜುಂಜರವಾಡ, ಕೆ.ಬಿ ಮುಧೋಳ, ಐ.ಬಿ ಬೆಳಗಲಿ, ಎಸ್.ಡಿ ಪಾಟೀಲ, ಕೆ.ಜಿ ಮುಧೋಳ ಸೇರಿದಂತೆ ಗ್ರಾಮದ ಎಲ್ಲ ಮುಖಂಡರು, ಗ್ರಾಮಸ್ಥರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಪಂಚಾಯತನ ಉಪಾಧ್ಯಕ್ಷರು ಎಂ.ಎಂ ಜುಂಜರವಾಡ ಸೇರಿದಂತೆ ಎಲ್ಲ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆ. ಪ್ರಶಸ್ತಿ ಸಿಕ್ಕಿದ್ದರಿಂದ ಗ್ರಾಮದ ಅಭಿವೃದ್ಧಿಗೆ ಮತ್ತ? ಉತ್ತೇಜನ ನೀಡಿದೆ ಎಂದು ತಿಳಿಸಿದರು.


