ಬೀದರ: ಚನ್ನಬಸವ ಪಟ್ಟ ದೇವರು ಜಿಲ್ಲಾ ರಂಗ ಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಪದ್ಮಶ್ರೀ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ ಮೂಲಕ ರಾಜ್ಯ ಮಟ್ಟದ ಗಡಿ ಕನ್ನಡಿರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವಮ ಅದೂರಿಯಾಗಿ ಜರುಗಿತು.
ಮೈಸೂರು ದಸರಾದಲ್ಲಿ ಹಾಡಿರುವ ಮಂಡ್ಯ ಜಿಲ್ಲೆಯ ಖ್ಯಾತ ಗಾಯಕ ಪಂಡಿತ ಪುಟ್ಟರಾಜ ಗವಾಯಿ ರವರ ಶಿಷ್ಯರಾದ ಡಾ. ಶ್ರೀಕಾಂತ ಚಿಮಲ್ ಗುಂಡಪ್ಪ ಕಟ್ಟಿ ದತ್ತುರಾಜ ಕೀರ್ತಿಕರ್, ವಿಜಯಲಕ್ಷ್ಮೀ ಕಟ್ಟಿ, ಬೀದರನ ಜಗನ್ನಾಥ ಬೇಂದ್ರ, ಶಿವರಾಜ ತಟಪಳ್ಳಿ, ಶೇಷಪ್ಪ ಚಿಟ್ಟಾ, ಸಿದ್ದಲಿಂಗ ಯಲ್ಲಾಲಿಂಗ, ರಂಗಭೂಮಿ ಕಲಾವಿದೆ ಕಾವೇರಿ ಕಲಬುರ್ಗಿ, ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ತಿಳಿಸಿಕೊಡುವ ಹಾಡುಗಳನ್ನು ಹಾಡಿದರು. ನಾಡುಗೀತೆ ದಿಯಾನ್ ನಾದವೇದಿಕೆ ಸಂಗೀತ ಫೌಂಡೆಷನ್ ತಂಡದವರು ಹಾಡಿದರು.
ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವಿಶ್ವನಾಥ ಜಿ.ಪಿ ಬೆಂಗಳೂರು ರವರು ಅಧ್ಯಕ್ಷತೆಯಲ್ಲಿ ರಾಷ್ಟ್ರ ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಬಾವನಾ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯೋತ್ಸ ಪ್ರಶಸ್ತಿ ಪುರಸ್ಕೃತರಾದ ಮಡಿವಾಳಯ್ಯ ಶಿವಲಿಂಗಯ್ಯಾ ಸಾಲಿ ಇಂಡಿಯಾನ ಐಡಲ ಖ್ಯಾತಿ ಸರಿಗಮಪ ಸೀಜನ್ 21 ವಿಜೇತ ಶಿವಾನಿ ಶಿವದಾಸ ಸ್ವಾಮಿ, ವಿದೇಶದಲ್ಲಿ ಕನ್ನಡ ಸೇವೆ ಮಾಡುತ್ತಿರುವ ಭೀಮ್ ನಿಲಕಂಠ ಹಂಗರಗಿ, ರವಿದಾಸ ಕಾಂಬಳೆ ಡಾ ದೊಡ್ಡಪ್ಪ ಪೂಜಾರಿ, ಹೊರ ರಾಜ್ಯದಲ್ಲಿ ಕನ್ನಡ ಸೇವೆ ಮಾಡುತ್ತಿರುವ ಡಾ. ರಮೇಶ ಮೂಲಗೆ ಜಿ ಚಂದ್ರಕಾಂತ ಡಾ. ಕೆ ಎಸ್ ಬಂಧು ಸಿದ್ದೇಶ್ವರ, ಜಗನ್ನಾಥ ಬೇಂದ್ರೆ, ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪಂಚ್ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡ್ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿಭಾಗಿ ಸಂಚಾಲಕ ಉಮೇಶಕುಮಾರ ಸೋರಳ್ಳಿಕರ್ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಉಪಾಧ್ಯಕ್ಷ ರವಿ ವಂಟೆ, ಶಿವಾಜ ಚಹ್ವಾನ ಜಿಲ್ಲಾಧ್ಯಕ್ಷ ಮುಕೇಶ ಶಾಹಾಗಂಜ್ ಉಪಾಧ್ಯಕ್ಷ ಬಸವರಾಜ ಜಡಗೆ, ಪ್ರಧಾನ ಕಾರ್ಯದರ್ಶಿ ಅಂಬಾದಾಸ ಸೈನೆ ಸಂದೀಪ ಚಾಂಬೋಳ, ತಾಲ್ಲೂಕಾಧ್ಯಕ್ಷ ಬಾಬುರಾವ ಕೆ ಬಿಟ್ಟೆ, ನಗರ ಅಧ್ಯಕ್ಷ ಬಗವಾನ ಯಾದವ, ತಾಲ್ಲೂಕ ಕಾರ್ಯದರ್ಶಿ ಕುಪೇಂದ್ರ ಹೊಸಮನಿ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಕರ್ನಾಟಕ ರಕ್ಷಣಾ ವೇದಿಕೆ ಕಾವುಲುಪಡೆ ರಾಜ್ಯ ಉಪಾಧ್ಯಕ್ಷ ವಿ ಎಂ ಭಂಗೂರೆ, ಜಿಲ್ಲಾಧ್ಯಕ್ಷ ಅವಿನಾಶ ಬುದೇರಾಕರ್ ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ ಸಮಾಜ ಸೇವಕರಾದ ಶಶಿಕುಮಾರ ಎಸ್ ಪೊಲೀಸ್ ಪಾಟೀಲ್ ವಿಶ್ವ ಕನ್ನಡಿಗರ ಸಂಸ್ಥ ಉಪಾಧ್ಯಕ್ಷ ಪ್ರಕಾಶ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಖಜಾಂಚಿ ಶಾರದ ಸದಸ್ಯರಾದ ತೇಜಮ್ಮಾ ಸಂಗೀತಾ ರವಿಕುಮಾರ ಕಸ್ತೂರಬಾಯಿ ಉಪಸ್ಥಿತರಿದರು.
ಕಾರ್ಯಕ್ರಮ ನಿರೂಪಣೆ ಡಾ. ಸುನೀತಾ ಬಿಕ್ಲೆ ಮಾಡಿದರು.


