ಬೈಲಹೊಂಗಲ. ಸಮೀಪದ ಆನಿಗೋಳ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಆನಿಗೋಳ ಇವರ ವತಿಯಿಂದ ಬೆಳೆಸಾಲ ವಿತರಣೆ ಹಾಗೂ ಟ್ಯ್ರಾಕ್ಟರ್ ವಿತರಿಸುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರಮಾತನಾಡಿ ಬರುವ ದಿನಗಳಲ್ಲಿ ಸಂಘದ ಕಾರ್ಯಗಳು ಸಂಪೂರ್ಣ ಡಿಜಿಟಲಿಕರಣಗೊಂಡು ಗ್ರಾಹಕರಿಗೆ ತ್ವರಿತ ರೀತಿಯಲ್ಲಿ ಸೇವೆ ಒದಗಲಿದೆ. ಸಂಘದ ವತಿಯಿಂದ ಇಗಾಗಲೇ ವಾಹನ ಸಾಲ,ಬೆಳೆ ಸಾಲ,ಆರೋಗ್ಯ ವಿಮೆ,ರಸಗೊಬ್ಬರ ವಿತರಣೆ ಜಾರಿಯಲ್ಲಿದ್ದು ಇನ್ನಷ್ಟು ಪ್ರಗತಿ ಹೊಂದಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ವಿತರಣೆಯಲ್ಲಿ ಮೂಂಚುಣಿಯಲ್ಲಿರುವ ಆನಿಗೋಳ ಸಂಘದ ಬಗ್ಗೆ ಸುತ್ತ ಮುತ್ತಲಿನ ಗ್ರಾಮಗಳ ರೈತರ ಹೊಗಳಿಕೆ
ನಿಷ್ವಾರ್ಥ ಸೇವೆಯ ಕೈಗನ್ನಡಿ ಎಂದು ಬಣ್ಣಿಸಿದರು.
ಸಂಘದ ಅಧ್ಯಕ್ಷರಾದ ಸುನೀಲ ಮರಕುಂಬಿ ಮಾತನಾಡಿ ಮಹಾಂತೇಶ ಅಣ್ಣಾ ದೊಡಗೌಡರ ಮಾರ್ಗದರ್ಶನ ಹಾಗೂ ಸಹಕಾರದಿಂದ ನಮ್ಮ ಸಂಘವು ಪ್ರಗತಿಯನ್ನು ಸಾದಿಸುತ್ತಿದ್ದು ಬರುವ ದಿನಗಳಲ್ಲಿ ಸಂಘಕ್ಕೆ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದು ರೈತ ಭಾಂದವರೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು..
ಈ ಸಂದರ್ಭದಲ್ಲಿ ತಾಲೂಕಾ ನಿಯಂತ್ರಣಾಧಿಕಾರಿಗಳಾದ ವಿರುಪಾಕ್ಷ ಗಿರನವರ,ಬ್ಯಾಂಕ್ ನಿರಿಕ್ಷಕರಾದ ರಾಜು ಗೂಳಣ್ಣವರ ,ಸಂಘದ ಉಪಾಧ್ಯಕ್ಷರಾದ ನಾಗಪ್ಪ ಜಕಾತಿ,ಎಲ್ಲ ನಿರ್ದೇಶಕರು, ಸಿಬ್ಬಂದಿವರ್ಗ ಮತ್ತು ರೈತರು ಹಾಜರಿದ್ದರು.