ಹರಪನಹಳ್ಳಿ : ಪಟ್ಟಣದ 5ನೇ ವಾರ್ಡ್ ಬಾಪೂಜಿನಗರದಲ್ಲಿ ಕೇರಿಯ ಮುಖಂಡರು ಹಾಗೂ ಬಾಣಗೇರಿಯ ಮುಸ್ಲಿಂ ಭಾಂದವರು ಸೇರಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತಿ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಸರಳವಾಗಿ ಆಚರಣೆ ಮಾಡಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಲು ಬ್ರೆಡ್ ವಿತರಣೆ ಮಾಡಲಾಯಿತು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ ) ತಾಲೂಕು ಅಧ್ಯಕ್ಷರಾದ ಸುಭಾಷ್ ಮಾತನಾಡಿ 2022 ರಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತಿ ಯನ್ನು ಮುಸ್ಲಿಂ ಭಾಂದವರು ನಮ್ಮ ಜೊತೆ ಸೇರಿ ತುಂಬಾ ವಿಜೃಂಭಣೆ ಇಂದ ಆಚರಣೆ ಮಾಡಿದ್ದೆವು ಅದೇ ರೀತಿ ಈ ವರ್ಷ ಕೂಡ ಅದಕ್ಕಿನ ಜಾಸ್ತಿ ಮಾಡಬೇಕು ಅಂತಾ ಅಂದುಕೊಡಿದ್ದೆವು ಆದರೆ ಈ ಸರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಇರೋದ್ರಿಂದ ಆಚರಣೆ ಮಾಡೋಕೆ ಆಗಲಿಲ್ಲ ಮುಂದಿನ ವರ್ಷ ಇನ್ನು ವಿಜೃಂಭಣೆ ಇಂದ ಮಾಡ್ತೀವಿ ಎಂದು ಹೇಳಿದರು.
ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕೆ ಪುಷ್ಪರ್ಚಾನೆ ಮಾಡಿ ಮುಸ್ಲಿಂ ಭಾಂದವರಿಗೆ ಸಿಹಿ ಅಂಚಿ ಬಾಣಗೇರಿಯ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು
ಈ ಸಂದರ್ಭದಲ್ಲಿ ಮುಖಂಡರಾದ ಬಿದ್ದಾಡಿ ಮಹೇಂದ್ರಕುಮಾರ್, ಮಾಳಗಿ ರಮೇಶ್, ಸವಣುರು ಯಲ್ಲಪ್ಪ. ಎಂ ಆಂಜಿನೇಪ್ಪ. ಮಂಜಪ್ಪ,
ಚಂದ್ರಪ್ಪ, ಮರಿಯಪ್ಪ, ರಾಮಪ್ಪ, ನಾಗೇಂದ್ರಪ್ಪ,ನಿಂಗಪ್ಪ,ಮಾಳಗಿ ಪ್ರಕಾಶ್,ನವೀನ್, ಪ್ರಕಾಶ್ ಸಿ, ಮೂಕಪ್ಪ, ಶ್ರೀಕಾಂತ್, ನಿಂಗರಾಜು, ಭರತ್, ಮಲ್ಲಿಕಾರ್ಜುನ , ನಾಗರಾಜ್ ಬಿ, ಕೋಟೆಪ್ಪ, ಛತ್ರಪತಿ, ಬಾಣಗೇರಿಯ ಮುಖಂಡರು ಹಾಗೂ ಬಾಪೂಜಿನಗರ ದ ಎಲ್ಲ ಮುಖಂಡರು ಉಪಸ್ಥಿತರಿದ್ದರು,