ಬಲಿಯಾದವಳಿಂದ ವಿಜಯನಿಯಾಗುವವರೆಗೆ

A B
By A B
ಬಲಿಯಾದವಳಿಂದ ವಿಜಯನಿಯಾಗುವವರೆಗೆ
WhatsApp Group Join Now
Telegram Group Join Now
ಬಳ್ಳಾರಿ, ಮಾ.12:  ಮಹಿಳಾ ಸಪ್ತಾಹ 2026 ಅಡಿಯಲ್ಲಿ  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವನ್ನು ವಕೀಲರಾದ ಶ್ರೀಮತಿ ಶಿವಲೀಲಾ ಅವರು “ಬಲಿಯಾದವಳಿಂದ ವಿಜಯನಿ ಯಾಗುವವರೆಗೆ ಕಾನೂನು ಜಾಗೃತಿ “ವಿಷಯ ಕುರಿತು ಮಾತನಾಡಿ ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಅನೇಕ ಕಾನೂನುಗಳಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೂ ಕೂಡ ಈ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸಮಾಜದಲ್ಲಿ ಭದ್ರತೆ ಗೆ ಮಹತ್ವ ಕೊಡದಿದ್ದರೆ ಪುರುಷರಿಗಿಂತ ಮಹಿಳೆಯ ಸರಾಸರಿ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಅವಳಿಗೆ ಮಹತ್ವ ಕೊಡುವುದರ ಮೂಲಕ  ಬ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯ ವಿವಾಹ, ಮೂಢನಂಬಿಕೆಗಳಂತಹ ಪದ್ಧತಿಗಳನ್ನು ರದ್ದುಪಡಿಸುವುದರ ಮೂಲಕ ಮಹಿಳೆಯರ ಸಂಖ್ಯೆ ಪುರುಷರು ಸರಾಸರಿ ಗೆ ಅನುಗುಣವಾಗಿ ನೋಡಿಕೊಳ್ಳಬೇಕಾಗಿದೆ. ಹಾಗೂ ಮದುವೆಯಾದ ಗಂಡು, ಹೆಣ್ಣನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಒಳಗೆ ಕಾನೂನು ಪ್ರಕಾರ ಜೀವನಾಂಶ ಕೊಡಬೇಕು. ಹಾಗೂ ಅವಳನ್ನು ಸುರಕ್ಷಿತವಾಗಿ ಬದುಕಲು ಬಿಡಬೇಕು ಆಗ ಮಾತ್ರ ಕಾನೂನುಗಳ ಸರಿಯಾದ ಬಳಕೆಯಾಗುತ್ತದೆ ಎಂದರ್ಥ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕೆ ಮಲ್ಲಿಕಾರ್ಜುನ ಅವರು ಮಾತನಾಡಿ ಮಹಿಳೆ ರಕ್ಷಿತವಾಗಿ ಬದುಕಲು ಭಾರತೀಯ ಕಾನೂನು ಸಾಕಷ್ಟು ಬಲಿಷ್ಠವಾಗಿದೆ. ನಿಮಗೆ ಯಾರಿಂದನಾದರೂ ಅನ್ಯಾಯವಾದಾಗ ಅವುಗಳನ್ನು ಬಳಸಿಕೊಂಡು ಕಾನೂನಾತ್ಮಕವಾಗಿ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ರಕ್ಷಣೆಯನ್ನು ಪಡೆದುಕೊಂಡು ಸುರಕ್ಷಿತ ಜೀವನ ಸಾಗಿಸಲು ನೀವು ಕಾನೂನಿನ ರಕ್ಷಣೆ ಪಡೆದುಕೊಳ್ಳಬೇಕು ಹಾಗೂ ಎಲ್ಲರಿಗೂ ಬದುಕಲು ಹಕ್ಕು ಎಲ್ಲರಿಗೂ ಇದೆ ಎಂದು ಕರೆ ನೀಡಿದರು.
 ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿನಿಯರು,ಬೋಧಕ ಹಾಗೂ  ಬೋಧಕೇತರ ಸಿಬ್ಬಂದಿಯವರು  ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಿಂದ ಹೆಣ್ಣು ಭ್ರೂಣ ಹತ್ಯೆ,  ಮದ್ಯಪಾನದಿಂದ ಆಗುವ ಪರಿಣಾಮಗಳು ಹಾಗೂ ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ವಿದ್ಯಾರ್ಥಿನಿಯರ ನಾಟಕ ಪ್ರದರ್ಶನ ಸ್ಪರ್ಧೆಯನ್ನು  ಆಯೋಜಿಸಲಾಗಿತ್ತು.
WhatsApp Group Join Now
Telegram Group Join Now
Share This Article