ನೇಸರಗಿ. ಇಲ್ಲಿಗೆ ಸಮೀಪದ ಮುರಕಿಭಾವಿ ಗ್ರಾಮದ ಪುಣ್ಯಭೂಮಿ ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ 37 ನೇ ವೇದಾಂತ ಪರಿಷತ ಮತ್ತು ಜಾತ್ರಾ ಮಹೋತ್ಸವವು ಬುಧವಾರ ದಿ. 02-04-2025 ರಿಂದ 7-4-2025 ರವರೆಗೆ ನೆರವೇರಲಿದೆ. ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಇಂಚಲದ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳ ಸದಿಚೆಯ ಮೇರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ದಿ. 2 ರಂದು ಸದ್ಗುರು ಸಿದ್ದಾರೂಢ, ಸದ್ಗುರು ಗುರುನಾಥರೂಢ, ಸದ್ಗುರು ಸಿದ್ದಲಿಂಗೇಶ್ವರ್, ಶ್ರೀ ರುದ್ರಪ್ಪ ಶರಣರ, ಶ್ರೀ ಮುಕ್ತಾನಂದ ಭಾರತಿ ಪರಮಹಂಸರ ಕರ್ತು ಗದ್ದುಗೆ ಪೂಜೆ, ಅಗ್ನಿಕುಂಡ, ವೇದಾಂತ ವೇದಿಕೆಯ ಉದ್ಘಾಟನೆ ನಡೆಯಲಿದೆ. ಪ್ರತಿದಿನ ಬೆಳ್ಳಿಗೆ 6-30 ರಿಂದ 7-30 ರವರೆಗೆ ಮಹಾತ್ಮರಿಂದ ಭಗವದ್ಗೀತ ಪಾರಾಯಣ, ಬೆಳ್ಳಿಗೆ 9 ರಿಂದ 11 ರ ವರೆಗೆ ಮತ್ತು ರಾತ್ರಿ 9 ರಿಂದ 10 ರವರೆಗೆ ವಿವಿಧ ವಿಷಯಗಳ ಕುಳಿತು ಪ್ರವಚನ ಮತ್ತು ವೇದ್ಧಾಂತ ಪರಿಷತ್ ನಡೆಯಲಿದೆ. ದಿ. 4 ರಂದು ಗ್ರಾಮದೇವಿಗೆ ಉಡಿ ತುಂಬುವದು, ಸಂಜೆ 5 ಕ್ಕೆ ಕಳಸರೋಹಣ, ಹಾಗೂ ದಿ 6 ರಂದು ಬೆಳ್ಳಿಗೆ ಸಿದ್ದಾರೂಢರ ಪಲ್ಲಕ್ಕಿ ಉತ್ಸವ, ರಾಮನವಮಿ ನಿಮಿತ್ಯವಾಗಿ ಶ್ರೀ ಸಿದ್ದಾರೂಢರ ತೊಟ್ಟಿಲೋತ್ಸವ, ಮದ್ಯಾಹ್ನ 12 ಕ್ಕೆ ಸಾಮೂಹಿಕ ವಿವಾಹ, ಸಂಜೆ 5 ಕ್ಕೆ ಮಹಾ ರಥೋತ್ಸವ, ರಾತ್ರಿ 9 ಕ್ಕೆ ಸಿದ್ದಾರೂಢ ಮಹಾತ್ಮೆ ಭಕ್ತಿ ನಾಟಕ ನಡೆಯುವದು. ಪ್ರತಿದಿನ ರಾತ್ರಿ 10 ಘಂಟೆಗೆ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳ ತುಲಾಭಾರ, ಕನಕ ಕಿರೀಟ, ಮಂಗಳಾರತಿ, ಮಹಾಪ್ರಸಾದ ನಡೆಯಲಿವೆ. ದಿ. 7 ರಂದು ರಾತ್ರಿ 8 ಘಂಟೆಗೆ ಶ್ರೀ ಸಿದ್ದಾರೂಢರ ಕೌದಿ ಪೂಜೆ ನೆರವೇರಲಿವೆ ಮತ್ತು ಪ್ರತಿದಿನ ನಡೆಯುವ ಪ್ರವಚನ ವೇದ್ಧಾಂತ್ ಪರಿಷತ್ ಕಾರ್ಯಕ್ರಮಕ್ಕೆ ನಾಡಿನ ಅನೇಕ ಮಹಾಸ್ವಾಮಿಗಳು, ಶರಣರು ಆಗಮಿಸಲಿದ್ದಾರೆ ಎಂದು ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.