ಯಡೂರಲ್ಲಿ ಜ.೧೪ ರಿಂದ ಮಾ.೬ರವರೆಗಿನ ಕಾರ್ಯಕ್ರಮಕೆ ಶ್ರೀಶೈಲ ಶ್ರೀಗಳ ಕರೆ

Ravi Talawar
ಯಡೂರಲ್ಲಿ ಜ.೧೪ ರಿಂದ ಮಾ.೬ರವರೆಗಿನ ಕಾರ್ಯಕ್ರಮಕೆ ಶ್ರೀಶೈಲ ಶ್ರೀಗಳ ಕರೆ
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ: ಜಮಖಂಡಿ: ಶ್ರೀ ಕ್ಷೇತ್ರ ಯಡೂರನಲ್ಲಿ ಜ.೧೪ ರಿಂದ ಮಾ.೬ ವರೆಗೆ ಜರುಗುವ ಮಹಾಕುಂಭಾಭಿಷೇಕ, ಲಕ್ಷದೀಪೊತ್ಸವ, ಕೃಷ್ಣಾರತಿ ಕಾರ್ಯಕ್ರಮಗಳ ಆಮಂತ್ರಣ ನೀಡಿದ ಶ್ರೀಶೈಲ ಜಗದ್ಗುರುಗಳು.
ನಗರದ ಮುತ್ತಿನಕಂತಿ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಯಡೂರಿನ ಶ್ರೀ ವೀರಭದ್ರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಕಳೆದ ೨೧ ವರ್ಷದಲ್ಲಿ ಭಕ್ತರಿಗೆ ಮೂಲಭೂಕ ಸೌಕರ್ಯ ಒದಗಿಸುವುದರಿಂದ ದೇವಸ್ಥಾನದ ಜೀರ್ಣೊದ್ದಾರ, ಯಾತ್ರಿನಿವಾಸ, ಕಲ್ಯಾಣಮಂಟಪ, ರಥನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ದಿಗಳಾಗಿವೆ. ಮಾ.೩ ರಿಂದ ೬ರವರೆಗೆ ಉತ್ತರ ಮತ್ತು ದಕ್ಷಿಣದ ರಾಜಗೋಪುರಗಳ ಲೋಕಾರ್ಪಣೆ, ಕಳಸಾರೋಣ, ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸವ ಮತ್ತು ಕಾಶಿಯ ಗಂಗಾಆರತಿ ಮಾದರಿಯಲ್ಲಿ ಕೃಷ್ಣಾರತಿ ಜರುಗಲಿವೆ. ವೀರಶೈವ ಪದ್ದತಿಯಂತೆ ದೇವಾಲಯದ ಶುದ್ದಿಕರಣದ ಜೊತೆಗೆ ಲಕ್ಷಾಂತರ ಭಕ್ತರ ದೇಹ ದೇವಾಲಯಗಳ ಶುದ್ದಿಕರಣ ಲಿಂಗದೀಕ್ಷೆ, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರಿ ದರ್ಮ ಜಾಗೃತಿ ಯಾತ್ರೆ ಸೇರಿದಂತೆ ೫೧ದಿನಗಳ  ಕಾರ್ಯಕ್ರಮ ಜರುಗಲಿವೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನದಿಂದ ಭಾಗವಸಿ ಕಾರ್ಯಕ್ರಮ ಯಶ್ವಿಗೊಳಿಸಬೇಕು ಎಂದರು.
ಶಾಸಕ ಜಗದೀಶ ಗುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೇಷ್ಠ ಮಠದ ಶ್ರೇಷ್ಠ ಮಠಾಧಿಶರು ಶ್ರೀಶೈಲ ಜಗದ್ಗುರುಗಳು ಹಲವಾರು ಅಭಿವೃದ್ದಿ ಲೋಕೊಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಶ್ರೀಶೈಲದಲ್ಲಿ ೮೫ಕೋಟಿ ರೂ ಕಂಬಿಮಠ ಮತ್ತು ಯಾತ್ರಿ ನಿವಾಸ ನಿರ್ಮಾಣಕ್ಕೆ ಶ್ರೀಗಳು ಚಾಲನೆ ನೀಡಿದ್ದಾರೆ. ಜೊತೆಗೆ ಯಡೂರಿನಲ್ಲಿ ದೇವಸ್ಥಾನ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಅದರ ಶುದ್ದಿಕರಣ, ಕಳಸಾರೋಹಣ, ಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಶೀ ಪೀಠದ ನೂತನ ಜಗದ್ಗುರುಗಳಿಂದ ಇಷ್ಟಲಿಂಗಪೂಜೆ, ಸೇರಿದಂತೆ ಹಲವಾರು ಕಾರ್ಯಲ್ರಮಗಳು ಜರುಗಲಿವೆ ಎಂದರು.
ಮುತ್ತಿನಕAತಿ ಮಠದ ಶಿವಲಿಂಗ ಶೀವಾಚಾರ್ಯ ಶ್ರೀಗಳು, ಕಲ್ಯಾಣಮಠದ ಶ್ರೀಗಳು, ಗುಣದಾಳದ ವಿವೆಕಾನಂದ ಶ್ರೀಗಳು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅರ್ಬನ ಬ್ಯಾಂಕ ಅಧ್ಯಕ್ಷ ರಾಹುಲ ಕಲೂತಿ, ಹುನ್ನೂರಿನ ವಿಶ್ವನಾಥ ಶಾಸ್ತಿç, ದುಂಡಯ್ಯ ಶಾಸ್ರಿ ಸಮೇತ ಹಲವಾರು ಭಕ್ತು ನೆರೆದಿದ್ದರು.
WhatsApp Group Join Now
Telegram Group Join Now
Share This Article