ಕುಕನೂರು : ಮೇಘಾಲಯ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಟಾಟಾ ಕಲಿಕಾ ಟ್ರಸ್ಟ್ ಸಿಬ್ಬಂದಿಯವರು ಶಾಲಾ ಪೂರ್ವ ಶಿಕ್ಷಣ ವೀಕ್ಷಣೆ ಮಕ್ಕಳಿಗೆ ಮುಕ್ತ ಆಟ ಕ್ರಿಯಾತ್ಮಕ ಚಟುವಟಿಕೆ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ಹವಾಮಾನ, ಕ್ಯಾಲೆಂಡರ್, ಹೆಸರಿನ ಚೀಟಿ, ಅಭಿನಯ ಗೀತೆ ಇತ್ಯಾದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಅನುಷ್ಠಾನವಾಗುತ್ತಿರುವ ಮಾದರಿಯಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಮತ್ತು ಭಾನಾಪುರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಶಾಲಾಪೂರ್ವ ಶಿಕ್ಷಣ ವೀಕ್ಷಿಸಿದರು.
ಐದು ಹಂತದ ತರಬೇತಿಯನ್ನು ಪಡೆದು ಹಂತ ಹಂತವಾಗಿ ಮೇಘಾಲಯ ರಾಜ್ಯದಲ್ಲಿ ಕೂಡ ಕೊಪ್ಪಳ ಮಾದರಿಯಲ್ಲಿ ಅನುಷ್ಠಾನ ಮಾಡುತ್ತಿರುತ್ತಾರೆ ಎಂದು ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣೆ ಅಧಿಕಾರಿಯಾದ ಶ್ರೀ ನಟರಾಜ್ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ ಮಾಳೆಕೊಪ್ಪ ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮಿ ಮೆಣಸಿನಕಾಯಿ ಮೇಘಾಲಯ ರಾಜ್ಯದ ಟಾಟಾ ಕಲಿಕಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.