ಯಶಸ್ವಿಯಾದ ಕೂದಲಿಗೆ ಬಳಸುವ ಆಯುರ್ವೇದಿಕ ಎಣ್ಣೆ ತಯಾರಿಸುವ ಉಚಿತ ಕಾರ್ಯಾಗಾರ

MK HasiruKranti
ಯಶಸ್ವಿಯಾದ ಕೂದಲಿಗೆ ಬಳಸುವ ಆಯುರ್ವೇದಿಕ ಎಣ್ಣೆ ತಯಾರಿಸುವ ಉಚಿತ ಕಾರ್ಯಾಗಾರ
WhatsApp Group Join Now
Telegram Group Join Now
ಗದಗ ಮಾ. ೩೦ : ಈ ಶಿಬಿರದ ಸಮಾರಂಭದ ಅಧ್ಯಕ್ಷರಾದ ಶ್ರೀ ಶಿವಾನಂದ ಮಾದಣ್ಣವರ, ಗೌರವಾನ್ವಿತ ಅತಿಥಿಗಳಾದ ಶ್ರೀ ರಾಮಣ್ಣ ಕಮ್ಮಾರ, ಶ್ರೀ ವಿನಾಯಕ ಆರ್., ರಾಜೇಶ್ವರಿ ಬಡ್ನಿ,  ದುರ್ಗಾ ಜಿ ಹಾಗು ಮಹನಿಯರು ದೀಪ ಬೆಳಗುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಶ್ವರಿ ಬಡ್ನಿ, ಶಿವಾನಂದ ಮಾದಣ್ಣವರ ಅವರು ಮಾತನಾಡಿ ಮತ್ತು ರಾಮಣ್ಣ ಕಮ್ಮಾರ ಅವರು ಗ್ರಾಮ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕೆಂಬ ಸಲಹೆ ನೀಡಿದರು. ಅದೇ ರೀತಿ ಸಮಾಜದಲ್ಲಿ ಮಹಿಳೆಯರ ಸಮಾನತೆಯು ಮಹಿಳೆಯರಿಗೆ ಬೆಳೆಯಲು ಅತಿ ಮುಖ್ಯ ಪಾತ್ರ ವಹಿಸುತ್ತಿದೆ. ಈಗಿನ ದಿನಮಾನಗಳಲ್ಲಿ ಗ್ರಾಮೀಣ ಮಹಿಳೆಯರ ಅಭಿವೃದ್ದಿಗೊಂಡರೆ ಹಿರಿಯರು ಹೇಳಿದ ಮಾತಿನಂತೆ ಹೆಣ್ಣೊಂದು ದುಡಿದರೆ ದೇಶದ ಆರ್ಥಿಕ ಅಭಿವೃದ್ದಿ ವೇಗವಾಗಿ ಬೆಳೆಯುತ್ತದೆ ಎಂದು ಮಹಿಳೆಯರ ಸಾಮರ್ಥ್ಯಕ್ಕೆ ಯಾವುದೇ ಮಿತಿ ಇಲ್ಲ, ಉಜ್ವಲ ಭವಿಷ್ಯಕ್ಕಾಗಿ ಮಹಿಳೆಯರನ್ನು ಸಬಲೀಕರಿಸೋಣ ಎಂಬ ಸಂದೇಶವನ್ನು ಸಾರಿದರು.
ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ೫೦ ಮಹಿಳೆಯರು ಕಾರ್ಯಾಗಾರದ ಆಯೋಜಕರಾದ ಸೆರೆಂಟಿಕಾ ರಿನಿವೆಬಲ್ಸ ಕಂಪನಿ, ದ್ವಾರಕಾಮಯಿ ಫೌಂಡೇಶನ ಹಾಗೂ ಶ್ರೀ ಸಿ.ಬಿ.ಬಡ್ನಿ ಪ್ರತಿಷ್ಠಾನ, ಮುಳಗುಂದ ಅವರಿಗೆ ಕೃತಜ್ಞತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೆರೆಂಟಿಕಾ ಕಂಪನಿಯ ಶ್ರೀ ರಾಜೇಂದ್ರ ಪ್ರಸಾದ ಮತ್ತು ಶ್ರೀ ಎನ್, ಮೂರ್ತಿ, ದ್ವಾರಕಾಮಯಿ ಫೌಂಡೇಶನ ಶ್ರೀ ವಿನಾಯಕ ಆರ್., ಶ್ರೀಮತಿ ಮಲ್ಲಿಕಾ ಮತ್ತು ಶ್ರೀಮತಿ ಆರ್, ವಸಂತಕುಮಾರಿ, ಗ್ರಾಮದ ಸದಸ್ಯರಾದ ಶ್ರೀ ಸೋಮಣ್ಣಾ ಹೊಲಗಿ, ಶ್ರೀ ಮುರಗಪ್ಪ ಕುಸ್ಲಾಪೂರ, ಶ್ರೀ ಅದವಿಂದಪ್ಪ ಗುದಿ, ಶ್ರೀ ಶಿವನಪ್ಪ ಚಪಾತಿ, ಶ್ರೀಮತಿ ಚಂದ್ರವ್ವಾ ಓಂಕಾರ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಸ್ವಯಂ ಸೇವಕರು  ಉಪಸ್ಥಿತರಿದ್ದರು.
ಕಾರ್ಯಾಗಾರದ ಯಶಸ್ಸಿಗೆ ಕಾರಣರಾದ ಸಮಸ್ತರಿಗೂ ದ್ವಾರಕಾಮಯಿ ಫೌಂಡೇಶನ ಸಂಸ್ಥಾಪಕರಾದ ಶ್ರೀ ವಿನಾಯಕ ಆರ್. ಅವರು ಅಭಿನಂದನೆ ಸಲ್ಲಿಸಿದರು.
WhatsApp Group Join Now
Telegram Group Join Now
Share This Article