ನೇಸರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ ನೇಸರಗಿ ವಲಯದ ಹಣಬರಹಟ್ಟಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟ್ಯೂಷನ್ ಕ್ಲಾಸ್ ತರಬೇತಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀಮತಿ ಗಾಯಿತ್ರಿ ಪತ್ತಾರ, ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಶೈಲಾ ಜಕ್ಕಣ್ಣವರ, ಎಸ್ ಡಿ ಎಮ್ ಸಿ ಸದಸ್ಯರಾದ ಶ್ರೀಮತಿ ಸವಿತಾ ಅಕೋಳಿ, ಶ್ರೀಮತಿ ಸುನಿತಾ ತೇರದಾಳ ಇವರ ಸಮ್ಮುಖದಲ್ಲ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯರು ಧರ್ಮಸ್ಥಳ ಯೋಜನೆಯವರು ನಮ್ಮ ಶಾಲೆಗೆ ಉಚಿತ ಟ್ಯೂಷನ್ ಕ್ಲಾಸ್ ತರಬೇತಿ ಕಲ್ಪಿಸಿ ಕೊಟ್ಟಿದ್ದು ನಮ್ಮ ಭಾಗ್ಯ ಪೂಜ್ಯರಿಗೆ ಮತ್ತು ಮಾತೃಶ್ರೀ ಅವರಿಗೆ ನಮ್ಮೆಲ್ಲರ ವತಿಯಿಂದ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸೋಣ ಎಂದು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಜ್ಞಾನ ವಿಕಾಸ ಸಮನ್ವಯಧಿಕಾರಿ , ಶ್ರೀಮತಿ ಶೈಲಾ ಜೆ ಮಾತನಾಡಿ ಧರ್ಮಸ್ಥಳ ಯೋಜನೆ ವತಿಯಿಂದ ನಡೆಸುವಂತಹ ಟ್ಯೂಷನ್ ಕ್ಲಾಸ್ ಮತ್ತು ಯೋಜನೆ ನೀಡುವ ಸೌಲಭ್ಯಗಳ ಬಗ್ಗೆ ಜ್ಞಾನದೀಪ ಶಿಕ್ಷಕರು ಸುಜ್ಞಾನ ನಿಧಿ ಶಿಷ್ಯವೇತನ ಸಮುದಾಯ ಅಭಿವೃದ್ಧಿ ವಿಭಾಗದ ಕಾರ್ಯಕ್ರಮಗಳು ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಮುದ್ದು ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಶಿಕ್ಷಣಕ್ಕೆ ಒತ್ತು ಕೊಡುವಂತೆ ತಿಳಿಸಿ ಮನೆಯಲ್ಲಿ ತಂದೆ ತಾಯಿ ಆಸ್ತಿ ಹಣ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಹೆಚ್ಚು ಗಮನ ನೀಡಿ ವಿದ್ಯಾರ್ಥಿಗಳ ಭವಿಷ್ಯಕೆ ಒಳ್ಳೆಯದು ಎಂದು ಮಾಹಿತಿ ನೀಡಿದರು ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ರವಿ ಗೋಕಾಕ್ ನೆರವೇರಿಸಿದರು.
ಶಿಕ್ಷಕರಾದ ಪವಿತ್ರ ಮುತ್ತಲಮನಿ ಸ್ವಾಗತಿಸಿದರು. ಬಾಳವ್ವ ಶಿವನಾಯ್ಕರ ವಂದನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಗೀತಾ ಬನ್ನೂರ್ ಹಾಗೂ ಶಾಲೆಯ ಮುದ್ದು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.


