ಬೆಳಗಾವಿ,ಏಪ್ರಿಲ್16: ಆಂಜನೇಯನಗರದ ಎನ್.ಕೆ. ಎಜುಕೇಶನ್ ಫೌಂಡೇಶನ್ ವತಿಯಿಂದ ಎಸ್ ಎಸ್ ಎಲ್ ಸಿ ನಂತರದ ವಿದ್ಯಾರ್ಥಿಗಳಿಗೆ ಉಚಿತ ಸೇತುಬಂಧ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಈ ವೇಳೆ ಸೇತುಬಂಧ ಕಾರ್ಯಕ್ರಮ ಕುರಿತು ಪ್ರೊ. ಮುಕುಂದ ದೇಶಪಾಂಡೆ ಮಾತನಾಡಿ, ಎಸ್ ಎಸ್ ಎಲ್ ಸಿ ನಂತರದ ವಿದ್ಯಾರ್ಥಿ ಜೀವನವು ಮಹತ್ವದ ಘಟ್ಟವಾಗಿದ್ದು, ಪಿಯು ಹಂತದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶೈಕ್ಷಣಿಕ ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು. ಪಿಯುಸಿ ಹಂತದಲ್ಲಿಯೇ ಜೆಇಇ, ನೀಟ್ ಸೇರಿದಂತೆ ವಿವಿಧ ಸಿಇಟಿ ಪರೀಕ್ಷೆಗಳ ಕುರಿತು ಈ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು. ಪ್ರಾಚಾರ್ಯ ಎಂ. ಎಲ್ ಪಾಟೀಲ ಕಾಲೇಜಿನ ಕುರಿತು ವಿವರಿಸಿದರು. ಪ್ರಸ್ತಾವಿಕವಾಗಿ ಪ್ರೊ. ಬಿ. ಬಿ ಮಠಪತಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸರಸ್ವತಿ ಪೂಜೆಯೊಂದಿಗೆ ಆರಂಭಿಸಲಾಯಿತು.
ಸವಿತಾ ಧಾಮನೇಕರ ಪ್ರಾರ್ಥಿಸಿದರು. ಡಾ.ರವೀಂದ್ರ ಸತ್ತಿಗೇರಿ ಸ್ವಾಗತಿಸಿದರು.ವಿನಾಯಕ ನಿಕ್ಕಂ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿಫೌಂಡೇಶನ ಅಧ್ಯಕ್ಷ ಎನ್.ಕೆ.ನರೇಂದ್ರ ಕುಮಾರ, ಸಿ.ಇ.ಓ ವೈಭವ ಉಮರ್ಜಿ, ವಿದ್ಯಾರ್ಥಿಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.