ಗದಗ ೦೬:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೇಯಸ್ ರಕ್ತ ತಪಸಣಾ ಕೇಂದ್ರದ ಸಹಯೋಗದಲ್ಲಿ ಉದಯ ಕೇಶವನಗರ ಗಣೇಶೋತ್ಸವ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ರಕ್ತ ತಪಾಸಣೆ ಮಧುಮೇಹ ತಪಾಸಣೆ ಜೊತೆಗೆ ರಕ್ತದಾನ, ನೇತ್ರದಾನ, ಅಂಗಾಂಗದಾನಗಳ ಜಾಗೃತಿ ಶಿಬಿರ ನಡೆಯಿತು. ೧೦೦ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾದಿಕಾರಿ ಡಾ.ಎಸ್.ಕೆ.ನೀಲಗುಂದ ಮನುಷ್ಯರಲ್ಲಿ ರೋಗ ಉಂಟಾಗಲು ಆಹಾರ, ಆಹಾರಕ್ರಮ, ಸಮುಚಿತ ಆಹಾರ ವಿಹಾರಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹದಲ್ಲಿ ಹೊಸರಕ್ತ ಉತ್ಪತ್ತಿಯಯಾಗಲು ವೈದ್ಯರ ಸಲಹೆಯ ಮೇರೆಗೆ ರಕ್ತದಾನ ಮಾಡಬೇಕು. ಇದರಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಂದ ದೂರವಿರಬಹುದು. ಅಂಗಾಂಗದಾನ ಶ್ರೇಷ್ಠದಾನ ಇದರಿಂದ ಹಲವಾರು ಜೀವಗಳನ್ನು ಉಳಿಸಬಹುದು ಎಂದು ಸಲಹೆ ನೀಡಿದರು. ಶ್ರೀಮತಿ ರೇಖಾ ದೀಪಕ ಕಲ್ಲಣ್ಣವರ ಎಲ್ಲ ತಜ್ಞ ವೈದ್ಯರ ಪರಿಚಯ ಮಾಡುತ್ತ ಅವರ ವೈದ್ಯಕೀಯ ಸೇವೆಗಳ ಮಾಹಿತಿ ನೀಡಿದರು. ಪ್ರಭು ಬುರಬುರೆಯವರು ಶಿಬಿರದ ಕಾರ್ಯಕ್ರಮಗಳನ್ನು ಮೆಚ್ಚಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.
ಸಾನಿಧ್ಯ ವಹಿಸಿದ್ದ ಮಹೇಶ್ವರ ಸ್ವಾಮಿಗಳು, ಪ್ರಭು ಬುರಬುರೆ ಜಿಲ್ಲಾ ಆರೋಗ್ಯಾದಿಕಾರಿ ಡಾ.ಎಸ್.ಎಸ್.ನೀಲಗುಂದ, ಡಾ.ಪ್ರಕಾಶ ಗುಂಡೂರ, ಡಾ.ಅರ್ಪಿತಾ ಬಿರಾದಾರ, ಡಾ.ದೇವೇಂದ್ರ ಶ್ರೀಮತಿ ರೇಖಾ ಕಲ್ಲಣ್ಣವರ, ಜಿ.ಎಮ್.ಯಾನಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಬಿ.ಪಿ.ಹುಚ್ಚಣ್ಣವರ ಸಂದರ್ಭೋಚಿತವಾಗಿ ಮಾತನಾಡುತ್ತ ದೇವೇಂದ್ರ ಕಳಸಾಪೂ ಹಾಗೂ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದರು. ಪ್ರಮೋದ ರಾಯಕರ, ದೀಪಕ ಕಲ್ಲಣ್ಣವರ ವಿಶಾಲ ಬಾಕಳೆ, ಮಲ್ಲಿಕಾರ್ಜುನ ತೊಂಡಿಹಾಳ, ಬಸವರಾಜ ನುಗ್ಗಿಕಾರಿ, ಮಾಲಿಪಾಟೀಲ, ಅಮೃತರಾವ್, ವಿರಕ್ತಮಠ, ಹಾಗೂ ಇನ್ನಿತರರು ಶಿಬಿರದಲ್ಲಿ ಉಪಸ್ಥಿತರಿದ್ದರು. ಮನಸ್ವಿ ಹಾಗರಕಿ ಪ್ರಾರ್ಥಿಸಿದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು, ಜಿ.ಎಂ.ಯಾನಮಶೆಟ್ಟಿ ನಿರೂಪಿಸಿದರು, ಸಜ್ಜನಅವರು ವಂದಿಸಿದರು ಎಂದು ಸಂತೋಷ ಕುರ್ಡೆಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.