ಬಳ್ಳಾರಿ,ಸೆ.10… ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಅರಣ್ಯ ಇಲಾಖೆ ಮತ್ತು ಬಿಮ್ಸ್, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆ ನಿಮಿತ್ತ ನಗರದ ಬಳ್ಳಾರಿಯಲ್ಲಿ “ಉಚಿತ ಆರೋಗ್ಯ ತಪಾಸಣೆ ಶಿಬಿರ’ ಆಯೋಜಿಸಲಾಯಿತು.
ಈ ಕಾರ್ಯðಕ್ರಮದಲ್ಲಿ ಅರಣ್ಯ ಇಲಾಖೆಯ ಡೆಪ್ಯೂಟಿ ಕಮಿಷನರ್ ಆಫ್ ಫಾರೆಸ್ಟ್ ಡಾ||.ಬಸವರಾಜ್ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪ್ರತಿ ವರ್ಷ ೧೧ನೇ ಸೆಪ್ಟೆಂಬರ್ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆ ನಿಮಿತ್ತ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡಲು ಉದ್ದೇಶಿಸಿ ನಮ್ಮ ಸಿಬ್ಬಂದಿ ತಮ್ಮ ಕೆಲಸದ ಸಮಯಲ್ಲಿ ಬಿಡುವುಇಲ್ಲದೇ ವ್ಯಸ್ಥರಾಗಿರುತ್ತಾರೆ.ಆದಕಾರಣರೆಡ್ಕ್ರಾಸ್ ಸಂಸ್ಥೆಗೆ ಮಾತನಾಡಿ ಅತೀಕಡಿಮೆ ಸಮಯದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲು ಕೇಳಿದಾಗ ರೆಡ್ಕ್ರಾಸ್ ಸಂಸ್ಥೆಯವರು ಉಚಿತ ಆರೋಗ್ಯ ತಪಾಸಣೆ ಶೀಬಿರ ಆಯೋಜಿಸಲು ಮುಂದಾದರು ಎಂದರು.
ಈ ಕಾರ್ಯಕ್ರಮದಲ್ಲಿ ಮೂಳೆ ರೋಗತಜ್ಞರು, ಪ್ರಸೂತಿ ರೋಗತಜ್ಞರು, ಕಿವಿ ಮೂಗು ಮತ್ತು ಗಂಟಲುರೋಗ ತಜ್ಞರು ಮತ್ತು ವೈದ್ಯ ಶಾಸ್ತçತಜ್ಞರು ಹಾಜರಿದ್ದು ಸುಮಾರು ೧೦೦ ಕಿಂತ ಹೆಚ್ಚು ಅರಣ್ಯಇಲಾಖೆಯ ಸಿಬ್ಬಂದಿ ಮತ್ತುಅವರಕುಟುಂಬದವರಿಗೆ ಆರೋಗ್ಯತಪಾಸಣೆ ನಡೆಸಲಾಯಿತು.
ಇದೇ ಸಮಯದಲ್ಲಿ ಎಂ.ಎ.ಷಕೀಬ್, ಕಾರ್ಯದರ್ಶೀಗಳು, ರೆಡ್ಕ್ರಾಸ್ ಸಂಸ್ಥೆ, ಬಳ್ಳಾರಿ.ರೆಡ್ಕ್ರಾಸ್ ಸದಸ್ಯರಾದ ಶಮೀಮ್ ಜಕಲಿ, ಈಜಾಜ್ ಅಹಮದ್, ಮತ್ತು ಎಂ.ವಲಿಬಾಷಾ, ರೆಡ್ಕ್ರಾಸ್ ಸದಸ್ಯರುಇವರು ಉಪಸ್ಥಿತರಿದ್ದರು.


