ಮಕ್ಕಳ ಸುಲಭ ಗಣಿತ ಕಲಿಕಾ ಉಚಿತ ಬಿಲ್ಡಿಂಗ್ ಬ್ಲಾಕ್ಸ್ ಆ್ಯಪ್

Ravi Talawar
ಮಕ್ಕಳ ಸುಲಭ ಗಣಿತ ಕಲಿಕಾ ಉಚಿತ ಬಿಲ್ಡಿಂಗ್ ಬ್ಲಾಕ್ಸ್ ಆ್ಯಪ್
WhatsApp Group Join Now
Telegram Group Join Now
ರಜಾ ಅವಧಿಯಲ್ಲಿ  1 ರಿಂದ 8 ನೇ ತರಗತಿ ಮಕ್ಕಳಿಗಾಗಿ  ಗಣಿತ ಆಟಗಳ ಕಲಿಕಾ ಉಚಿತ ಆ್ಯಪ್ ಪರಿಚಯಿಸುತ್ತಿದ್ದೇವೆ.ಸರಕಾರಿ ಶಾಲೆಗಳಲ್ಲಿ ಅನುಷ್ಠಾನದಲ್ಲಿ ಇರುವ ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಗಣಿತ ಕಲಿಕೆ ಸುಲಭವಾಗಲು ಬಿಲ್ಡಿಂಗ್‌ ಬ್ಲಾಕ್ಸ್‌ ಆಪ್‌ – ಮಕ್ಕಳ ಗಣಿತ ಕಲಿಕೆಯಲ್ಲಿ ಪ್ರಯೋಗಶೀಲ ಆಂದೋಲನ  ( ಬೆಳಗಾವಿ 15-04-2024) ಇಂದಿನ ಶೈಕ್ಷಣಿಕ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಪಾಠಗಳನ್ನು ಕಲಿಯಲು ತೀರಾ ಕಡಿಮೆ ಅವಕಾಶಗಳಿವೆ.
ಇದಕ್ಕೆ ಕಾರಣ ಶಾಲೆಗಳಲ್ಲಿ ಮಕ್ಕಳಿಗೆ ನಿಗದಿತ ಬೋಧನಾ ಅವಧಿ ಇರುತ್ತದೆ. ಹಾಗಾಗಿ ಸೀಮಿತ ಪಠ್ಯಕ್ರಮದಲ್ಲಿ ಆಳವಾದ ಅಧ್ಯಯನ ನಡೆಸುವುದು ಅಸಾಧ್ಯ. ಈ ಒಂದು ಅಂತರವನ್ನು ಗಮನದಲ್ಲಿಟ್ಟುಕೊಂಡು, ಬಿಲ್ಡಿಂಗ್‌ ಬ್ಲಾಕ್ಸ್‌ ಎಂಬ ವಿನೂತನವಾದ ಪ್ರಯೋಗಕ್ಕೆ ಅಣಿಯಾಗುತ್ತಿದ್ದೇವೆ.  ಇದು ಭವಿಷ್ಯದಲ್ಲಿ ಒಂದು ಗೇಮ್‌ಚೇಂಜರ್‌ ಆಗಿ, ಗಣಿತದ ವಿವಿಧ ವಿಷಯಗಳನ್ನು ತರಗತಿಗಳ ಚೌಕಟ್ಟನ್ನೂ ಮೀರಿ ಮಕ್ಕಳಿಗೆ ಕಲಿಸಲಿದೆ.
ಬಿಲ್ಡಿಂಗ್‌ ಬ್ಲಾಕ್ಸ್‌ ಆಪ್‌ ಮಕ್ಕಳಿಗೆ ಯಾವಾಗ ಬೇಕಾದರೂ, ಎಲ್ಲಿಯಾದರೂ ಅವರ ಗಣಿತದ ಕೌಶಲ್ಯವನ್ನು ಒರೆಗೆ ಹಚ್ಚಲು ಒಂದು ವೇದಿಕೆಯಾಗಲಿದೆ. ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದೊಂದಿಗೆ ಅಕ್ಷರ ಫೌಂಡೇಶನ್ ಬೆಂಗಳೂರು ಇವರು   ಮಕ್ಕಳಿಗಾಗಿಯೇ ತಂದಿರುವ ಈ ಪ್ರಯೋಗಾತ್ಮಕ ಆಪ್‌ ಎಲ್ಲಾ ಆಂಡ್ರಾಯ್ಡ್‌ ಫೋನುಗಳಲ್ಲೂ ಲಭ್ಯವಿರಲಿದೆ. ಇದು ತರಗತಿಯಲ್ಲಿ ಕಲಿಸುವ ಪರಿಕಲ್ಪನೆಗಳನ್ನು ಬಲಪಡಿಸುತ್ತದೆ. ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಈ ಆಪ್‌ನ್ನು ಸಿದ್ಧಪಡಿಸಲಾಗಿದ್ದು, ಅನೇಕ ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಬಿಲ್ಡಿಂಗ್‌ ಬ್ಲಾಕ್‌ ಆಪ್‌ನ ಬಹುತ್ವ ಸಾಮರ್ಥ್ಯವೇ ಇದರ ವಿಶೇಷತೆಯಾಗಿದ್ದು, ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.
ಇದರಿಂದ ಮಕ್ಕಳ  ಕಲಿಕೆಗೆ ಯಾವುದೇ ನೆಟ್‌ವರ್ಕ್‌ ಸಮಸ್ಯೆ ಅಡ್ಡಿಯಾಗದೇ, ಅವರಿಗೊಂದು ಉತ್ತಮ ಕಲಿಕಾ ಅನುಭವವನ್ನು ನೀಡಲಿದೆ. ಶಾಲಾ ಪಠ್ಯಕ್ರಮದ ಜೊತೆ ಗಣಿತದ ಪ್ರಮುಖ ಪರಿಕಲ್ಪನೆಗಳನ್ನು ಮಕ್ಕಳ ಅಭಿರುಚಿಗೆ ತಕ್ಕಂತೆ, ಕಲಿಕೆಯನ್ನು ಆಸಕ್ತಿದಾಯಕವಾಗಿ ಹಾಗೂ ಮೋಜಿನಿಂದ ಕೂಡಿರುವಂತೆ ಈ ಅಪ್ಲಿಕೇಷನನ್ನು ಸಿದ್ಧಪಡಿಸಲಾಗಿದೆ. 400ರಷ್ಟು ಸಂವಾದಾತ್ಮಕ ಆಟಗಳು ಹಾಗೂ ಇನ್ನೂ ಅಪರಿಮಿತ ಆಯ್ಕೆಗಳಿಂದ ಕೂಡಿರುವ ಈ ಅಪ್ಲಿಕೇಶನ್‌, ಪ್ರತಿದಿನ ಮಕ್ಕಳನ್ನು ಹೊಸ ಕಲಿಕೆಗಳಿಗೆ ತೆರೆದುಕೊಳ್ಳುವಂತೆ ಮಾಡಿ, ನಿಮ್ಮ ಮಕ್ಕಳು ಗಣಿತದಲ್ಲಿ ಪರಿಣತಿಯನ್ನು ಸಾಧಿಸುವಂತೆ ಮಾಡುತ್ತದೆ.
ಇನ್ನೊಂದು ಸಿಹಿ ಸುದ್ದಿ ಎಂದರೆ, ಈ ಅಪ್ಲಿಕೇಶನ್‌ ಸಂಪೂರ್ಣ ಉಚಿತ, ಇದಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನಮ್ಮ ಉದ್ದೇಶ ಎಲ್ಲಾ ಮಕ್ಕಳಿಗೂ ಯಾವುದೇ ಆರ್ಥಿಕ ಅಡೆತಡೆಗಳು ಎದುರಾಗದೇ ಗಣಿತದಲ್ಲಿ ಪರಿಣಿತರಾಗಬೇಕು ಎಂಬುವುದಷ್ಟೇ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ, (ಸಂಪರ್ಕ ಮಾಹಿತಿ [email protected]). ಬಿಲ್ಡಿಂಗ್‌  ಬ್ಲಾಕ್ಸ್‌ (Building  Blocks ) ಆಪ್ ಗಣಿತ ಕಲಿಕೆಯಲ್ಲಿ ಒಂದು ಅಮೂಲಾಗ್ರ ಬದಲಾವಣೆಯನ್ನು ತರಬಲ್ಲ ವೇದಿಕೆಯಾಗಿದ್ದು‌, ಮಕ್ಕಳಿಗೆ ಗಣಿತದಲ್ಲಿ ಪರಿಣಿತರಾಗಲು ಬೇಕಾದ ಕೌಶಲ್ಯ ಮತ್ತು ವಿಶ್ವಾಸವನ್ನು ತುಂಬಿ ಅವರನ್ನು ಕಲಿಕೆಯಲ್ಲಿ ಮುಂದಿರುವಂತೆ ಮಾಡಲಿದೆ.
ಸಂವಾದಾತ್ಮಕ ಚಟುವಟಿಕೆಗಳು, ಶಾಲಾ ಕಲಿಕೆಗೆ  ಹೊಂದಿಕೊಂಡ ಪಠ್ಯಕ್ರಮ ಮತ್ತು ಬಳಕೆದಾರ ಸ್ನೇಹಿ ಫೀಚರ್‌ಗಳೊಂದಿಗೆ, ಬಿಲ್ಡಿಂಗ್‌ ಬ್ಲಾಕ್ಸ್‌ ಆಪ್‌, ಕೈಗೆಟಕುವ, ಮಕ್ಕಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುವ ಹಾಗೂ ಮೋಜಿನಿಂದ ಕೂಡಿರುವ ಗಣಿತದ ಕಲಿಕೆಯನ್ನು ಜಗತ್ತಿನಾದ್ಯಂತ ಇರುವ ಎಲ್ಲಾ ಆಸಕ್ತ ಮಕ್ಕಳಿಗೂ ದೊರೆಯುವಂತೆ ಮಾಡುವುದೇ ನಮ್ಮ ಬಿಲ್ಡಿಂಗ್‌ ಬ್ಲಾಕ್‌ ಆಪ್‌ನ ಉದ್ದೇಶ.
ಅಪ್ಲಿಕೇಶನ್‌ನ ವೈಶಿಷ್ಟ್ಯಗಳು
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
ಕಡಿಮೆ ಮಟ್ಟದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
1 ರಿಂದ 8 ನೇ ತರಗತಿಯ ಮಕ್ಕಳಿಗಾಗಿ ಗಣಿತ ವಿಷಯವನ್ನು ಹೊಂದಿದೆ
9 ಭಾಷೆಗಳಲ್ಲಿ ಕೂಡ ಲಭ್ಯ ವಿದೆ – ಕನ್ನಡ , English , हिंदी, اردو, मराठी,தமிழ்,ଓଡିଆ,తెలుగు,ગુજરાતી
ಎಲ್ಲಾ ಆಟಗಳನ್ನು NCERT ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾಗಿದೆ
400 ಕ್ಕೂ ಹೆಚ್ಚು ಸಂವಾದಾತ್ಮಕ ಆಟಗಳನ್ನು ಹೊಂದಿದೆ
ಮಕ್ಕಳಿಗೆ ಪರಿಕಲ್ಪನೆಗಳು ಮತ್ತು ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ
Diksha ಮತ್ತು ಗೂಗಲ್ ಪ್ಲೇನಲ್ಲಿ ಸಹ ಲಭ್ಯವಿದೆ
ಬಿಲ್ಡಿಂಗ್ ಬ್ಲಾಕ್ಸ್ ಗಣಿತವನ್ನು ಕಲಿಯಲು ಒಂದು ಮೋಜಿನ ಮಾರ್ಗವಾಗಿದೆ.ಮಕ್ಕಳು ಆಟವಾಡುತ್ತಾ ಕಲಿಯುತ್ತಾರೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು . ಮಕ್ಕಳಿಗೆ ಗಣಿತ ವಿಷಯಗಳನ್ನು  ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಯಾವಾಗಲೂ  ನನಪಿನಲ್ಲಿ ಇರುತ್ತದೆ .ರಜಾ ಅವಧಿಯಲ್ಲಿ ಮತ್ತು ವಾರದಲ್ಲಿ ಎರಡು ದಿನ ಕನಿಷ್ಠ ಸಮಯ ನೀಡಿ  ಪಾಲಕರು ಮಕ್ಕಳ ಸಂತಸದ  ಗಣಿತದ ಆಟದ ಮೂಲಕ  ಕಲಿಕೆಯ ಈ ಆ್ಯಪ್ ಸದ್ಬಳಕೆ ಮಾಡಿಕೊಳ್ಳಲು   ಅಕ್ಷರ ಫೌಂಡೇಶನ್  ಬೆಳಗಾವಿ ಜಿಲ್ಲಾ ಸಂಯೋಜಕ ಹನಮಂತ ಮಸಾಲಿ ಅವರು ತಿಳಿಸಿದ್ದಾರೆ.
ಅಪ್ಲಿಕೇಶನ್ ಡೌನ್‌ಲೋಡ್ಗಾಗಿ ಈ link ಬಳಸಿ  – (https://play.google.com/store/apps/details?id=com.akshara.easymath&hl=en_IN&gl=US&pli=1)
WhatsApp Group Join Now
Telegram Group Join Now
Share This Article