ಬಾಗಲಕೋಟೆ : ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನವನಗರ ಬಾಗಲಕೋಟೆ ಇವರ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಅಸ್ತಮಾ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರ ಜೊತೆಗೆ ಮೂಲವ್ಯಾಧಿ ತಪಾಸಣೆ ಹಾಗೂ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ನಗರದ ಸುತ್ತಮುತ್ತಲಿನ ಗ್ರಾಮಸ್ಥರು ಯಶಸ್ವಿಗೊಳಿಸಬೇಕೆಂದು ಎಂ ಆರ್ ಎನ್ ಗ್ರೂಪ್ ಆಫ್ ಮೆಡಿಕಲ್ ಇನ್ಸ್ಟಿಟ್ಯೂಷನ್ ನ ಡೀನ್/ ಆಡಳಿತಾಧಿಕಾರಿಯಾದ ಡಾ. ಶಿವಕುಮಾರ್ ಗಂಗಾಲ್ ತಿಳಿಸಿದರು.
ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಈ ವರ್ಷ ‘ಯುಕ್ತಿಶ್ಚ ಯೋಜನಾ ಯಾ ತು ಯುಜ್ಯತೆ ‘ ಉಕ್ತಿಯಂತೆ ದಿ: 08-06- 2024 ರ ಶನಿವಾರ ಬೆಳಗ್ಗೆ 07-31 ಗಂಟೆಗೆ ಮೃಗಶಿರ ಯೋಗ ಇರುವುದರಿಂದ ಅಸ್ತಮಾಕ್ಕೆ ಸಂಬಂಧಪಟ್ಟ ಔಷಧಿ ವಿತರಣೆ ಮಾಡಲಾಗುವುದು.
ಅಲ್ಲದೆ ಅದೇ ದಿನ ಮೂಲವ್ಯಾಧಿ ತಪಾಸಣೆ ಹಾಗೂ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ. ದೀಪಾ ಗಂಗಾಲ, ಡಾ. ಪಾರ್ವತಿ ಬಿರಾದರ್, ಡಾ. ಅಂಜನಾ ಕೃಷ್ಣನ್, ಡಾ. ಪ್ರಮೋದ್ ಬೆಂಚಿಕೇರಿ, ಡಾ. ಮುತ್ತಣ್ಣ ಕಾಮಣ್ಣವರ್, ಡಾ. ನೆಹರು ನಾಯಕ್, ಡಾ.ಜ್ಯೋತಿ ಸಜ್ಜನ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಹ್ಲಾದ ಗಂಗಾವತಿ ಹಾಗೂ ಡೀನ್ / ಆಡಳಿತ ಅಧಿಕಾರಿಯದ ಡಾ. ಶಿವಕುಮಾರ್ ಗಂಗಾಲ ಉಪಸ್ಥಿತರಿರುವರು. ಸಂಬಂಧಪಟ್ಟವರು ನೋಂದಣಿಗಾಗಿ 7411448410, 7259364870, 9964071420, 8660177191 ಸಂಖ್ಯೆಗಳಿಗೆ ಸಂಪರ್ಕಿಸಬಹುದು.