ವಾಸವಿ ಸ್ವಗೃಹ ಹೋಂ ನೀಡ್ಸ್ ನ ವಂಚಕ  ವಿಶ್ವನಾಥ ಕುಟುಂಬದ ಬಂಧನ – 1,62,77,500 ರೂ ವಶ

Sandeep Malannavar
ವಾಸವಿ ಸ್ವಗೃಹ ಹೋಂ ನೀಡ್ಸ್ ನ ವಂಚಕ  ವಿಶ್ವನಾಥ ಕುಟುಂಬದ ಬಂಧನ – 1,62,77,500 ರೂ ವಶ
WhatsApp Group Join Now
Telegram Group Join Now
ಬಳ್ಳಾರಿ, ಫೆ.04: ನಗರದ ಕುಂಬಾರ ಓಣಿಯಲ್ಲಿನ ಕಟ್ಟಡದಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ, ಅಕ್ರಮವಾಗಿ ಚೀಟಿ ವ್ಯವಹಾರ ನಡೆಸುತ್ತ, ಜನರಿಂದ ಕೋಟ್ಯಾಂತರ ರೂ ಹಣ ಪಡೆದು ವಂಚಿಸುತ್ತಿದ್ದ “ವಾಸವಿ ಸ್ವಗೃಹ ಹೋಂ ನೀಡ್ಸ್ ನ ಮಾಲೀಕ ವಿಶ್ವನಾಥ್  ಕಳೆದ ಎಪ್ರಲ್ ನಲ್ಲಿ  ಪೊಲೀಸರಿಂದ ಬಂಧಿತನಾಗಿ, ಜಾಮೀನು ಪಡೆದು  ನಂತರ ಆತ್ಯಹತ್ಯೆಯ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ. ಈತನನ್ನು ಕುಟುಂಬದ ಸಮೇತ ಪೊಲೀಸರು ಬಂಧಿಸಿ1,62,77,500 ರೂ ವಶಪಡಿಸಿಕೊಂಡಿದೆ.
ವಿಶ್ವನಾಥ ತಮ್ಮ ಮಳಿಗೆಯಲ್ಲಿ ಹೋಮ್ ನೀಡ್ಸ್ ಸಾಮಾಗ್ರಿ ಖರೀದಿ ಮಾಡಿದರೆ ಶೇ 20 ರಷ್ಟು ಇತರೇ ಸಾಮಾಗ್ರಿ ಕೊಡುವುದಾಗಿ. ಕೂಪನ್ ಕೊಡುತ್ತಿದ್ದ. ನಂತರ ಹಣ ಡೆಪಾಸಿಟ್ ಮಾಡಿದರೆ ಶೇ. 20 ರಷ್ಟು  ಬಡ್ಡಿ ಹಣದ ವಸ್ತು ಕೊಡುವುದಾಗಿ ಹಣ ಸಂಗ್ರಹ ಮಾಡುತ್ತಿದ್ದ.
ಈ ರೀತಿ ಕನಿಷ್ಠ 10 ಸಾವಿರದಿಂದ 5 ಲಕ್ಷದ ವರಗೆ ಸಾವಿರಾರು ಮಂದಿ ವಿಶ್ವನಾಥ್ ಗೆ ಚೀಟಿ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿದ್ದರು. ಈತನ ವ್ಯವಹಾರದ ಬಗ್ಗೆ ಸಂಶಯ ಬಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರ ಆತ ಜಾಮೀನು ಪಡೆದು ಹೊರ ಬಂದು ಎಲ್ಲರಗೂ ಹಣ ನೀಡುವುದಾಗಿ ಹೇಳಿ ರಾತ್ರೋ ರಾತ್ರಿ ಆತ್ಯಹತ್ಯೆಯ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ.
ಈ ಬಗ್ಗೆ ನಗರದ  ಬ್ರೂಸ್ ಪೇಟೆ ಪೊಲೀಸ್ ಠಾಣೆ ತೆರಳಿ ಜನತೆ ದೂರು ಸಲ್ಲಿಸಿದ್ದರು. ಇತನನ್ನು ಹುಡುಕುತ್ತಿದ್ದ ಪೊಲೀಸರು ಈವರೆಗೆ ಪತ್ತೆಹಚ್ಚಿರಲಿಲ್ಲ. ಆದರೆ ಹೊಸ ಎಸ್ಪಿ ಬಂದ ಮೇಲೆ ವಿಶ್ವನಾಥನ್ನು  ಹುಡುಕಿ ತಂದು ಆತನಿಂದ 1,62,77,500 ರೂ ವಶಪಡಿಸಿಕೊಳ್ಳಲಾಗಿದೆ.
ಆರೋಪಿತ ವಿಶ್ವನಾಥನ ಅಂಗಡಿ ಮೇಲೆ  ಕಳೆದ ಎಪ್ರಿಲ್ 3  ರಂದು ದಾಳಿ ನಡೆಸಿದಾಗ  19,38,500 ರೂ ಮತ್ತು 11 ರಂದು  95,00,000  ಹಣವನ್ನು ಆರೋಪಿತನಿಂದ ಜಪ್ತು ಪಡಿಸಿಕೊಳ್ಳಲಾಗಿತ್ತು.  ಆರೋಪಿತನ ಬ್ಯಾಂಕ್ ಖಾತೆಗಳಲ್ಲಿದ್ದ 5,00,000 ರೂ ಹಣವನ್ನು ಪ್ರೀಜ್ ಮಾಡಿಸಲಾಗಿತ್ತು.
ನಂತರ ಪರಾರಿಯಾಗಿದ್ದ ವಾಸವಿ ಸ್ವಗೃಹ ಹೋಂ ನೀಡ್ಸ್ ಅಂಗಡಿ ಮಾಲಿಕ ಟಿ.ವಿಶ್ವನಾಥ್  (58)  ಈತನ ಹೆಂಡತಿ ವಿಶಾಲಾಕ್ಷಮ್ಮ (48) ಮಗ ವಿಷ್ಣುವರ್ಧನ್.ಟಿ (28) ಇವರನ್ನು  ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ನಲ್ಲಿರುವ ಸರ್ಕಾರಿ ಆಸ್ಪತ್ರೆ ಹತ್ತಿರ  ಜ. 26 ರಂದು ವಶಕ್ಕೆ ಪಡೆದುಕೊಂಡು ಬರಲಾಗಿತ್ತು. ನಂತರ ಇವರನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿತ್ತು.
ಆರೋಪಿ ಟಿ.ವಿಶ್ವನಾಥ್ ಈತನನ್ನು ಮರುವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನಿಂದ  37,39,000  ರೂ ಹಾಗು 53.15 ಗ್ರಾಂನ ನಾಲ್ಕು ಬಂಗಾರದ ಬಳೆಗಳನ್ನು (ಅಂದಾಜು ಬೆಲೆ 6,00,000) ಜಪ್ತುಪಡಿಸಿಕೊಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು ರೂ 1,62,77,500 ರೂ ಹಣವನ್ನು ಜಪ್ತುಪಡಿಸಿಕೊಂಡಿದೆಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ..
WhatsApp Group Join Now
Telegram Group Join Now
Share This Article