10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ

Ravi Talawar
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ
WhatsApp Group Join Now
Telegram Group Join Now

ನವದೆಹಲಿ,13: ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ತನ್ನ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.

82 ದಿನಗಳ ಸುದೀರ್ಘ, ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 96 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ನಡೆದ ಮೊದಲ ಮೂರು ಹಂತಗಳಲ್ಲಿ 283 ಲೋಕಸಭಾ ಕ್ಷೇತ್ರಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೊದಲ ಮೂರು ಹಂತಗಳಲ್ಲಿ ಕ್ರಮವಾಗಿ ಶೇ 66.1, ಶೇ 66.7 ಮತ್ತು ಶೇ 61 ರಷ್ಟು ಮತದಾನ ದಾಖಲಾಗಿದೆ.

ನಾಲ್ಕನೇ ಹಂತದ ಮತದಾನದಲ್ಲಿ ಆಂಧ್ರ ಪ್ರದೇಶ ವಿಧಾನಸಭೆಗೆ (175 ಸ್ಥಾನಗಳು) ಮತ್ತು ಲೋಕಸಭೆಗೆ (25 ಸ್ಥಾನಗಳು) ಏಕಕಾಲದಲ್ಲಿ ಚುನಾವಣೆಗೆ ಸಾಕ್ಷಿಯಾಗಲಿದೆ. ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ನಾಲ್ಕನೇ ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಟಿಎಂಸಿಯ ಮಹುವಾ ಮೊಯಿತ್ರಾ, ಶತ್ರುಘ್ನ ಸಿನ್ಹಾ ಮತ್ತು ಯೂಸುಫ್ ಪಠಾಣ್ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಮತ್ತು ವೈಎಸ್ ಶರ್ಮಿಳಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿಯ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಅರ್ಜುನ್ ಮುಂಡಾ, ಅಜಯ್ ಮಿಶ್ರಾ ತೇನಿ, ಗಿರಿರಾಜ್ ಸಿಂಗ್ ಮತ್ತು ನಿತ್ಯಾನಂದ್ ರೈ ಸೇರಿದಂತೆ ಪಕ್ಷದ ನಾಯಕರಾದ ಸಾಕ್ಷಿ ಮಹಾರಾಜ್, ದಿಲೀಪ್ ಘೋಷ್, ಪಂಕಜಾ ಮುಂಡೆ, ಬಂಡಿ ಸಂಜಯ್, ಮಾಧವಿ ಲತಾ ಮತ್ತು ದಗ್ಗುಬಾಟಿ ಪುರಂದೇಶ್ವರಿ ಸೇರಿದಂತೆ ದೊಡ್ಡ ಹೆಸರುಗಳಿವೆ.

ನಾಲ್ಕನೇ ಹಂತದ ಮತದಾನ

ಆಂಧ್ರ ಪ್ರದೇಶ: ಎಲ್ಲ 25 ಸ್ಥಾನಗಳು

ತೆಲಂಗಾಣ: ಎಲ್ಲ 17 ಸ್ಥಾನಗಳು

ಜಾರ್ಖಂಡ್: 14 ಕ್ಷೇತ್ರಗಳ ಪೈಕಿ 4 ಸ್ಥಾನಗಳು

ಒಡಿಶಾ: 21 ಕ್ಷೇತ್ರಗಳಳ್ಲಿ 4 ಸ್ಥಾನಗಳು

ಉತ್ತರ ಪ್ರದೇಶ: 80 ರಲ್ಲಿ 13 ಸ್ಥಾನಗಳು

ಮಧ್ಯಪ್ರದೇಶ: 29 ರಲ್ಲಿ 8 ಸ್ಥಾನಗಳು

ಬಿಹಾರ: 40 ರಲ್ಲಿ 5 ಸ್ಥಾನಗಳು

ಮಹಾರಾಷ್ಟ್ರ: 48 ರಲ್ಲಿ 11 ಸ್ಥಾನಗಳು

ಪಶ್ಚಿಮ ಬಂಗಾಳ: 42 ಸ್ಥಾನಗಳಲ್ಲಿ 8 ಕ್ಷೇತ್ರಗಳು

ಜಮ್ಮು ಮತ್ತು ಕಾಶ್ಮೀರ: 5 ರಲ್ಲಿ 1 ಸ್ಥಾನ

ಆಂಧ್ರ ಪ್ರದೇಶ: ಎಲ್ಲ 175 ವಿಧಾನಸಭಾ ಸ್ಥಾನಗಳು

WhatsApp Group Join Now
Telegram Group Join Now
Share This Article