“ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ”

Pratibha Boi
“ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ”
WhatsApp Group Join Now
Telegram Group Join Now

ಮೂಡಲಗಿ : ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದ್ದು, ವ?ದೊಳಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬುಧವಾರದಂದು ಪಟ್ಟಣದ ದನಗಳ ಪೇಟೆಯ ಹತ್ತಿರ ಅಂದಾಜು ೨.೩೦ ಕೋಟಿ ರೂಪಾಯಿ ವೆಚ್ಚದಲ್ಲಿ (ಪಟಗುಂದಿ ರಸ್ತೆ) ನಿರ್ಮಾಣಗೊಳ್ಳಲಿರುವ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕೈಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮೂಡಲಗಿ ಹೊಸ ತಾಲ್ಲೂಕು ನಂತರ ಅನೇಕ ತಾಲ್ಲೂಕು ಮಟ್ಟದ ಕಛೇರಿಗಳನ್ನು ಆರಂಭಿಸಲಾಗಿದೆ. ಮುಖ್ಯವಾಗಿ ಅಗ್ನಿಶಾಮಕ ಠಾಣಾ ನಿರ್ಮಾಣ ಮಾಡಬೇಕೆಂಬುದು ಇಲ್ಲಿನ ಸಾರ್ವಜನಿಕರ ಬೇಡಿಕೆಯಾಗಿತ್ತು. ಇದಕ್ಕಾಗಿ ಅಧಿವೇಶನದಲ್ಲಿ ಎರಡು ಮೂರೂ ಬಾರಿ ಸರ್ಕಾರವನ್ನು ಒತ್ತಾಯಿಸಿ ಕೊನೆಗೂ ಠಾಣಾ ನಿರ್ಮಾಣಕ್ಕೆ ಸರ್ಕಾರವು ಅಸ್ತು ನೀಡಿದೆ. ಇಲ್ಲಿನ ಪುರಸಭೆಯಿಂದ ಅಗತ್ಯವಿರುವ ಕಟ್ಟಡ ನಿರ್ಮಾಣಕ್ಕೆ ೧.೨೯ ಎಕರೆ ನಿವೇಶನವನ್ನು ನೀಡಲಾಗಿದೆ. ಮುಂದಿನ ೨೦೨೭ ರಲ್ಲಿ ಮೂಡಲಗಿಯಲ್ಲಿ ಭವ್ಯವಾದ ಕಟ್ಟಡ ತಲೆಎತ್ತಲಿದೆ ಎಂದು ಅವರು ತಿಳಿಸಿದರು.
ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನವನ್ನು ನೀಡುತ್ತಿಲ್ಲ. ಪಂಚ ಗ್ಯಾರಂಟಿ ಯೋಜನೆಗಳಿಗೆ ಎಲ್ಲ ಹಣ ಹೋಗುತ್ತಿದೆ. ಅದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಮೂಲಕ ನಮ್ಮ ಕ್ಷೇತ್ರಕ್ಕೆ ಸ್ವಲ್ಪ ಮಟ್ಟಿಗೆ ಅನುದಾನವು ಬರುತ್ತಿದೆ. ರಸ್ತೆಗಳ ನಿರ್ಮಾಣಕ್ಕಾಗಿ ಸಿಎಂಐಡಿಎಫ್ ಯೋಜನೆಯಡಿ ೨೫ ಕೋಟಿ ರೂಪಾಯಿ ಅನುದಾನವು ಮಂಜೂರಾಗಿದೆ. ಇದರಲ್ಲಿ ೧.೯೫ ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಲಗಿ ಕ್ರಾಸ್ ದಿಂದ ಎ??????ರ್ ಕಾಲೇಜುವರೆಗಿನ ರಸ್ತೆ, ೬೦ ಲಕ್ಷ ರೂಪಾಯಿ ವೆಚ್ಚದಲ್ಲಿ ಎಪಿಎಂಸಿಯಿಂದ ಬಸ್ ನಿಲ್ದಾಣದ ಹಳ್ಳದವರೆಗಿನ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪುರಸಭೆಯ ಅನುದಾನದಡಿ ೪೬ ಲಕ್ಷ ರೂಪಾಯಿ ವೆಚ್ಚದಲ್ಲಿ ಹಳ್ಳದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸಚಿವ ಸತೀಶ್ ಜಾರಕಿಹೊಳಿಯವರು ನಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಅನುದಾನವನ್ನು ಮಂಜೂರು ಮಾಡಿಸಲು ಕಾರಣೀಕರ್ತರಾಗಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಅವರು ಹೇಳಿದರು.
ಮೂಡಲಗಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಸೇರಿದಂತೆ ಮೂರು ಹೊಸ ಕಾಮಗಾರಿಗಾಗಿ ಸುಮಾರು ೯.೦೯ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ೧.೫೧ ಕೋಟಿ ರೂಪಾಯಿ ವೆಚ್ಚದ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ನಂತರ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅನುದಾನದಲ್ಲಿ ಸುಮಾರು ೫.೨೮ ಕೋಟಿ ರೂಪಾಯಿ ವೆಚ್ಚದಲ್ಲಿ ೪.೪೫ ಎ???ಲ್ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಗುಡುಮೆ, ಮುಖಂಡರಾದ ರವೀಂದ್ರ ಸೋನವಾಲಕರ, ಅನ್ವರ ನದಾಫ, ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ಡಾ. ಎಸ್.ಎಸ್.ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಅಜೀಜ ಡಾಂಗೆ, ಸಂತೋ? ಸೋನವಾಲಕರ, ಈರಪ್ಪ ಬನ್ನೂರ, ಹಣಮಂತ ಗುಡ್ಲಮನಿ, ರವಿ ನೇಸೂರ, ಪ್ರಶಾಂತ ನಿಡಗುಂದಿ, ಮರೆಪ್ಪ ಮರೆಪ್ಪಗೋಳ, ಜಯಾನಂದ ಪಾಟೀಲ, ಶಿವು ಚಂಡಕಿ, ಪ್ರಕಾಶ ಮಾದರ, ನ್ಯಾಯವಾದಿ ಲಕ್ಷ್ಮಣ ಅಡಿಹುಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಭೂಸೇನಾ ನಿಗಮದ ಎಇ ಆರ್.ಪಿ, ನಾರಾಯಣಕರ, ಅಗ್ನಿಶಾಮಕ ಎಇಇ ಬಸವರಾಜ ಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ( ಪ್ರ) ಮಲಬನ್ನವರ, ಅಗ್ನಿ ಶಾಮಕ ಠಾಣೆಯ ಆರ್.ಎಫ್.ಓ ರಂಗನಾಥ, ಗುತ್ತಿಗೆದಾರ ಅಶೋಕ ಹಸರಂಗಿ ಸೇರಿದಂತೆ ಮೂಡಲಗಿ-ಗುರ್ಲಾಪೂರ ಪಟ್ಟಣದ ಹಲವು ಗಣ್ಯರು, ಪುರಸಭೆ ಮಾಜಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article