ನವದೆಹಲಿ, ಸೆಪ್ಟೆಂಬರ್ 1: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಸೋಮವಾರತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ ಎಂದು ಎಎನ್ಐ ಮೂಲಗಳು ತಿಳಿಸಿವೆ. ಅವರು ಇಂದು ದಕ್ಷಿಣ ದೆಹಲಿಯ ಚತ್ತರ್ಪುರದಲ್ಲಿರುವ ಖಾಸಗಿ ಫಾರ್ಮ್ಹೌಸ್ಗೆ ಸ್ಥಳಾಂತರಗೊಂಡಿದ್ದಾರೆ. ನಂತರ ಅವರು ಮಾಜಿ ಉಪರಾಷ್ಟ್ರಪತಿಗಳಿಗೆ ಅರ್ಹವಾದ ಟೈಪ್ -8 ಬಂಗಲೆಗೆ ತೆರಳಲಿದ್ದಾರೆ. ಚತ್ತರ್ಪುರದ ಗದೈಪುರ್ ಪ್ರದೇಶದಲ್ಲಿರುವ ಫಾರ್ಮ್ಹೌಸ್ ಐಎನ್ಎಲ್ಡಿ ನಾಯಕ ಅಭಯ್ ಚೌತಲಾ ಅವರಿಗೆ ಸೇರಿದೆ.
ಅಧಿಕೃತ ನಿವಾಸವನ್ನು ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್

ಈಗಾಗಲೇ ಸರ್ಕಾರಿ ನಿವಾಸವನ್ನು ಅವರಿಗೆ ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಅಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಅವರು ಶಿಫ್ಟ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಭಾರತದ ಮಾಜಿ ಉಪರಾಷ್ಟ್ರಪತಿಯಾದ 74 ವರ್ಷದ ಜಗದೀಪ್ ಧನ್ಖರ್ ದೆಹಲಿಯ ಚತ್ತರ್ಪುರದ ಗದೈಪುರ ಪ್ರದೇಶದಲ್ಲಿ ಪ್ರಮುಖ ಜಾಟ್ ನಾಯಕ ಮತ್ತು ಹಿರಿಯ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ನಾಯಕ ಅಭಯ್ ಚೌತಲಾ ಅವರ ಒಡೆತನದ ಫಾರ್ಮ್ಹೌಸ್ಗೆ ಸ್ಥಳಾಂತರಗೊಂಡಿದ್ದಾರೆ.