ಮಾಜಿ ಪುರಸಭೆ ಅಧ್ಯಕ್ಷ  ಬಸಪ್ಪ ಮಲ್ಲಪ್ಪ ಕೂಡಸೋಮಣ್ಣವರ ನಿಧನ

Ravi Talawar
ಮಾಜಿ ಪುರಸಭೆ ಅಧ್ಯಕ್ಷ  ಬಸಪ್ಪ ಮಲ್ಲಪ್ಪ ಕೂಡಸೋಮಣ್ಣವರ ನಿಧನ
WhatsApp Group Join Now
Telegram Group Join Now
ಬೈಲಹೊಂಗಲ. ಪಟ್ಟಣದ ಕುಡಸೋಮಣ್ಣವರ ಗಲ್ಲಿಯ ನಿವಾಸಿ ಬಸಪ್ಪ ಮಲ್ಲಪ್ಪ ಕುಡಸೋಮಣ್ಣವರ (78) ಇಂದು (ಮಂಗಳವಾರ) ನಿಧನರಾದರು.
ಬಿಎಂಕೆ ಎಂದೆ ಖ್ಯಾತರಾಗಿದ್ದ ಅವರು ಎರಡು ಭಾರಿ ಬೈಲಹೊಂಗಲ ಪುರಸಭೆಯ ಅಧ್ಯಕ್ಷರಾಗಿ  ಹಾಗೂ  ಎರಡು ಭಾರಿ  ಪಿಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಪ್ರವರ್ತಕರಾಗಿ, ಮಹಾಲಕ್ಷ್ಮೀ ಪಟ್ಟಣ ಸಹಕಾರಿ  ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ.
ಶ್ರೀ ವರ್ತಿಸಿದ್ಧಬಸವೇಶ್ವರ ಅರ್ಬನ್ ಕೋ-ಆಪ್ ಸೋಸೈಟಿ ಸ್ಥಾಪಿಸಿ ನಾಡಿನ ಜನತೆಗೆ ಆರ್ಥಿಕ ನೇರವು ನೀಡುವ ಮೂಲಕ ನಾಡಿನ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ರಾಜಕೀಯವಾಗಿ, ಸಾಮಾಜಿಕವಾಗಿ ನಾಡಿಗೆ ಅನೇಕ ಕೊಡುಗೆ ನೀಡಿದ್ದಾರೆ.ಮೃತರ ಅಂತಿಮ ದರ್ಶನಕ್ಕೆ ಗುಂಡ್ಲೂರ ಚಾಳ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮೃತರು ಪತ್ನಿ,ಮೂವರು ಪುತ್ರರನ್ನು,ಅಪಾರ ಬಂದು, ಬಳಗ ಅಗಲಿದ್ದಾರೆ.
    ಶೋಕ. ಅಗಲಿದ ನಾಯಕನ ನಿಧನಕ್ಕೆ  ಮುರುಸಾವಿರ ಮಠದ ಶ್ರೀ ಪ್ರಭು  ನೀಲಕಂಠ ಮಹಾಸ್ವಾಮಿಗಳು,ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ,ಡಾ. ವಿಶ್ವನಾಥ ಪಾಟೀಲ,ಮಹಾಂತೇಶ ದೊಡ್ಡಗೌಡರ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ ಸೇರಿದಂತೆ ಅನೇಕ ಮುಖಂಡರು, ಸಹಕಾರಿ ಬಂದುಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article