ಇಂದು ಮಾನವೀಯ ಶಿಕ್ಷಣ ಕುಸಿತ: ಮಾಜಿ ಸಂಸದ ರಮೇಶ ಕತ್ತಿ

Ravi Talawar
ಇಂದು ಮಾನವೀಯ ಶಿಕ್ಷಣ ಕುಸಿತ: ಮಾಜಿ ಸಂಸದ ರಮೇಶ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ: ಅಂದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯತಿರಿಕ್ತ ಪರಿಣಾಮದಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿರುವದು ಕಳವಳಕರ ಸಂಗತಿ ಎಂದು
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೪ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕ್ರೀಡಾ, ಹಾಗೂ ಇತರ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ
ವಿದ್ಯಾರ್ಥಿಗಳ ಬೀಳ್ಕೂಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಕಗಳಿಗೆ ಸೀಮಿತದ ಶಿಕ್ಷಣಕ್ಕಿಂತ ಸ್ವಾಲಂಬಿ ಬದುಕು ಕಟ್ಟಿಕೊಳ್ಳುವ ತಳಪಾಯದ
ಗುಣಮಟ್ಟದ ಶಿಕ್ಷಣ ಅವಶ್ಯವಾಗಿದೆ .ವಿದ್ಯಾರ್ಥಿಗಳು ಉದ್ಯೋಗಿ ಮನೋಭಾವನೆ ತೊರೆದು ಉದ್ದಿಮೆಯಾಗುವ ಸಂಕಲ್ಪ ಹೊಂದಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ ಅಭಿವೃದ್ಧಿ ಸಮಿತಿಯ ಪಿ.ಜಿ ಕೊಣ್ಣೂರ ಮಾತನಾಡಿ ಇಂದು ಪಾಲಕರು ಶಿಕ್ಷಕರ ಮೇಲೆ ನಿಯಂತ್ರಣ ಹೇರುತ್ತಿರುವದರಿಂದ ತಮ್ಮ
ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಮಕ್ಕಳ ಶಿಕ್ಷ ಪದವಿ ಶಿಕ್ಷಣ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಜವಾಬ್ದಾರಿ ಎಂಬುವದನ್ನು ಅರಿತುಕೊಳ್ಳಬೇಕು.
ವಿಧ್ಯಾರ್ಥಿ ಯಲ್ಲಾಲಿಂಗ ಹೊಸಮನಿ ಹಾಗೂ ಲಕ್ಷ್ಮಿ ಬಡಿಗೇರ ವೀರಾಗ್ರಣಿ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು ಗಣಿತ ಅರ್ಥ ಶಾಸ್ತ್ರದಲ್ಲಿ ೯೯ ಅಂಕ ಪಡೆದ ಕಾವೇರಿ ಕದಂ ಹಾಗೂ ಸುಧಾ
ಕರಬಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪ್ರಾಚಾರ್ಯ ಡಾ ಲಕ್ಮಣ ಪಟಾಯತ ,ಹುಕ್ಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಎ.ಕ ಪಾಟೀಲ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಶಾಲಾ ಸಮಿತಿ ಸದಸ್ಯರಾದ ಪ್ರಕಾಶ ಮುತಾಲಿಕ ರಾಜೇಶ ಮುನ್ನೊಳಿ, ಪರಗೌಡ ಪಾಟೀಲ, ಮಲ್ಲಿಕಾರ್ಜುನ ತೇರಣಿ,ರಾಯಪ್ಪ ಗೋಣಿ,ಮುನಾಫ ಅತ್ತಾರ,ಸುಹಾಸ ನೂಲಿ,ಉದಯಕುಮಾರ ಹುಕ್ಕೇರಿ, ಬಸವ ಚೌಗಲಾ,ಲೀಲಾವತಿ ರಜಪೂತ. ಪ್ರೋ ರಾಜೇಶ ಕಂಬಾರ, ಮಲ್ಲಿಕಾರ್ಜುನ ದಲಾಲ, ಸೋಹಿಲ್ ಸತ್ತಿಕರ, ರಾಣಿ ರತ್ನಪ್ರಬಾ, ಯಲಗೌಡ ಡಾಂಗೆ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ. ರೇಖಾ ನಿರಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ ಬಸವರಾಜ ವಾಸನ್ ವರದಿ ವಾಚಿಸಿದರು.

ಡಾ.ಎಮ್.ಎಸ್.ಖರಾಡಿ ನಿರೂಪಿಸಿದರು. ವಿ.ಬಿ ಪಾಟೀಲ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಪೋಟೋ ಶೀರ್ಷಿಕೆ – ೧೨-ಹುಕ್ಕೇರಿ-೦೨
ಹುಕ್ಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕ್ರೀಡಾ, ಹಾಗೂ ಇತರ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ
ವಿದ್ಯಾರ್ಥಿಗಳ ಬೀಳ್ಕೂಡುವ ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿದರು.

WhatsApp Group Join Now
Telegram Group Join Now
Share This Article