ಸಿರುಗುಪ್ಪ ಎಪಿಎಂಸಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಜೋಳ ಮೊಳಕೆ: ಮಾಜಿ ಎಂಎಲ್‌ಎ ಸೋಮಲಿಂಗಪ್ಪ ಆಕ್ರೋಶ

Ravi Talawar
ಸಿರುಗುಪ್ಪ ಎಪಿಎಂಸಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಜೋಳ ಮೊಳಕೆ: ಮಾಜಿ ಎಂಎಲ್‌ಎ ಸೋಮಲಿಂಗಪ್ಪ ಆಕ್ರೋಶ
WhatsApp Group Join Now
Telegram Group Join Now

 

ಬಳ್ಳಾರಿ ಮೇ 23.ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ಎಪಿಎಂಸಿಗೆ ರೈತರು ತಮ್ಮ ಜೋಳವನ್ನು ಖರೀದಿ ಕೇಂದ್ರಕ್ಕೆ ತಂದಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಆಗದೆ ಉಳಿದ ಜೋಳ ಮಳೆಗೆ ನೆನೆದು ಮೊಳಕೆ ಒಡೆದು ಲಕ್ಷಾಂತರ ರೂಪಾಯಿಗಳ ನ?ವನ್ನು ಅನುಭವಿಸಿದ್ದಾರೆ ನಿರ್ಲಕ್ಷಿತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನ? ಹೊಂದಿದ ರೈತರಿಗೆ ಜೋಳಕ್ಕೆ ಪರಿಹಾರವನ್ನು ನೀಡಬೇಕೆಂದು ಮಾಜಿ ಶಾಸಕ ಸೋಮಲಿಂಗಪ್ಪ ಸರ್ಕಾರವನ್ನು ಆಗ್ರಹಿಸಿದರು.
ಅವರು ಪಟ್ಟಣದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸಿರುಗುಪ್ಪ ಎಪಿಎಂಸಿಯಲ್ಲಿ ಜೋಳ ಖರೀದಿ ಕೇಂದ್ರದಲ್ಲಿನ ಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು ರೈತರು ತುಂಬಾ ತೊಂದರೆ ಮತ್ತು ಲಕ್ಷಾಂತರ ರೂಪಾಯಿಗಳ ನ?ವನ್ನು ಅನುಭವಿಸಿದ್ದಾರೆ ಇದಕ್ಕೆ ನೇರ ಕಾರಣ ಅಧಿಕಾರಿಗಳೇ ಆಗಿದ್ದಾರೆ ಅವರ ನಿರ್ಲಕ್ಷದಿಂದ ಈ ರೀತಿ ಘಟನೆ ಜರುಗಿದೆ ನ?ಕ್ಕೆ ಒಳಗಾದ ಎಲ್ಲಾ ರೈತರಿಗೆ ಜೋಳದ ಬೆಲೆ ಪರಿಹಾರವನ್ನು ನೀಡಬೇಕೆಂದು ರೈತರ ಪರವಾಗಿ ಸರ್ಕಾರವನ್ನು ಆಗ್ರಹಿಸಿದರು.
ಅ? ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಜೋಳ ಖರೀದಿ ಕೇಂದ್ರದಲ್ಲಿ ಆದ ಅವ್ಯವಸ್ಥೆಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸಿ ರೈತರು ಮಾರುಕಟ್ಟೆಗೆ ತಂದ ಜೋಳವನ್ನು ಬೇಗನೆ ಖರೀದಿ ಮಾಡಬೇಕೆಂದು ರಾಜ್ಯ ಹೆದ್ದಾರಿಯನ್ನು ಎರಡು ಗಂಟೆಗಳ ಕಾಲ ತಡೆದು ಪ್ರತಿಭಟನೆಯನ್ನು ನಡೆಸಿದರು.
ಈ ಪ್ರತಿಭಟನೆಯಲ್ಲಿ ಮೊಳಕೆ ಒಡೆದ ರೈತರ ಜೋಳವನ್ನು ರಸ್ತೆಗೆ ಚೆಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿಗಳಾದ ನರಸಪ್ಪ ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ರೈತರ ತಂದಂತಹ ಜೋಳವನ್ನು ಕರೀಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಇನ್ನೂ ಎರಡು ದಿನಗಳಲ್ಲಿ ರೈತರ ಜೋಳವನ್ನು ಬೇಗನೆ ಖರೀದಿ ಮಾಡದೆ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ಸೋಮಲಿಂಗಪ್ಪ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರಾದ ಕುಂಟನಹಳ್ ಮಲ್ಲಿಕಾರ್ಜುನ ಸ್ವಾಮಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ ಅಣ್ಣನವರು ಮಹಾದೇವ ರಾಮಕೃ? ವೈ ಡಿ ವೆಂಕಟೇಶ ಹಾಗೂ ನೂರಾರು ಜನ ರೈತ ಮುಖಂಡರು ಇದ್ದರು.

 

WhatsApp Group Join Now
Telegram Group Join Now
Share This Article