ರಸಗೊಬ್ಬರ ಪೂರೈಕೆ, ಉತ್ಪಾದನೆಯ ಹೊಣೆ ಕೇಂದ್ರ ಸರ್ಕಾರದ್ದು ಎಂಬ ಕನಿಷ್ಠ ಜ್ಞಾನ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಇದ್ದಂತೆ ಕಾಣುತ್ತಿಲ್ಲ. ಬಿಜೆಪಿ ನಾಯಕರು ಯಾವಾಗಲೂ ತಮ್ಮ ಜವಾಬ್ದಾರಿ ವಿಚಾರ ಬಂದಾಗ ಕಾಂಗ್ರೆಸ್ ಇಲ್ಲವೇ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ನಾಯಕರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಇದೀಗ ರಸಗೊಬ್ಬರ ವಿಷಯದಲ್ಲಿ ಇಂತಹುದ್ದೇ ರಾಜಕಾರಣ ಮಾಡುತ್ತಿದೆ. ಇವರಿಗೆ ಈ ಹಿಂದೆ ತಮ್ಮದೇ ಸರ್ಕಾರ ಇದ್ದಾಗ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಮಹನೀಯರು ಇಂದು ರೈತರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ.
ರಾಸಾಯನಿಕ ಗೊಬ್ಬರ ಪೂರೈಕೆ ಮಾಡುವ ಕೆಲಸ ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರಕ್ಕೆ ದೇಶದಲ್ಲಿರುವ ಕೃಷಿ ವಿಷಯ ತಿಳಿದೆ ಇಲ್ಲ. ಎಷ್ಟು ಗೊಬ್ಬರ, ಬೀಜ ಬೇಕು ಎಂಬುದರ ಬಗ್ಗೆ ಪೂರ್ಣ ಜ್ಞಾನ ಇಲ್ಲ. ಇದೆ ಕಾರಣಕ್ಕೆ ಇಂದು ಗೊಬ್ಬರ ಕೊರತೆ ಎದುರಾಗಿದೆ.
ಇನ್ನು ಯೂರಿಯ ಬದಲು ನ್ಯಾನೋ ಯೂರಿಯ ಬಳಸಿ ಎಂದು ಕೇಂದ್ರ ಸರ್ಕಾರ ಬಲವಂತವಾಗಿ ನ್ಯಾನೋ ಯೂರಿಯ ಬಳಕೆಗೆ ಒತ್ತುನೀಡಲು ಇಲಾಖೆ ಅಧಿಕಾರಿ, ರೈತರಿಗೆ ಒತ್ತಾಯ ಮಾಡುತ್ತಿದೆ. ಆದ್ರೆ ಬಳಕೆ ಮಾಡುವುದು ಹೇಗೆ ಎಂದು ಎಂಬುದನ್ನು ತಿಳಿಹೇಳುವ ಕನಿಷ್ಠ ಜ್ಞಾನ ಹೊಂದಿಲ್ಲ.ಅನ್ಯ ವಿಷಗಳಿಗೆ ಸಿಕ್ಕಾಪಟ್ಟೆ ಜಾಹಿರಾತು ನೀಡಿ ಪ್ರಚಾರ ಮಾಡುವ ಕೇಂದ್ರ ಸರ್ಕಾರ ಸಬ್ಸಿಡಿ ಉಳಿಸಲು ನ್ಯಾನೋ ಗೊಬ್ಬರ ತಂದ ವಿಷಯವನ್ನು ರೈತರಿಗೆ ತಿಳಿಸಲು ಒಂದೇ ಒಂದು ಸಣ್ಣ ಜಾಹಿರಾತು ನೀಡಿಲ್ಲ. ಇದರ ಮಧ್ಯೆ ನಮ್ಮ ಸರ್ಕಾರ ಕೃಷಿ ಇಲಾಖೆ ಮೂಲಕ ರೈತರಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ಆದರೂ ನ್ಯಾನೋ ಬಳಕೆಗೆ ಇನ್ನು ರೈತರು ಜಾಗರೂಕರಾಗಿಲ್ಲ. ಇದರ ಬಗ್ಗೆ ರಾಮುಲು ಅವರು ತುಟಿ ಬಿಚ್ಚಲ್ಲ.
ಯಾವುದೋ ಮತ್ತೊಂದು ಕಾರ್ಪೊರೇಟ್ ಕಂಪನಿಗೆ ಒಳಿತು ಮಾಡಲು ಅವರ ಮೂಲಕ ನ್ಯಾನೋ ಗೊಬ್ಬರ ಉತ್ಪಾದಿಸಿ ಅದನ್ನು ಮಾರಾಟ ಮಾಡಿ, ಲಾಭ ಗಳಿಸುವ ಹುನ್ನಾರದಿಂದ ಈ ರೀತಿ ರೈತರಿಗೆ ವಂಚನೆ ಮಾಡುವ ಕೆಲಸವನ್ನು ತಮ್ಮ ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದನ್ನು ರಾಮುಲು ಅವರು ತಿಳಿಯಬೇಕು ಎಂದು ವೆಂಕಟೇಶ್ ಹೆಗಡೆ ಆಗ್ರಹವನ್ನು ವ್ಯಕ್ತ ಪಡಿಸಿದ್ದಾರೆ.
ರಾಜ್ಯ ಸರ್ಕಾರ ಎಂತಹ ಆಡಳಿತ ನೀಡುತ್ತಿದೆ ಎಂಬುದು ನಿಮಗೆ ಅದಾಗಲೇ ಅರಿವಿಗೆ ಬಂದಿದೆ. ಕೇಂದ್ರದ ಹಣಕಾಸು ಇಲಾಖೆ ಹೇಳಿದ ಹಾಗೆ ತಲಾ ಆದಾಯದ ವಿಷಯದಲ್ಲಿ ಇಡೀ ದೇಶಕ್ಕೆ ನಂ.1 ಆಗಿದೆ. ಇದು ಜನಪರ ಕಾಳಜಿಗೆ ಹಿಡಿದ ಕನ್ನಡಿ ಆಗಿದೆ. ಇಂಥ ಆಡಳಿತದ ಬಗ್ಗೆ ಮಾತನಾಡುವುದು ಎಷ್ಟು ಸಮಂಜಸ ಎಂಬುದನ್ನು ರಾಮುಲು ಅರಿಯಲಿ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2531 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ 167 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲ ರೈತ ಕುಟುಂಬಗಳಿಗೂ ಪರಿಹಾರ ಸಿಕ್ಕಿದೆ ಎಂದು ಸರ್ಕಾರವೇ ವಿಧಾನಸಭೆಯಲ್ಲಿ ಹೇಳಿದೆ.
ಇನ್ನು ಈ ವರ್ಷ (ಮಾರ್ಚ್ ವರೆಗೆ) ರಾಜ್ಯದಲ್ಲಿ 527 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ 28 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲರಿಗೂ ಪರಿಹಾರ ಸಿಕ್ಕಿದೆ.
ಆದರೆ ಮೃತ ರೈತರಿಗೆ ಪರಿಹಾರವೇ ಸಿಗುತ್ತಿಲ್ಲ ಎಂಬ ರಾಮುಲು ಆರೋಪಕ್ಕೆ ಆಧಾರವೇ ಇಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿಬೇಡವೇ?