ತಾಕತ್ತು ಇದ್ದರೆ, ಸ್ವಂತ ಶಿಕ್ಷಣ ಸಂಸ್ಥೆ, ಕಾರ್ಖಾನೆ ಮಾಡಿ ತೋರಿಸು: ಸಚಿವ ಪಾಟೀಲ್’ಗೆ ಮಾಜಿ ಸಚಿವ ನಿರಾಣಿ ಸವಾಲು

Ravi Talawar
ತಾಕತ್ತು ಇದ್ದರೆ, ಸ್ವಂತ ಶಿಕ್ಷಣ ಸಂಸ್ಥೆ, ಕಾರ್ಖಾನೆ ಮಾಡಿ ತೋರಿಸು: ಸಚಿವ ಪಾಟೀಲ್’ಗೆ ಮಾಜಿ ಸಚಿವ ನಿರಾಣಿ ಸವಾಲು
WhatsApp Group Join Now
Telegram Group Join Now

ಬಾಗಲಕೋಟೆ: ಯಾರೋ ಪುಣ್ಯಾತ್ಮರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಕುಳಿತುಕೊಂಡು ಗೌಡಕಿ ಮಾಡುತ್ತಿ, ತಾಕತ್ತು ಇದ್ದರೆ, ಸ್ವಂತ ಶಿಕ್ಷಣ ಸಂಸ್ಥೆ, ಕಾರ್ಖಾನೆ ಮಾಡಿ ತೋರಿಸು ಎಂದು ಸಚಿವ ಎಂಬಿ.ಪಾಟೀಲ್’ಗೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಸವಾಲು ಹಾಕಿದ್ದಾರೆ.

ಬಾಗಲಕೋಟೆ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಎಂಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಂತನಾಳ ಶ್ರೀಗಳು, ದಿವಂಗತ ಹಳಕಟ್ಟಿ ಸೇರಿದಂತೆ ಹಲವು ಹಿರಿಯರು ಸೇರಿ ಬಿಎಲ್​ಡಿಇ ಸಂಸ್ಥೆ ಕಟ್ಟಿದ್ದಾರೆ. ಯಾರೋ ಕಟ್ಟಿರುವ ಹುತ್ತಕ್ಕೆ ಹಾವಾಗಿ ಬಂದು ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷನಾಗಿ ಮಜಾ ಮಾಡುತ್ತಿದ್ದಿಯಾ. ಸಂಸ್ಥೆಯಿಂದ ಹೊರ ಬಂದು ಸಂಸ್ಥೆ, ಕಾರ್ಖಾನೆಯನ್ನು ಕಟ್ಟು. ಅವಾಗ ನಿನ್ನ ಯೋಗ್ಯತೆ ಏನೆಬುಂದು ಗೊತ್ತಾಗುತ್ತದೆ. ನಿನ್ನ ಗೌಡಿಕೆ, ಅಧಿಕಾರ ದರ್ಪ ನಮ್ಮ ಮುಂದೆ ತೋರಿಸಬೇಡ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ‌ ಅವರನ್ನು ಶೆಡ್ ಗಿರಾಕಿ ಮತ್ತು ನನ್ನನ್ನು ದನ ಕಾಯುವವನು ಎಂದು ಹೇಳಿಕೆ ನೀಡಿರುವ ನಿನ್ನ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಿದೆ. ನಾನು ಮಂತ್ರಿಯಾಗಿ, ಒಬ್ಬ ಉದ್ಯಮಿಯಾಗಿ‌‌ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ನಿನ್ನ ಕೊಡುಗೆ ಏನು ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article