ಬಳ್ಳಾರಿ,ಜು.24..: ಬಡವರಿಗೆ, ಕೂಲಿಕಾರರಿಗೆ ಹಾಗೂ ಆಸ್ಪತ್ರಗೆ ಬರುವಂತ ಸಾರ್ವಜನಿಕರಿಗೆ, ರೋಗಿಗಳಿಗೆ ಅಲ್ಲದೆ ಕಾಲೇಜ್ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಉದ್ದೇಶದಿಂದ ನಮ್ಮ ಕಾಂಗ್ರೇಸ್ ಸರ್ಕಾರದ ವತಿಯಿಂದ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ ಈ ಕ್ಯಾಂಟೀನ್ನಲ್ಲಿ ಗುಣಮಟ್ಟದ ಆಹಾರ ನೀಡಲಾಗುವುದು ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಯಾವುದೇ ವದಂತಿಗಳಿಗೆ ಕಿವಿಗೊಡದೆ ಈ ಕ್ಯಾಂಟೀನಲ್ಲಿ ಊಟ ಮತ್ತು ಉಪಹಾರವನ್ನು ಸೇವಿಸಿ ಕ್ಯಾಂಟೀನ್ ಸದುಪಯೋಗ ಪಡೆದುಕೊಳ್ಳಿ ಎಂದು ಮಾಜಿ ಸಚಿವ ಹಾಲಿ ಗ್ರಾಮಾಂತರ ಶಾಸಕ ಬಿ ನಾಗೇಂದ್ರ ಸಾರ್ವಜನಿಕರಿಗೆ ಮನವಿ ಮಾಡಿದರು.
ಅವರು ಇಂದು ನಗರದ ಕೌಲ್ ಬಜಾರ್ 31ನೇ ವಾರ್ಡಿನ ಟಿಬಿ ಸ್ಯಾನಿಟೋರಿಯಂ ಆವರಣದಲ್ಲಿ ಬಳ್ಳಾರಿ ಜಿಲ್ಲಾಡಳಿತ, ನಾಗರಾಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ, ಮಾತನಾಡಿ,
ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದು, ನಮ್ಮದು ಬಡವರ ಪರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜನರಿಗೆ ಶಕ್ತಿ ಯೋಜನೆ, ಗೃಹ ಭಾಗ್ಯ, ಗೃಹ ಲಕ್ಷ್ಮಿ, ಯುವ ನಿಧಿ ಅಲ್ಲದೆ ಹೀಗೆ ಹಲವು ಯೋಜನೆಗಳನ್ನು ತಂದು ಅದರ ಜೊತೆಗೆ ಇಂದಿರಾ ಕ್ಯಾಂಟೀನ್ ಮತ್ತೆ ಜಾರಿಗೆ ತಂದು ಜನರಿಗೆ ಅನುಕೂಲವಾಗುವ ಪ್ರದೇಶದಲ್ಲಿ ಆದ್ಯತೆ ನೀಡಲು ಸೂಚಿಸಲಾಗಿದೆ ಇದನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಗ್ರಾಮಾಂತರ ಬಿ
ಶಾಸಕ ನಾಗೇಂದ್ರವರು ಹೇಳಿದರು.
ನಂತರ ಮಾಜಿ ಮೇಯರ್ ಶ್ವೇತಾ ಸೋಮು ಮಾತನಾಡಿ ನಮ್ಮ ವಾರ್ಡಿನಲ್ಲಿ ಬರುವ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ನಮ್ಮ ಹೆಮ್ಮೆಯ ಶಾಸಕರಾದ ನಾಗೇಂದ್ರಣ್ಣನವರು ಉದ್ಘಾಟನೆ ಮಾಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಬಗ್ಗೆ ಕೂಡ ಸಹಕಾರ ನೀಡಿದ್ದಾರೆ, ಇಂಥ ಶಾಸಕರಿಂದ ನಮಗೆ ಕೆಲಸ ಮಾಡಲು ಇನ್ನಷ್ಟು ಹುರುಪು ಹುಮ್ಮಸ್ಸು ಬಂದಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡಿನ ಆಸ್ಪತ್ರೆ ಪಕ್ಕದಲ್ಲಿ ಬರುವ ರಸ್ತೆ ಮತ್ತು ರಾಮಾಂಜನೇಯ ನಗರದಲ್ಲಿ ಮುಖ್ಯವಾದ ಸಾರ್ವಜನಿಕರ ಬೇಡಿಕೆ ಸುಮಾರು 50,ವರ್ಷಗಳಿಂದ ವಾಸ ಮಾಡುತ್ತಿರುವ ನಿವೇಶನದ ಪಟ್ಟಗಳ ಕುರಿತು ಶಾಸಕರ ಗಮನಕ್ಕೆ ತಂದಾಗ, ತಕ್ಷಣ ಶಾಸಕ ಬಿ.ನಾಗೇಂದ್ರವರು ಮಹಾನಗರ ಪಾಲಿಕೆ ಆಯುಕ್ತರಾದ ಜಿ.ಖಲೀಲ್ ಸಾಬ್ ಅವರನ್ನು ಕರೆದು ಈ ಭಾಗದ ಜನರು ಸುಮಾರು 50,ವರ್ಷಗಳಿಂದ ವಾಸ ಮಾಡುತ್ತಿದ್ದಾರೆ, ಈ ಭಾಗದಲ್ಲಿ ಈಗಾಗಲೇ ಸರ್ವೆ ಕೂಡ ನಡೆದಿದ್ದು, ತಕ್ಷಣ ಜನತೆಗೆ ಡಿಮ್ಯಾಂಡ್ ನೋಟಿಸನ್ನು ನೀಡಿ ಆದಷ್ಟು ಬೇಗ ಜನರಿಗೆ ಪಟ್ಟಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಅವರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಸುಕುಂ ರಿಯಾಜ್, ಮಾಜಿ ಮೇಯರ್ ಶ್ವೇತಾ ಸೋಮು, ಪಾಲಿಕೆ ಸದಸ್ಯರುಗಳಾದ, ಉಮಾಪತಿ, ಆಸಿಫ್, ನಾಜು, ನಾಗಲಕೆರೆ ಗೋವಿಂದ, ಕಾಂಗ್ರೆಸ್ ಮುಖಂಡರುಗಳಾದ ಗುಮ್ಮನೂರು ಜಗನ್, ಡಿ.ಅಯಾಜ್ ಅಹಮದ್, ಅಲ್ಲ ಬಕಾಶ್, ಜಂಡ ಜಿಲಾನ್, ಬಿ.ದುರ್ಗಣ್ಣ, ಇಷಾಕ್, ಉದಯ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.