ಅಹಿಂದ ಕಾರ್ಮಿಕ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಮಾಜಿ ಸಚಿವ ಬಿ.ನಾಗೇಂದ್ರ

Ravi Talawar
ಅಹಿಂದ ಕಾರ್ಮಿಕ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಮಾಜಿ ಸಚಿವ ಬಿ.ನಾಗೇಂದ್ರ
WhatsApp Group Join Now
Telegram Group Join Now
ಅಹಿಂದ ನೂತನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ಹೆಚ್.ಆಂಜನೇಯ್ಯ ನೇಮಕ
ಬಳ್ಳಾರಿ:ಜುಲೈ.24. ನಗರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರ ಅವರ ನಿವಾಸದ ಕಚೇರಿಯಲ್ಲಿ ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರ ನೇತೃತ್ವದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರ ಅವರ ಕೃಪಾ ಆಶೀರ್ವಾದದೊಂದಿಗೆ ಜಿಲ್ಲಾ ಕಾರ್ಮಿಕ ಘಟಕದ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.
ನೂತನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ಹೆಚ್. ಆಂಜನೇಯ್ಯ, ಉಪಾಧ್ಯಕ್ಷರಾಗಿ ಟಿ.ಕ್ರಾಂತಿ ಕುಮಾರ್, ಕಾರ್ಯದರ್ಶಿಯಾಗಿ ಹೆಚ್, ಎಂ.ಹೊನ್ನೂರಸ್ವಾಮಿ, ಹೆಚ್.ರಮೇಶ್ ಮತ್ತು ಬಳ್ಳಾರಿ ಗ್ರಾಮಾಂತರ ತಾಲೂಕು ಕಾರ್ಮಿಕ ವಿಭಾಗದ ಅಧ್ಯಕ್ಷರನ್ನಾಗಿ ಚೇಳ್ಳಗುರ್ಕಿ ರಾಮಕೃಷ್ಣ ಇವರುಗಳಿಗೆ ಮಾಜಿ ಸಚಿವರಾದ ಬಿ.ನಾಗೇಂದ್ರ ಅವರು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಹಿಂದ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ. ಕನಕ ಅವರು ಕಾರ್ಯಕ್ರಮವನ್ನು ಮುಂದಾಳತ್ವವನ್ನು ವಹಿಸಿದ್ದರು.
ನಂತರ ಮಾತನಾಡಿದ ಮಾಜಿ ಸಚಿವಾದ   ಬಿ.ನಾಗೇಂದ್ರ ಅವರು ಕರ್ನಾಟಕ ಅಹಿಂದ ಜನ  ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು,  ಪದಾಧಿಕಾರಿಗಳು ಮತ್ತು ಕಾರ್ಮಿಕ ಘಟಕದ ಸಂಘಟನೆ ಕಟ್ಟುವಲ್ಲಿ ಉತ್ಸಾಹ ತುಂಬಿದ್ದು ಇದೇ ಉತ್ಸಹವನ್ನು ಮುಂದೆ ಹೋರಾಟ, ಸಮಾಜ ಸೇವೆ ಸೇರಿದ ವಿವಿಧ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಶೋಷಿತ ಸಮುದಾಯಗಳ ಪರ ಹಾಗೂ ಎಲ್ಲಾ ಜಾತಿ ಜನಾಂಗದವರ ಪರವಾಗಿ ಕೆಲಸ ಮಾಡಬೇಕು. ಅಲ್ಲದೆ ಮುಂದೆ ಬರುವಂತ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೂಜಿಸುವಂತಹ ಕೆಲಸ ಮಾಡಬೇಕಾದರೆ ಅವರು ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರತಿಯೊಂದು ಗ್ರಾಮದಲ್ಲಿ ಜನಗಳಿಗೆ ತಲುಪಿಸುವಂತ ಕೆಲಸ ಮಾಡಬೇಕೆಂದು ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನನ್ನ ಸಮಾಜ ಸೇವೆ ಕಂಡು ನನಗೆ ಅಹಿಂದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರಿಗೆ ಹಾಗೂ ಅಹಿಂದ ಎಲ್ಲಾ ಪದಾಧಿಕಾರಿಗಳಿಗೆ ಹೃತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತು ಅಹಿಂದ ಸಂಘದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಂಘದ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದು ಚೇಳ್ಳಗುರ್ಕಿ ಹೆಚ್.ಆಂಜನೇಯ್ಯ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಮಾರುತಿ, ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ಜಿಲ್ಲಾ ಉಪಾಧ್ಯಕ್ಷರಾದ ಚೇಳ್ಳಗುರ್ಕೀ ನಾಗರಾಜ್‌, ಯುವ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಆಪ್ತಮಿತ್ರ ಭಾಷಾ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಸಿ.ಗಂಗಾಧ‌ರ್, ನಗರ ಉಪಾಧ್ಯಕ್ಷರಾದ ಮೆಹಬೂಬ್, ಬಾಷಾ, ನಗರ ಉಪಾಧ್ಯಕ್ಷರಾದ ಖಾಲಿದ್ ಬಾಷ ಹಾಗೂ ಯುವ ಘಟಕದ ಗ್ರಾಮಾಂತರ ಅಧ್ಯಕ್ಷರಾದ ವೈಫೈ ಶಿವು, ಬಾಷ, ಸುನೀಲ್, ಭೀಮ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article