ಹುಕ್ಕೇರಿ ತಾಲೂಕಿನ ಸಹಕಾರಿ ಸಂಸ್ಥೆಗಳು ಹೊರಗಿವನ ಕೈ ಸೇರಬಾರದು: ಮಾಜಿ ಸಚಿವ ಎ.ಬಿ.ಪಾಟೀಲ

Ravi Talawar
ಹುಕ್ಕೇರಿ ತಾಲೂಕಿನ ಸಹಕಾರಿ ಸಂಸ್ಥೆಗಳು ಹೊರಗಿವನ ಕೈ ಸೇರಬಾರದು: ಮಾಜಿ ಸಚಿವ ಎ.ಬಿ.ಪಾಟೀಲ
WhatsApp Group Join Now
Telegram Group Join Now
ಸಂಕೇಶ್ವರ : ನಮ್ಮ ಹುಕ್ಕೇರಿ ತಾಲೂಕಿನ ಸಹಕಾರಿ ಸಂಸ್ಥೆಗಳು ಹೊರಗಿವನ ಕೈ ಸೇರಿದರೆ ನಮ್ಮವರು ಅವರ ಮುಂದೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ ಆದ ಕಾರಣ ಹೊರಗಿನವರಿಗೆ ಅವಕಾಶ ಕೊಡದೇ ನಮ್ಮವರಿಗೆ ಬೆಂಬಲಿಸಿ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.
ಸಮೀಪದ ಕಮತನೂರ ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕತ್ತಿ ಅವರು ಹಾಗೂ ನಾವು ಅನಿವಾರ್ಯವಾಗಿ ತಾಲೂಕಿನ ಸಹಕಾರಿ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಒಂದಾಗಬೇಕಾದ ಪರಿಸ್ಥಿತಿ ಬಂದಿದ್ದು, ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಆಗಿದ್ದು, ಸಹಕಾರಿ ರಂಗದಲ್ಲಿ ರಾಜಕೀಯ ಇಲ್ಲ. ಆದ ಕಾರಣ ನಮ್ಮ ಪ್ಯಾನಲ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾನಾಡಿ ಗ್ರಾಮದಲ್ಲಿ ನಿಮ್ಮಲ್ಲಿ ಮನಸ್ತಾಪಗಳಿದರು ಸಹ ಅದನ್ನು ಸರಿಪಡಿಸಿಕೊಂಡು ಒಂದುಗೂಡಿ ನಾವೆಲ್ಲರೂ ತಾಲೂಕಿನ ಹಿತ ಕಾಪಾಡುವಲ್ಲಿ ಕೆಲಸ ಮಾಡೋಣ ಎಂದು ಬರುವ ಚುನಾವಣೆಯಲ್ಲಿ ನಮ್ಮ ಬೆಂಬಲ ನೀಡಿ ಎಂದರು.
ಕಮತನೂರು ಗ್ರಾಮದರಿಂದ ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಸನ್ಮಾನಿಸಲಾಯಿತು.
ಪಿಕೆಪಿಸ್ ಅಧ್ಯಕ್ಷ ಬಿ.ಜೆ.ಪಾಟೀಲ, ಮುಖಂಡರಾದ ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ಶಿವಾನಂದ ಮುಡಸಿ,ಪ್ರಶಾಂತ ಪಾಟೀಲ,ಚಿದಾನಂದ ಕರದನ್ನವರ,ರೋಹನ ನೇಸರಿ,ಕಲ್ಲಣ್ಣಾ ಚೌಗಲಾ, ಗುರುಲಿಂಗ ಹಿರೇಕುಡಿ,ಬಸವರಾಜ ಬೊರಗಲ್ಲಿ, ಸುಭಾಷ ಕಾಸರಕರ, ಸಚೀನ ಸಪಾಟೆ, ಸುರೇಶ ಬೊರಗಲ್ಲಿ, ಶ್ರೀಧರ ಕುಲಕರ್ಣಿ, ಮಲ್ಲಿಕಾರ್ಜುನ ಕಾನಡೆ, ಚೇತನ ಬಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article