ಬಳ್ಳಾರಿ, ಮಾ.11: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 34ರಲ್ಲಿ ಮಾಜಿ ಮೇಯರ್ ಎಂ.ರಾಜೇಶ್ವರಿ ಅವರು ಬುಧವಾರ ಪೈಪಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಅಂದಾಜು ವೆಚ್ಚ 10 ಲಕ್ಷ ರೂ.ಗಳ 15ನೇ ಹಣಕಾಸು ಯೋಜನೆಯ ಅನುದಾನದ ಅಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜೇಶ್ವರಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಭತ್ರಿ ಮಂಜು, ಪರಮೇಶ್, ಪೆದ್ದ ಷಣ್ಮುಖ, ಈಶ್ವರ, ಹೊನ್ನೂರಸ್ವಾಮಿ, ಸೂರಿ, ತಿಪ್ಪೇಶ, ಜಡೆಪ್ಪ ಮತ್ತು ಯೋಗಾನಂದ ರೆಡ್ಡಿ ಹಾಜರಿದ್ದರು.


