ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ದಾಖಲು: ಆರೋಗ್ಯ ವಿಚಾರಿಸಿದ ಖರ್ಗೆ

Ravi Talawar
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ದಾಖಲು: ಆರೋಗ್ಯ ವಿಚಾರಿಸಿದ ಖರ್ಗೆ
WhatsApp Group Join Now
Telegram Group Join Now

ಬೆಂಗಳೂರು,07: ಅನಾರೋಗ್ಯದ ಹಿನ್ನೆಲೆಯಲ್ಲಿ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ದಾಖಲಾಗಿರುವ ಮಣಿಪಾಲ್ ಆಸ್ಪತ್ರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.

ದಾಖಲಾದ ದಿನಕ್ಕೆ ಹೋಲಿಸಿದರೆ ಪ್ರಸ್ತುತ ಕೃಷ್ಣ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿದೆ. ಅವರು ಆಲರ್ಟ್ ಆಗಿದ್ದು, ಒಳ್ಳೆಯ ಮನಸ್ಥಿತಿ ಹೊಂದಿದ್ದಾರೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮಣಿಪಾಲ್ ಆಸ್ಪತ್ರೆ ಹೇಳಿದೆ. 91 ವರ್ಷದ ಮಾಜಿ ವಿದೇಶಾಂಗ ಸಚಿವರು ಮೈಸೂರಿನ ಡಾ. ಸತ್ಯ ನಾರಾಯಣ ಅವರ ನೇತೃತ್ವದ ವೈದ್ಯಕೀಯ ತಂಡದ ನಿಗಾವಣೆಯಲ್ಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಎಸ್ ಎಂ ಕೃಷ್ಣ ಅವರು ನಮ್ಮ ಮಾಜಿ ಮುಖ್ಯಮಂತ್ರಿ, ನಾನು ಅವರೊಂದಿಗೆ ರಾಜ್ಯದಲ್ಲಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಕೇಂದ್ರದಲ್ಲಿ ನನ್ನ ಜೊತೆ ಸಚಿವರಾಗಿದ್ದರು. ಅವರ ಅನಾರೋಗ್ಯದ ಬಗ್ಗೆ ವಿಚಾರಿಸಲು ಇಲ್ಲಿಗೆ ಬಂದಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾಗಿ ತಿಳಿಸಿದರು.

ಕೃಷ್ಣ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಮಾತನಾಡುತ್ತಿದ್ದಾರೆ ಮತ್ತು ನಾನು ಯಾವಾಗ ಬಂದೆ ಎಂದು ಕೇಳಿದರು. ಇತರ ವಿಷಯಗಳ ಬಗ್ಗೆಯೂ ವಿಚಾರಿಸಿದರು. ಅವರು ಮೊದಲಿನಿಂದಲೂ ಶಿಸ್ತಿನ ಜೀವನ ಕಾಪಾಡಿಕೊಂಡು ಬಂದಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ತ್ವರಿತವಾಗಿ ಸುಧಾರಿಸುತ್ತಾರೆ. ವೈದ್ಯರು ಕೂಡ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article