ಅಂಜಲಿ ಕೊಲೆ ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

Ravi Talawar
ಅಂಜಲಿ ಕೊಲೆ ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
WhatsApp Group Join Now
Telegram Group Join Now

ಗದಗ: ”ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ”ನೇಹಾ ರೀತಿಯಲ್ಲೇ ನಿನ್ನನ್ನೂ ಕೊಲೆ ಮಾಡುವುದಾಗಿ ಯುವತಿಗೆ ಮೊದಲೇ ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ಕೂಡ ಕೊಟ್ಟಿದ್ದರು. ಆದರೆ ಈ ಬಗ್ಗೆ ಪೊಲೀಸರು ಉದಾಸೀನ ತೋರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮೊದಲೇ ಬಂಧಿಸಿದ್ದರೆ ಕೊಲೆ ನಡೆಯುತ್ತಿರಲಿಲ್ಲ. ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಪೊಲೀಸರು ಈ ಕೊಲೆಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ” ಎಂದು ಹೇಳಿದರು.

“ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ಕೇವಲ ರಾಜಕೀಯ ವಿರೋಧಿಗಳ ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್​ ಹಾಕೋದ್ರಲ್ಲಿ ಪೊಲೀಸರು ನಿರತರಾಗಿದ್ದಾರೆ. ಸಂಪೂರ್ಣ ಅವ್ಯವಹಾರ, ದಂಧೆಯಲ್ಲಿ ತೊಡಗಿದ್ದಾರೆ. ಇಸ್ಪೀಟ್, ಮಟ್ಕಾ, ಕ್ಲಬ್‌ಗಳು, ಮರಳು ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ದೊಡ್ಡ ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಇಡr ಸರ್ಕಾರವೇ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ” ಎಂದು ಟೀಕಿಸಿದರು.

“ಗೂಂಡಾಗಳು ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಗದಗದಲ್ಲಿ ಒಂದು ಗಂಟೆಯಲ್ಲಿ ನಾಲ್ಕು ಜನರ ಕೊಲೆ ಮಾಡಿ ಹೋಗ್ತಾರೆ ಅಂದ್ರೆ ಎಷ್ಟು ಧೈರ್ಯ?. ಹಂತಕರಿಗೆ ಯಾರ ಭಯವೂ‌ ಇಲ್ಲದಂತಾಗಿದೆ. ರಾಜ್ಯದಲ್ಲಿ ಯಾರ ಪ್ರಾಣವೂ ಸುರಕ್ಷಿತವಾಗಿಲ್ಲ. ಯಾವುದೇ ಸಂದರ್ಭದಲ್ಲಿ ಎಲ್ಲಿ ಏನು ಬೇಕಾದ್ರೂ ಗಲಾಟೆ, ದಾಂಧಲೆ ಆಗುತ್ತವೆ, ಕೊಲೆಗಳಾಗಿ ಮಾರ್ಪಡುತ್ತವೆ. ಸಂಪೂರ್ಣ ಭಯದ ವಾತಾವರಣವಿದೆ. ಗೂಂಡಾ ಸರ್ಕಾರ ಈ ರಾಜ್ಯದಲ್ಲಿದೆ” ಎಂದರು.

“ನೇಹಾ ಹಿರೇಮಠ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ತಿಳಿಸಿದ್ರು. ಹಾಡಹಗಲೇ ಕಾಲೇಜ್ ಕ್ಯಾಂಪಸ್​​ನಲ್ಲಿ ಕೊಲೆಯಾದ್ರೆ ವಿಪಕ್ಷಗಳು ಸುಮ್ನೆ ಇರಬೇಕಾ?. ಸಾರ್ವಜನಿಕರು ಪ್ರತಿಭಟನೆ ಮಾಡಿದ್ರು. ಜನರು ರಾಜಕೀಯ ಮಾಡ್ತಾರಾ” ಎಂದು ಬೊಮ್ಮಾಯಿ ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article