ಪಕ್ಷ ಮರೆತು ಸಹಕಾರಿ ತತ್ವದಡಿ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ; ಎ.ಬಿ ಪಾಟೀಲ, ರಮೇಶ ಕತ್ತಿ

Ravi Talawar
ಪಕ್ಷ ಮರೆತು ಸಹಕಾರಿ ತತ್ವದಡಿ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ; ಎ.ಬಿ ಪಾಟೀಲ, ರಮೇಶ ಕತ್ತಿ
WhatsApp Group Join Now
Telegram Group Join Now

* ರಾಜಕೀಯ ವೈರಿಗಳಾಗಿದ್ದ ಕತ್ತಿ ಹಾಗೂ ಪಾಟೀಲ ಕುಟುಂಭಗಳು ಒಂದೆ ವೇದಿಕೆಯಲ್ಲಿ
* ಪಕ್ಷ ಮರೆತು ಸಹಕಾರಿ ತತ್ವದಡಿ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸಲು ಮುಂದಾದ ಮಾಜಿ ಸಚಿವ ಎ.ಬಿ ಪಾಟೀಲ, ಮಾಜಿ. ಸಂಸದ ರಮೇಶ ಕತ್ತಿ.
* ಕಾರ್ಯಕರ್ತರಲ್ಲಿ ಕೂತೂಹಲ. ಜೊಲ್ಲೆಯವರಿಗೆ ಮುಖಭಂಗ, ರೈತರಲ್ಲಿ ಮಂದಹಾಸ,

ಹುಕ್ಕೇರಿ; ತಾಲೂಕಿನ ಹಿರಿಯರು ಶ್ರಮದ ಫಲವಾಗಿ ಸಹಕಾರಿ ತತ್ವದಡಿ ಹುಟ್ಟಿ ಬೆಳೆದು ನಿಂತಿರುವ ಸಹಕಾರಿ ಸಂಸ್ಥೆಗಳು ಉಳಿವಿಗಾಗಿ ಹಾಗೂ ತಾಲೂಕಿನ ರೈತರ, ಕಾರ್ಮಿಕರ ಹಾಗೂ ಅದರ ಮೇಲೆ ಅವಲಂಬಿತವಾಗಿರುವ ಕುಟುಂಬಗಳ ಮತ್ತು ಜನತೆಯ ಹಿತದೃಷ್ಟಿಂಯಿಂದ ಕತ್ತಿ ಮತ್ತು ಪಾಟೀಲ ಕುಟುಂಭ ರಾಜಕೀಯ ರಹಿತವಾಗಿ ಸೇವಾ ಮನೋಭಾವನೆಯಿಂದ ಒಂದಾಗಿ ಕಾರ್ಯನಿರ್ವಹಿಸುವದಾಗಿ ಮಾಜಿ ಸಚಿವ ಎ.ಬಿ ಪಾಟೀಲ, ಹಾಗೂ ಮಾಜಿ ಸಂಸದ ರಮೇಶ ಕತ್ತಿ ಶಾಸಕ ನಿಖಿಲ್ ಕತ್ತಿ ಜಂಟಿಯಾಗಿ ಹೇಳಿದರು.
ಅವರು ಇಂದು ಸೋಮವಾರ ತಾಲೂಕಿನ ಸಂಕೇಶ್ವರ ಸಭಾ ಭವನದಲ್ಲಿ ಆಡಳಿತ ಮಂಡಳಿಯೊಂದಿಗೆ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಸಹಕಾರಿ ತತ್ವ ಹಾಗೂ ಲಿಸ್ ಮೇಲೆ ಕೊಡುವ ವಿಚಾರದಲ್ಲಿ ನಡೆದ ಆಡಳಿತ ಮಂಡಳಿಯರ ನಡುವೆ ನಡೆದ ಗೊಂದಲದಲ್ಲಿ ಬೇರೆಯವರ ಹಸ್ತಕ್ಷೇಪದಿಂದ ಕಾರ್ಖಾನೆಯ ಮತ್ತು ರೈತರ ಹಾಗೂ ಕಾರ್ಮಿಕರ ಮೇಲೆ ವ್ಯತರಿಕ್ತ ಪರಿಣಾಮ ನಡೆದು ಹಾಗೂ ಕಾರ್ಖಾನೆ ನಡೆಸಲು ಮುಂದೆ ಬಂದಿದ್ದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಆಡಳಿತ ಮಂಡಳಿಯವರ ನಡುವೆ ಹೊಂದಾಣಿಕೆಯಾಗದೆ ಜೊಲ್ಲೆ ಕೈ ಎತ್ತಿದ ಮೇಲೆ ಆಡಳಿತ ಮಂಡಳಿಯವರ ಮತ್ತು ರೈತರ ಒತ್ತಾಯದ ಮೇರೆಗೆ ನಾವಿಬ್ಬರು {ಎ.ಬಿ ಪಾಟೀಲ, ಮತ್ತು ರಮೇಶ ಕತ್ತಿ } ಮಧ್ಯಸ್ಥಿತಿP ಹೊತ್ತು ಸಂಸ್ಥೆಯ ಪರ ನಿಲ್ಲಬೇಕಾದ ಅನಿವಾರ್ಯ, ನಮ್ಮಿಬ್ಬರ ರಾಜಕಿಯ ಪಕ್ಷಗಳು ಬೇರೆ ಇದ್ದರೂ ಕೂಡ ಕಾರ್ಖಾನೆಯ ಹಿತ ದೃಷ್ಟಿಯಿಂದ ನಾವಿಬ್ಬರೂ ಒಂದಾಗಿ ಕಾರ್ಖಾನೆ ನಡೆಸಿ ಮೂರು ತಾಲೂಕಿನ ರೈತರ ಕಬ್ಬುಗಳನ್ನು ತಂದು ೧೦ ಲಕ್ಷ ಟನ್ ನುರಿಸುವ ಗುರಿ ಹೊಂದಿದ್ದು . ಕಾರಣ ರೈತರು ನಮ್ಮ ಮೇಲೆ ವಿಶ್ವಾಸವಿಟ್ಟು ಕಬ್ಬು ಪೂರೈಸಬೇಕು, ರೈತರ ಬೆಳೆಗೆ ತಕ್ಕ ಬೆಲೆ ನೀಡುತ್ತೇವೆ. ಎಂದು ಮನವಿ ಮಾಡಿಕೊಂಡರು.
ಪರೋಕ್ಷವಾಗಿ ಜೊಲ್ಲೆ ಹಾಗೂ ಜಾರಕಿಹೊಳಿಗೆ ಟಾಂಗ್ ಕೊಟ್ಟ ರಮೇಶ ಕತ್ತಿ. ಯಾರಿಗೂ ಕೌಂಟರ ಕೊಡುವ ಅವಶ್ಯಕತೆಯಿಲ್ಲ ನಮಗಿಲ್ಲ. ಸಂಘ ಸಂಸ್ಥೆಗಳನ್ನು ಉಳಿಸುವದೆ ನಮ್ಮಗುರಿ ಇಲ್ಲಿ ಯಾವ ರಾಜಕೀಯ ಲಾಭವೂ ಇಲ್ಲ ಎಂದರು.
ಶಾಸಕ ನಿಖಿಲ್ ಕತ್ತಿ ಮಾತನಾಡಿ ನಮ್ಮ ತಾಲೂಕಿನ ಹಿರಿಯರಾದ ಮಾಜಿ ಸಚಿವ ಎ.ಬಿ ಪಾಟೀಲ ಮತ್ಚತು ಮಾಜಿ ಸಂಸದ ರಮೇಶ ಕತ್ತಿ ಅವರುಗಳ ಪಕ್ಷಗಳ ಬೇರೆ ಬೇರೆ ಯಾಗಿದ್ದರೂ ಸಹಕಾರಿ ರಂಗದಲ್ಲಿ ರಾಜಕೀಯ ನಡೆಸದೆ ಸಂಸ್ಥೆಗಳನ್ನು ಅವರ ಮಾರ್ಗದರ್ಶನ ನಾವು ಕಾರ್ಕಾನೆಯನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು
ಅಧ್ಯಕ್ಷ ಅಜ್ಜಪ್ಪಾ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಹಿರಿಯರಾದ ಅಪ್ಪಾಸಾಹೇಬ ಶಿರಕೊಳಿ, ಆಡಳಿತ ಮಂಡಳಿ ಸದಸ್ಯರು , ವಿನಯ ಪಾಟೀಲ, ಪವನ ಕತ್ತಿ, ಸತ್ಯಪ್ಪಾ ನಾಯಿಕ, ರಾಜು ಮಗದುಮ್ಮ, ಎಸ್ ಆರ್ ಕರ್ಕಿನಾಯಿಕ, ನಂದು ಮುಡಸಿ, ಸೇರಿದಂತೆ ಎ.ಬಿ ಪಾಟೀಲ, ಮತ್ತು ರಮೇಶ ಕತ್ತಿ ಅನುಯಾಯಿಗಳು ಉಪಸ್ಥಿತರಿದ್ದರು. ವಿಜಯೋತ್ಸವ- ಎರಡು ಪಕ್ಷಗಳು ಕಾರ್ಯಕರ್ತರಿಂದ ಕಾರ್ಖಾನೆಯ ಆವರಣದಲ್ಲಿ ಪಟಾಕಿ, ಸಿಡಿಸಿ ವಿಜ್ರಂsನಿಸಿದರು.

ಹು

WhatsApp Group Join Now
Telegram Group Join Now
Share This Article