ಇಂಡಿ: ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಗ್ರಾಮಗಲ್ಲಿ ನೀರಂತರವಾಗಿ ಕಬ್ಬು ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಎಂದರು.
ತಾಲೂಕಿನ ಅಹೀರಸಂಗ ಗ್ರಾಮದ ಶ್ರೀಮಂತ ಇಂಡಿ ಇವರ ತೋಟದಲ್ಲಿ ಶ್ರೀ ಭಿಮಾಶಂಕರ ಸಹಕಾರಿ ಸಕ್ಕರೆ ಕಾರಖಾನೆ ಮರಗೂರ, ಶ್ರೀ ಶಾಂತೇಶ್ವರ ವಿವಿದ್ದೋಶಗಳ ಸಹಕಾರ ಸಂಘ ನಿ. ಹೊರ್ತಿ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೋಡ ಕಬ್ಬಿನ ಬೆಳೆ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಕೃಷಿ ಪದತ್ತಿ ಅಳವಡಿಸಿಕೊಂಡು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಅಧಿಕ ಇಳುವರಿ ಪಡೆಯಲು ಹನಿ ನೀರಾವರಿ ಪದ್ದತ್ತಿ ಅಳವಡಿಸಿಕೊಂಡಲ್ಲಿ ಕಬ್ಬಿನ ಇಳುವರಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರು ಮುಂದಾಗಬೇಕು. ಸಾಧನೆ ಮಾಡಿದ ರೈತರನ್ನು ಗುರ್ತಿಸಿ ಅಂತವರನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸುವುದು ನಮ್ಮ ಧರ್ಮ ಎಂದರು.
ಆದರೆ ನಮ್ಮ ರೈತರು ೧೨ ತಿಂಗಳ ಅವಧಿ ಮುಗಿದ ಕಬ್ಬನ್ನು ಸಾಗಿಸಿ ಅವಧಿಗೆ ಮುಂಚೆ ಕಟಾವು ಮಾಡಿದಲ್ಲಿ ಇಳುವರಿಯಲ್ಲಿ ಕಡಿಮೆ ಜೊತೆಗೆ ರಿಕವರಿ ಕೂಡಾ ಬರುತ್ತದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡಾ ೭೦ರಿಂದ ೮೦ ರಷ್ಟು ಜನ ಕೃಷಿ ಅವಲಂಬಿತರಾಗಿದ್ದಾರೆ. ಅದಕ್ಕಾಗಿ ಹಿಂದಿನ ಪ್ರಧಾನಿ ಜೈ ಜವಾನ ಜೈ ಕಿಸಾನ ಎಂಬ ಘೋಷ ವಾಖ್ಯೇ ನೀಡಿದ್ದಾರೆ.
ನಮ್ಮ ಪೂರ್ವಾಜರು ಹೇಳುವ ಹಾಗೆ ಯಾರಲ್ಲಿ ಅನನುಭವ ಇದೆ ಅವರಲ್ಲಿ ಅಮೃತವಿದೆ. ಮುಂದಿನ ಪಿಳಿಗೆಗಾಗಿಯಾದರು ಭುಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅಷ್ಟೆ ಮುಖ್ಯ ಇಲ್ಲಾಂದರೆ ಉಳಿಗಾಲ ಇಲ್ಲ. ನಮ್ಮ ಭಾಗದ ಬಹತೇಕ ಎಲ್ಲ ಕೇರೆಗಳನನ್ನು ತುಂಬಿದರಿಂದ ಆ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂದು ಕಬ್ಬು ಬೆಳೆಯಲಾಗುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಿ ಯಾರ ಹಂಗು ಇಲ್ಲದೆ ಬದುಕು ಸಾಗಿಸಲು ಸಾಧ್ಯ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ ಮಾತನಾಡಿದರು. ಸಂಜಯ ಪಾಟೀಲ, ಕಬ್ಬು ಸಂಶೊಧನಾ ಕೇಂದ್ರದ ನಿರ್ದೇಶಕ ರಾಜಗೋಪಾಲ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ|| ಶಿವಶಂಕರ ಮೂರ್ತಿ, ಎಮ್.ಆರ್.ಪಾಟೀಲ, ಶ್ರೀಮಂತ ಇಂಡಿ, ಸಹಾಯ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಮುಂತಾದವರು ಮಾತನಾಡಿದರು.
ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಪಾರ್ವತಿ ಕುರ್ಲೆ, ಡಾ|ಎಂ.ಎಂ ಜಾಮದಾರ, ರೇವಗೊಂಡಪ್ಪ ಬಿರಾದಾರ, ರಾಜಕುಮಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ಬಾಬುಸಾವಕಾರ ಮೇತ್ರಿ, ಕಾರ್ಖಾನೆ ಎಮ್ ಡಿ ಭಾಗ್ಯಶ್ರೀ.ಕೆ, ಶಿವಪೂರ ಬಿರಾದಾರ, ಬಸಪ್ಪ ಇಂಡಿ, ಗುರುನಾಥ ಬಗಲಿ, ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಸೇರಿದಂತೆ ನಾದ ಕೆಡಿಯ ಜಮಖಂಡಿ ಶುಗರ್‍ಸ್, ಹಿರೇಬೆವನೂರ ಶುಗರ್‍ಸ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.


