ಬೆಳಗಾವಿ, (ಡಿ.11): ಬೆಳಗಾವಿ ವಿಮಾನ ನಿಲ್ದಾಣ (ಐಏಕ್ಸ್‌ಜಿ) ಪ್ರಯಾಣಿಕರಿಗೆ ತಿಳಿಸುವುದೆನೆಂದರೆ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿದ್ದು, ಯಾವುದೇ ಅನಿರೀಕ್ಷಿತ ರದ್ದತಿಗಳಿಲ್ಲ ಎಂದು ಭರವಸೆ ನೀಡಲಾಗಿದೆ. ಎಲ್ಲಾ ವಿಮಾನಗಳು ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತಿದ್ದು, ಇತ್ತೀಚಿನ ಪ್ರತ್ಯೇಕ ರದ್ದತಿಗಳಿಂದಾಗಿ ಪ್ರಯಾಣಿಕರು ಭಯಭೀತರಾಗುವ ಅಗತ್ಯವಿಲ್ಲ.
ಸದರಿ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ, ಅಹಮದಾಬಾದ, ಜೈಪುರ, ಮುಂಬೈ ಮತ್ತು ದೆಹಲಿಗೆ ಸಂಪರ್ಕ ಹೊಂದಿದೆ. ಇಂಡಿಗೋ ಏರ್‌ಲೈನ್ಸ್ ಡಿಸೆಂಬರ್ ೧೪ ರಿಂದ ನವದೆಹಲಿಗೆ ನಿಯಮಿತ ಕಾರ್ಯಾಚರಣೆಗಳನ್ನು ಪುನರಾರಂಭಿಸಲಿದೆ ಎಂದು ಘೋಷಿಸಲಾಗಿದೆ. ವಿಮಾನ ನಿಲ್ದಾಣವು ವಿಶ್ವಾಸಾರ್ಹ ಸೇವೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

